ಗೋಕಾಕ:ಅಧಿಕಾರಿಯಿಂದ ಸರಕಾರಿ ವಾಹನ ದುರುಪಯೋಗ : ಗೋಕಾಕದಲ್ಲಿ ಘಟನೆ
ಅಧಿಕಾರಿಯಿಂದ ಸರಕಾರಿ ವಾಹನ ದುರುಪಯೋಗ : ಗೋಕಾಕದಲ್ಲಿ ಘಟನೆ
ಗೋಕಾಕ ಜು 31: ಸರಕಾರ ಅಧಿಕಾರಿಗಳಿಗೆ ಸರಕಾರಿ ಕೆಲಸ ಕಾರ್ಯಗಳನ್ನು ಮಾಡಲು ವಾಹನ ನೀಡಿರುತ್ತದೆ ಆದರೆ ಗೋಕಾಕದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎ ಎ ಹೊನ್ನಾವರ ಅವರ ಸರಕಾರಿ ವಾಹನವನ್ನು ಅವರ ಖಾಸಗಿ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ
ಹೊನ್ನಾವರ ಅವರ ಮಗಳು ಪ್ರತಿನಿತ್ಯ ತರಕಾರಿ ತರಲು, ಇತರೆ ಕೆಲಸಗಳಿಗೆ ಸರ್ಕಾರಿ ವಾಹನ ಬಳಕೆ ಮಾಡುತ್ತಾರೆ. ಈ ಕುರಿತು ಅವರನ್ನು ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಸರ್ಕಾರಿ ವಾಹನವನ್ನು ನಿಮ್ಮ ಮಗಳು ಬಳಕೆ ಮಾಡುತ್ತಾರೆ ಎಂದು ಕೇಳಿದರೆ, ಅವರು ಬಳಕೆ ಮಾಡುವುದಿಲ್ಲ ಎಂದು ಅಸಂಬದ್ಧವಾಗಿ ಹೇಳಿಕೆ ನೀಡುತ್ತಾರೆ ಎಂದು ಆರೋಪಿಸಲಾಗಿದೆ.