ಗೋಕಾಕ:ಸಮ್ಮಿಶ್ರ ಸರಕಾರಗಳಿಗೆ ಬೇಸತ್ತು ಉಪ ಚುನಾವಣೆ ಬಂದಿದೆ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ
ಸಮ್ಮಿಶ್ರ ಸರಕಾರಗಳಿಗೆ ಬೇಸತ್ತು ಉಪ ಚುನಾವಣೆ ಬಂದಿದೆ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 29 :
ಸಮ್ಮಿಶ್ರ ಸರಕಾರಗಳಿಗೆ ಬೇಸತ್ತು ಉಪ ಚುನಾವಣೆ ಬಂದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಅರವಿಂದ ಲಿಂಬಾವಳಿ ಹೇಳಿದರು
ಶುಕ್ರವಾರದಂದು ಸಂಜೆ ನಗರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಎನ್ಎಸ್ಎಫ್ ಗೃಹ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು ಸಮ್ಮಿಶ್ರ ಸರಕಾಕ್ಕೆ ಬೇಸತ್ತು ಅಲ್ಲಿನ ಶಾಸಕರ ತಮ್ಮ ಕ್ಷೇತ್ರಗಳು ಅಭಿವೃದ್ಧಿ ಆಗಿಲ್ಲ ಎಂದು ಹೊರ ಬಂದ ಪರಿಣಾಮ ಉಪ ಚುನಾವಣಾ ಬಂದಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿ ಸರಕಾರವನ್ನು ಬಿಳೋದಕ್ಕೆ ಬಿಡೋದಿಲ್ಲ , ಬಿಜೆಪಿ ಸರಕಾರವನ್ನು ಬೆಂಬಲಿಸುತ್ತೇನೆ ಎಂದು ಹೇಳಿ ಏಕರೂಪದ ಸರಕಾರ ನಡೆಯಬೇಕೆಂದು ಬಸಿದ್ದಾರೆ ಆದರೆ ಸೋನಿಯಾ ಗಾಂಧಿ ಅವರು ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರಕಾರ ರಚನೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಇದು ಅವರ ದುರಾಡಳಿತನವನ್ನು ಎತ್ತಿ ತೋರಿಸುತ್ತದೆ ಎಂದ ಲಿಂಬಾವಳಿ ಮಾಜಿ ಸ್ಪೀಕರ್ ರಮೇಶ್ ಕುಮಾರ ಬಗ್ಗೆ ಅಪಾರ ಗೌರವವಿದೆ ಆದರೆ ಅವರು ಅನರ್ಹರು ಎಂದು ಅಸಂವಿಧಾನಿಕ ಪದ ಬಳಕೆ ಮಾಡುತ್ತಿದ್ದಾರೆ ಇದರಿಂದ ಕಾಂಗ್ರೆಸ್ ಪಕ್ಷ ಹತ್ತಾಶಯ ವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಸ್ವರ್ದಾಳುಗಳಿಗೆ ಅನಗತ್ಯವಾದ ಪದಗಳನ್ನು ಬಳಸಿ ಮಾತನಾಡುತ್ತಿದ್ದಾರೆ ಇದು ಕಾಂಗ್ರೆಸ್ ಪಕ್ಷದ ಅಸ್ಥಿರತೆ ತೋರಿಸುತ್ತದೆ. ಎಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಕಳೆದು ಹೊಗುತ್ತೆ ಎಂಬ ಭೀತ್ತಿಯಲ್ಲಿ ಅವರು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.
ಉಪ ಚುನಾವಣೆಯ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಪ್ರಚಂಡ ಬಹುಮತ ಸಾಧಿಸಿ ಬರುವ ದಿನಗಳಲ್ಲಿ ಯಡಿಯೂರಪ್ಪ ನೇತೃತ್ವದ ಸ್ಥಿರ ಸರಕಾರ ಸ್ಥಾಪನೆಯಾಗುತ್ತದೆ. ಗೋಕಾಕ ಮತಕ್ಷೇತ್ರದಲ್ಲಿಯೂ ಸಹ ನಮ್ಮ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ ಅವರು ಹೇಳೋದಕ್ಕೆ ಇರುವದು ಬರಿ ಹೇಳುತ್ತಾರೆ ಎಂದು ಹೆಬ್ಬಾಳ್ಕರ ಅವರಿಗೆ ಟಾಂಗ್ ನೀಡಿದರು
ನೆರೆ ಪರಿಹಾರದ ಬಗ್ಗೆ ಕೇಳಲಾದ ಪ್ರಶ್ನೆ ಒಂದಕ್ಕೆ ಉತ್ತರಿಸಿದ ಲಿಂಬಾವಳಿ ಅವರು ಈಗಾಗಲೇ ನೆರೆ ಸಂತ್ರಸ್ತರಿಗೆ ನಮ್ಮ ಸರಕಾರದಿಂದ ಮನೆ ಬಿದ್ದವರಿಗೆ 5 ಲಕ್ಷ ಪರಿಹಾರ ಧನ ಘೋಷಿಸಲಾಗಿದ್ದು , ತಕ್ಷಣದಲ್ಲಿ 1 ಲಕ್ಷ ಬಿಡುಗಡೆ ಮಾಡಲಾಗಿದೆ ಅಲ್ಲದೆ ಪ್ರತಿ ತಿಂಗಳು ಮನೆ ಬಾಡಿಗೆಗೆ 5 ಸಾವಿರ ನೀಡಲಾಗುತ್ತಿದೆ ಎಂದು ಹೇಳಿದರು. ದೇಶದಲ್ಲಿ ಈಗ ದೃವಿಕರಣ ನಡೆಯುತ್ತಿದೆ . ಮಹಾರಾಷ್ಟ್ರದಲ್ಲಿ ನಮಗೆ ತಾತ್ಕಾಲಿಕ ಹಿನ್ನಡೆಯಿಗಿದೆ ಮುಂದೆ ನಮಗೆ ಜಯ ಸಿಗಲಿದೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ನಾಯಕರು ವ್ಯಕ್ತಿ ಹರಣ ಮತ್ತು ಸುಳ್ಳು ಹೇಳುವಲ್ಲಿ ನಿಸ್ಸಮರು . ಅವರು ಬಗ್ಗೆ ನಾವು ತೆಲೆ ಕೆಡೆಸಿಕೊಳ್ಳುವದಿಲ್ಲ ಬಿಜೆಪಿಯ ಆಂತರಿಕ ವರದಿಯಂತೆ ನಮಗೆ 15 ಕ್ಷೇತ್ರದಲ್ಲಿ ಗೆಲ್ಲುವು ದೊರೆಯಲಿದ್ದೆ ಎಂದು ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ), ಧನಜಯ ಜಾಧವ , ಶಶಿಧರ ದೇಮಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು