ಗೋಕಾಕ:ಉಪ ಚುನಾವಣೆಯ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ : ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ
ಉಪ ಚುನಾವಣೆಯ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ : ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 5 :
ಉಪ ಚುನಾವಣೆಯ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು
ಗುರುವಾರದಂದು ತಮ್ಮ ಹಕ್ಕು ಚಲಾಯಿಸಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಯಡಿಯೂರಪ್ಪ ಅವರನ್ನು ಬರುವ ಮೂರುವರೇ ವರ್ಷಗಳ ಕಾಲ ಮುಖ್ಯಮಂತ್ರಿ ಮಾಡಲು ರಾಜ್ಯದ ಜನರು ಬಿಜೆಪಿ ಪಕ್ಷಕ್ಕೆ ಆರ್ಶಿವಾದ ಮಾಡಲಿದ್ದಾರೆ. ಒಂದು ಸ್ಥಾನದಲ್ಲಿ ಬಿಜೆಪಿ ಗೆಲುವದು ಸ್ವಲ್ಪ ಕಷ್ಟವೆಂದು ತಿಳಿದು ಬಂದಿದೆ ಆ ಸ್ಥಾನ ಸೋತರೆ ಅವರನ್ನು ಎಂ.ಎಲ್.ಸಿ ಮಾಡಿ ಮಂತ್ರಿ ಮಾಡಲು ಪ್ರಯತ್ನಿಸಲಾಗುವದು ಎಂದು ಹೇಳಿದ ರಮೇಶ ಸತೀಶ ಜಾರಕಿಹೊಳಿ ನನ್ನನ್ನು ಬಾಲ್ಯದಿಂದಲೇ ವಿರೋಧಿಸುತ್ತಾ ಬಂದಿದ್ದಾರೆ ಅವರು ವಿರೋಧಿಸಿದಷ್ಟು ನಾನು ಬೆಳೆದಿದ್ದೇನೆ ಅದಕ್ಕಾಗಿ ಅವನನ್ನು ನಾನು ಅಭಿನಂದಿಸುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಲಕ್ಷ್ಮೀ ಹೆಬ್ಬಾಳ್ಕರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಮೇಶ ಬಸ್ ಸ್ಟ್ಯಾಂಡ್ ಹೂ ಮಾರಿ , ಎಸ್ ಟಿ ಡಿ ಬೂತನಲ್ಲಿ ಚಿಲ್ಲರೆ ಏಣಿಸಿದ ಹೆಣ್ಣು ಮಗಳ ಬಗ್ಗೆ ನಾನು ಹೆಚ್ಚೆನ್ನು ಮಾತನಾಡಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ಲಖನ್ ಜಾರಕಿಹೊಳಿ ಬಗ್ಗೆ ನನಗೆ ಗೊತ್ತಿರಲಿಲ್ಲ. ಗೋಕಾಕ್ ನಲ್ಲಿ ಬರಿ ಸಹೋದರರ ನಡುವೆ ಜಗಳ ಹಚ್ಚಿದ್ದಾನೆ.ಅವನ ನೆರಳು ಸಹ ನನ್ನ ಜತೆಗೆ ಬೇಡ. ಹರಾಮಿ ದುಡ್ಡು ಖಾಲಿ ಮಾಡಲು ಲಖನ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾನೆ ಎಂದು ಪ್ರತಿಸ್ವರ್ಧಿ ಸಹೋದರ ಲಖನ ವಿರುದ್ಧ ಕಿಡಿಕಾರಿದರು .ಅಂಬಿರಾವ್ ಪಾಟೀಲ್ ರನ್ನು ಇದೇ ಚುನಾವಣೆಯಲ್ಲಿ ಸ್ವರ್ಧೆ ಮಾಡಿಸುತ್ತಿದ್ದೆ ಆದರೆ ಈ ಬಾರಿ ರಾಜ್ಯದ ಜನತೆಗೆ ನನ್ನ ಅವಶ್ಯಕತೆ ಇದೆ ಎಂದು ನಾನು ಸ್ವರ್ಧೆ ಮಾಡಿದೆ ಇಲ್ಲದಿದ್ದರೆ ಅಂಬಿರಾವ ಪಾಟೀಲ ಅವರನ್ನೇ ಲಖನ್ ವಿರುದ್ಧ ಸ್ವರ್ಧೆಗೆ ಇಳಿಸಿ ಲಖನ ಮತ್ತು ಸತೀಶನನ್ನು ಸೋಲಿಸುತ್ತಿದ್ದೆ ಎಂದು ಸಹೋದರರಿಗೆ ಟಾಂಗ್ ನೀಡಿದರು.
ಬೆಳಗಾವಿ ಜಿಲ್ಲೆಯ ಉಸಾಬರಿ ಬಿಟ್ರೆ ಡಿಕೆಶಿ ನನ್ನ ಆತ್ಮೀಯ ಸ್ನೇಹಿತ ಇಲ್ಲದಿದ್ದರೆ ನಮ್ಮ ಹೋರಾಟ ನಿರಂತರ ಎಂದು ರಮೇಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಗುಂಡುರಾವ ಒಬ್ಬ ನಾಲಾಯಕ ಎಂದು ಜರಿದ್ ರಮೇಶ ಸಿದ್ದರಾಮಯ್ಯ ಅವರು ನನ್ನ ವಿರುದ್ಧ ವಯಕ್ತಿಕ ಆರೋಪ ಮಾಡಿಲ್ಲ ಆದ್ದರಿಂದ ಡಿ 6 ಪ್ರೇಸ್ ಮಿಟ್ಟ ಕ್ಯಾನ್ಸಲ್ ಮುಂದಿನ ಚುನಾವಣೆ ಅಷ್ಟೋತಿಗೆ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆ ತರಲು ಪ್ರಯತ್ನಿಸಲಾಗುವದು ಎಂದು ಹೇಳಿದರು