RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಚುನಾವಣೆ ಮುಗಿದ ನಂತರ ರಮೇಶ ಒಂದುವಾರ ಕೂಡಾ ಬಿಜೆಪಿ ಪಕ್ಷದಲ್ಲಿ ಇರುವದಿಲ್ಲ : ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ ಭವಿಷ್ಯ

ಗೋಕಾಕ:ಚುನಾವಣೆ ಮುಗಿದ ನಂತರ ರಮೇಶ ಒಂದುವಾರ ಕೂಡಾ ಬಿಜೆಪಿ ಪಕ್ಷದಲ್ಲಿ ಇರುವದಿಲ್ಲ : ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ ಭವಿಷ್ಯ 

ಚುನಾವಣೆ ಮುಗಿದ ನಂತರ ರಮೇಶ ಒಂದುವಾರ ಕೂಡಾ ಬಿಜೆಪಿ ಪಕ್ಷದಲ್ಲಿ ಇರುವದಿಲ್ಲ : ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ ಭವಿಷ್ಯ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 27 :

 
ಚುನಾವಣೆ ಮುಗಿದ ನಂತರ ರಮೇಶ ಒಂದುವಾರ ಕೂಡಾ ಬಿಜೆಪಿ ಪಕ್ಷದಲ್ಲಿ ಇರುವದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ ಭವಿಷ್ಯ ನುಡಿದರು
ಬುಧವಾರದಂದು ನಗರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಗೃಹ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು
ಅನರ್ಹ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ಈ ಚುನಾವಣೆ ತಂದಿದ್ದಾರೆ, ಯಾವ ಅಭಿವೃದ್ಧಿಗಾಗಿ ಈ ಚುನಾವಣೆ ಬಂದಿಲ್ಲ ಅವರು ಪಕ್ಷಾಂತರಿಗಳು ಏನು ಮಾಡಿದ್ದಾರೆ ಎಂಬುದನ್ನು ಜನರು ನೋಡಿದ್ದಾರೆ. ರಮೇಶ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಬಾಗಿಲು ಬಂದಾಗಿದೆ, ಜೆಡಿಎಸ್ ಪಕ್ಷಕ್ಕೆ ಅವರು ಹೊಗುವದಿಲ್ಲ ಮುಂದೆ ಅವರು ಸ್ವಂತ ಪಕ್ಷವನ್ನು ಕಟ್ಟಬೇಕಾಗುತ್ತದೆ ಎಂದು ಭವಿಷ್ಯ ನುಡಿದ ಗುಂಡುರಾವ ಅವರು ಅನರ್ಹರ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ. ರೀತಿ ನೀತಿ-ನಿಯಮ ಇಲ್ಲದೆ ಈ ಕಾರ್ಯ ಮಾಡಿದ್ದಾರೆ, ರಾಜ್ಯದ ಬುದ್ದಿಜೀವಿಗಳು, ರಾಜಕೀಯ ತಜ್ಞರು ಇದನ್ನು ದಿಕ್ಕರಿಸಿದ್ದಾರೆ. ಭಾರತೀಯ ಜನತಾ ಪಕ್ಷ ಒಂದು ಕ್ಷೇತ್ರದಲ್ಲಿ ಗೆಲುವದಿಲ್ಲ, ಪ್ರವಾಹ ಪರಿಸ್ಥಿಯಲ್ಲಿಯೂ ಸಹ ಬಿಜೆಪಿ ಸರಕಾರ ಎಡವಟ್ಟು ಮಾಡಿದೆ ಕಳೆದ 2 ತಿಂಗಳನಿಂದ ವಿಧಾನಸೌಧದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು ಅಲ್ಲಿ ಯಾರು ಇಲ್ಲ, .ಚುನಾವಣೆಯ ಖರ್ಚನ್ನು ಸರಿದೂಗಿಸಲು ವರ್ಗಾವಣೆ ದಂಧೆ ಜೊರಾಗಿದೆ, ಈಗ .ರಾಜ್ಯಕ್ಕೆ ಒಂದು ಕೆಟ್ಟ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು
ಗೋಕಾಕ ಮತಕ್ಷೇತ್ರದಲ್ಲಿ ಲಖನ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಕಳೆದ ನಾಲ್ಕು ತಿಂಗಳನಿಂದ ಕೆಲಸ ಮಾಡುತ್ತಿದ್ದಾರೆ ಲಖನ ಭಾರಿ ಬಹುಮತದಿಂದ ಈ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಸ್ವಾರ್ಥಕ್ಕೆ ಸರಕಾರ ಕೆಡವಿದ ಪಕ್ಷಾಂತರಿಗಳಿಗೆ ಮಂತ್ರಿಯಾಗುವದೆ ಗುರಿ .ಕಾಂಗ್ರೆಸದಲ್ಲಿ ರಮೇಶ್ ಜಾರಕಿಹೊಳಿ ಅವರು ಮಂತ್ರಿ ಆಗಿದ್ದರು ಕಾಂಗ್ರೆಸ್ ಪಕ್ಷ ಅವರಿಗೆ ಅಧಿಕಾರ ಕೊಟ್ಟ ಬೆಳಿಸಿತ್ತು ಆದರೆ ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ ಅವರು ಮಂತ್ರಿ ಯಾಗಿದ್ದಾಗ ರಾಜ್ಯದ ತುಂಬಾ ಅವರು ಪ್ರವಾಸ ಮಾಡಿಲ್ಲ, ಅವರ ಸಾಧನೆ ಶೂನ್ಯವಾಗಿದೆ ತಮ್ಮ ಜಿಲ್ಲೆಯಲ್ಲಿಯೆ ಅವರು ಏನು ಮಾಡಿಲ್ಲಾ ಜನರ ಸಮಸ್ಯೆಗಳಿಗೆ ಸ್ವಂದಿಸದವರು ಉಪಮುಖ್ಯಮಂತ್ರಿಯಾದರೇನೂ ಪ್ರಧಾನಿ ಆದರೇನೂ. ಸ್ವಾರ್ಥಗೋಸ್ಕರ ಪಕ್ಷ ಬಿಟ್ಟು ಹೋಗಿದ್ದಾರೆ ಇಂತÀಹ ರಾಜಕಾರಣಿಗಳಿಗೆ ಜನ ತಿರಸ್ಕಾರ ಮಾಡಬೇಕು ಎಂದು ಮತದಾರರಲ್ಲಿ ವಿನಂತಿಸಿದರು.
ಸತೀಶ ಜಾರಕಿಹೊಳಿ ಅವರ ಮೇಲೆ ನಮಗೆ ವಿಶ್ವಾಸವಿರುವದರಿಂದ ಗೋಕಾಕ ಮತಕ್ಷೇತ್ರ ಉಸ್ತುವಾರಿಗಳು ಬಂದಿಲ್ಲ. ರಮೇಶ್ ಜಾರಕಿಹೊಳಿ ಅವರಿಗೆ ಸೋಲಿನ ಭೀತಿಯಿಂದ ಅವರು ರಾಜ್ಯದ ನಾಯಕರನ್ನು ಕರೆ ತಂದಿದ್ದಾರೆ ಅವರು ಈ ಚುನಾವಣೆಯಲ್ಲಿ ಅಸಹಾಯಕರಾಗಿದ್ದಾರೆ . ಕಾಂಗ್ರೆಸ ಪಕ್ಷವನ್ನು ಯಾರಿಂದಲೂ ಖಾಲಿ ಮಾಡಲು ಸಾಧ್ಯವಿಲ್ಲ , ಅಂತಹ ಕೆಲಸಕ್ಕೆ ಕೈ ಹಾಕಿದವರು ಅವಮಾನ ಆಗಿದ್ದಾರೆ. ಜನರ ಕೆಲಸ ಮಾಡುತ್ತೇನೆ ವೋಟ ಕೊಡಿ, ಅಭಿವೃದ್ಧಿ ಮಾಡುತ್ತೇನೆ ವೋಟ ಕೊಡಿ ಅನ್ನುತ್ತಿಲ್ಲ, ಬದಲಾಗಿ ಮತದಾರರಿಗೆ ಆಮಿಷ ಒಡ್ಡುವ ಮಾತುಗಳನ್ನು ಆಡಿ ಉಪಮುಖ್ಯಮಂತ್ರಿ ಆಗುತ್ತಾರೆ, ಮಂತ್ರಿಯಾಗುತ್ತಾರೆ ಮತ ನೀಡಿ ಎಂದು ಯಡಿಯೂರಪ್ಪ ಸೇರಿದಂತೆ ಇತರ ನಾಯಕರು ರಮೇಶ್ ಪರವಾಗಿ ಮತ ಕೇಳುತ್ತಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ದಾಖಲಿಸುತ್ತೇª.É ರಮೇಶ ಜಾರಕಿಹೊಳಿ ಅವರಃ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ಯಾರ ಚಮಚಾಗಿರಿ ಮಾಡಿದ್ದಾರಾ ಎಂದು ಪ್ರಶ್ನಿಸಿದ ದಿನೇಶ ಕಾಂಗ್ರೆಸ್ ಪಕ್ಷದಲ್ಲಿ ಚಮಚಾಗಿರಿ ಸಂಪ್ರದಾಯ ಇಲ್ಲ ಎಂದು ಸ್ವಷ್ಠ ಪಡಿಸಿದರು. ಜನರು ಉಪ ಚುನಾವಣೆಯಲ್ಲಿ ಅನರ್ಹರಿಗೆ ತಕ್ಕ ಪಾಠ ಕಲಿಸಲ್ಲಿದ್ದಾರೆ ಕಾಂಗ್ರೆಸ್ ಪಕ್ಷ 11 ರಿಂದ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು,
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ, ಆಂದ್ರ ಪ್ರದೇಶ ,ಕಾಂಗ್ರೆಸ್ ಮಾಜಿ ಶಾಸಕ ವಂಶಿ ರೆಡ್ಡಿ, ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಾಕೀರ ನಧಾಪ ಇದ್ದರು.

Related posts: