RNI NO. KARKAN/2006/27779|Thursday, March 13, 2025
You are here: Home » breaking news » ಗೋಕಾಕ:ನಗರಸಭೆಯ ಜವಾಬ್ದಾರಿಯನ್ನು ಯಾರ ಕೈಯಲ್ಲಿ ಕೋಟ್ಟಿದ್ದೆ ಅವರೆ ಜನರಿಗೆ ಮೋಸ ಮಾಡಿದ್ದಾರೆ : ಬಿಜೆಪಿ ಅಭ್ಯರ್ಥಿ ರಮೇಶ ವಾಗ್ದಾಳಿ

ಗೋಕಾಕ:ನಗರಸಭೆಯ ಜವಾಬ್ದಾರಿಯನ್ನು ಯಾರ ಕೈಯಲ್ಲಿ ಕೋಟ್ಟಿದ್ದೆ ಅವರೆ ಜನರಿಗೆ ಮೋಸ ಮಾಡಿದ್ದಾರೆ : ಬಿಜೆಪಿ ಅಭ್ಯರ್ಥಿ ರಮೇಶ ವಾಗ್ದಾಳಿ 

ನಗರಸಭೆಯ ಜವಾಬ್ದಾರಿಯನ್ನು ಯಾರ ಕೈಯಲ್ಲಿ ಕೋಟ್ಟಿದ್ದೆ ಅವರೆ ಜನರಿಗೆ ಮೋಸ ಮಾಡಿದ್ದಾರೆ : ಬಿಜೆಪಿ ಅಭ್ಯರ್ಥಿ ರಮೇಶ ವಾಗ್ದಾಳಿ

 
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ನ 25 :

 

ಕಳೆದ 25 ವರ್ಷಗಳಿಂದ ನಗರಸಭೆಯ ಜವಾಬ್ದಾರಿಯನ್ನು ಯಾರ ಕೈಯಲ್ಲಿ ಕೋಟ್ಟಿದ್ದೆ ಅವರೆ ಜನರಿಗೆ ಮೋಸ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು

ಸೋಮವಾದಂದು ಸಾಯಂಕಾಲ ನಗರದ ಲಕ್ಕಡಗಲ್ಲಿಯ ಅಹಮ್ಮದ್ ಶಾ ಶಾದಿ ಮಹಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಲ್ಪಸಂಖ್ಯಾತ ಸಮುದಾಯದ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎನ್ ಎ ಮಾಡಲು ನಾನು ಹಣ ಪಡೆದಿಲ್ಲ ಅವರೆ ಭ್ರಷ್ಟಾಚಾರ ಮಾಡಿದ್ದಾರೆ ಬೇಕಾದರೆ ಆಣೆ ಮಾಡಿ ಕೇಳಿ ಎಂದು ಹೆಸರು ಹೇಳದೆ ಕಾಂಗ್ರೆಸ್ ಅಭ್ಯರ್ಥಿ ಸಹೋದರ ಲಖನ್ ವಿರುದ್ಧ ಹರಿಹಾಯ್ದರು
ನಾನು ಕುಟುಂಬದ ಕ್ಯಾಪ್ಟನ್ ಅವರು ಮಾತನಾಡಿದಂತೆ ನಾನು ಮತನಾಡಲು ಆಗುವದಿಲ್ಲ ಮುಂದೆ ಎಲ್ಲವನ್ನು ಸರಿಪಡಿಸುತ್ತೇನೆ ಎಂದು ರಮೇಶ ಜಾರಕಿಹೊಳಿ ಅವರು ಹೇಳಿದರು
ಬದಲಾದ ರಾಜಕೀಯ ಪರಿಸ್ಥಿತಿಯಲ್ಲ ನಾನು ಬಿಜೆಪಿ ಯಿಂದ ಸ್ವರ್ಧಿಸಿದ್ದೇನೆ ಅನಿವಾರ್ಯ ವಾಗಿ ಪಕ್ಷ ತೊರೆದಿದ್ದೇನೆ . ಮುಸ್ಲಿಂ ಜನರು ಒಗ್ಗಟಿನಿಂದ ಮತಹಾಕಬೇಕು ಅಲ್ಪಸಂಖ್ಯಾತರು ನನ್ನ ಕೈ ಬಿಡಬೇಡಿ, ನೀವಲ್ಲರು ನನ್ನ ಜೊತೆ ಇರಬೇಕು . ಮುಸ್ಲಿಂ ಸಮಾಜದ ಅಭಿವೃದ್ಧಿಗೆ ನಾನು ಬದ್ದ ,ಬಿಜೆಪಿಯಲ್ಲಿ ಮುಸ್ಲಿಂ ಪರವಾಗಿ ಧ್ವನಿಯಾಗಿ ಕಾರ್ಯ ಮಾಡುತ್ತೇನೆ ‌ಯಾರು ಭಯ ಪಡದೆ ಮತದಾನ ಮಾಡಬೇಕು ಎಲ್ಲರೂ ಸೇರಿ ನನ್ನನ್ನು 5 ಬಾರಿ ನನ್ನ ಕೈ ಹಿಡಿದಿದ್ದರಿ ಈ ಬಾರಿಯೂ ನನ್ನ ಕೈ ಹಿಡಿಯಬೇಕು ಎಂದು ರಮೇಶ ಜಾರಕಿಹೊಳಿ ಅವರು ಹೇಳಿದರು

ನಗರ ಸಭೆ ಸದಸ್ಯ ಎಸ್.ಎ ಕೊತವಾಲ ಅವರು ಮಾತನಾಡಿ 25 ವರ್ಷಗಳಿಂದ ರಮೇಶ ಅವರನ್ನು 5 ಸಾರಿ ಆಯ್ಕೆ ಮಾಡಿ ಕಳುಹಿಸಿದ್ದಿರಿ ಕಾಂಗ್ರೆಸ್ ನೇತಾರರಿಂದ ಆದ ಅನ್ಯಾಯಗಳಿಂದ ಅವರು ಪಕ್ಷ ತೊರೆದು ಬಂದಿದ್ದಾರೆ ಕೈ ಪಕ್ಷದ ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ ಮತ್ತು ಇತರ ನಾಯಕರಿಂದ ಬೆಸತ್ತು ಅವರು ಹೊರ ಬಂದರು ಯಾರ ಬಗ್ಗೆ ಅವರು ತಮ್ಮ ಸ್ವರ್ವಸ್ವವನ್ನು ತ್ಯಾಗ ಮಾಡಿದ್ದರು ಅವರಿಂದ ಅನ್ಯಾಯ ವಾಯಿತು ರಾಜಕೀಯದಿಂದ ಅವರನ್ನು ಮುಗಿಸುವ ಕಾರ್ಯ ನಡೆಯಿತು ಈಗ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಪಕ್ಷವನ್ನು ಸೇರಿದ್ದಾರೆ
ಎಲ್ಲ ಮುಸ್ಲಿಂ ಅಲ್ಪಸಂಖ್ಯಾತರು ಕೂಡಿ ನಾವು ಮತ ಚಲಾಯಿಸಬೇಕು , ಅರಬಾವಿ, ಹುಕ್ಕೇರಿ ಮತ್ತು ಅಥಣಿ ಮತ್ತು ಕಿತ್ತೂರ ಕ್ಷೇತ್ರಗಳಲ್ಲಿ ಮುಸ್ಲಿಂ ಸಮಾಜದರು ಬಿಜೆಪಿಗೆ ಬೆಂಬಲಿಸಿದ್ದಂತೆ ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸಬೇಕು ಈ ಬಾರಿ ನಾವು ರಮೇಶ ಜಾರಕಿಹೊಳಿ ಅವರನ್ನು ಆಯ್ಕೆಮಾಡುತ್ತಿಲ್ಲ ಬದಲಾಗಿ ಉಪ ಮುಖ್ಯಮಂತ್ರಿ ಯನ್ನು ಮತ್ತು ಹಜ್ ಸಚಿವರನ್ನು ಆಯ್ಕೆಮಾಡುತ್ತಿದ್ದೇವೆ ಎಲ್ಲರೂ ಒಗ್ಗಟಿನಿಂದ ಬಿಜೆಪಿ ಪಕ್ಷಕ್ಕೆ ಮತಹಾಕಿ ರಮೇಶ ಜಾರಕಿಹೊಳಿ ಗೆಲ್ಲಿಸಬೇಕೆಂದು ಕೊತವಾಲ ವಿನಂತಿಸಿದರು
ಇದೇ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಅವರನ್ನು ಮುಸ್ಲಿಂ ಸಮಾಜ ಭಾಂಧವರು ಸತ್ಕರಿಸಿ ,ಗೌರವಿಸಿದರು
ಈ ಸಂದರ್ಭದಲ್ಲಿ ಶಶಿಧರ ದೇಮಶೆಟ್ಟಿ , ಎಸ್. ಕೊತವಾಲ , ಅಬ್ಬಾಸ ದೇಸಾಯಿ , ಮಹ್ಮದಯೂಸೂಫ ಅಂಕಲಗಿ , ಜುಬೇರ ತ್ರಾಸಘರ, ಹುಸೇನ ಫನಿಬಂದ , ನೂರ ಬುಡ್ಡೇಬಾಯಿ, ಶಕೀಲ ಧಾರವಾಡಕರ , ಶಫೀ ಜಮಾದಾರ , ಮಕ್ತುಂ ಬಾಗವಾನ, ರಾಜು ಮರಲಿಂಗನವರ ಸೇರಿದಂತೆ ಇತರರು ಇದ್ದರು

Related posts: