ಗೋಕಾಕ:ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಮನೋಭಾವವನ್ನು ಬೆಳಸಿಕೋಳಬೇಕು : ಶ್ರೀಮತಿ ರಾಜೇಶ್ವರಿ ಈರನಟ್ಟಿ
ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಮನೋಭಾವವನ್ನು ಬೆಳಸಿಕೋಳಬೇಕು : ಶ್ರೀಮತಿ ರಾಜೇಶ್ವರಿ ಈರನಟ್ಟಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 7 :
ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಮನೋಭಾವವನ್ನು ಬೆಳಸಿಕೊಂಡು ಪರಿಸರ ರಕ್ಷಣೆಗೆ ಮುಂದಾಗುವಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ರಾಜೇಶ್ವರಿ ಈರನಟ್ಟಿ ಹೇಳಿದರು.
ಶನಿವಾರದಂದು ನಗರದ ಹೊರವಲಯದಲ್ಲಿರುವ ಅರಣ್ಯ ಇಲಾಖೆ ಸಸ್ಯ ಪಾಲನಾಲಯಕ್ಕೆ ಇಲ್ಲಿಯ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ವಿದ್ಯಾರ್ಥಿಗಳ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಿಡಮರಗಳನ್ನು ಉಳಿಸಿ-ಬೆಳೆಸಿ ಪರಿಸರ ರಕ್ಷಿಸುವಂತೆ ತಿಳಿಸಿದರು.
ಸಸಿಗಳನ್ನು ಬೆಳೆಸುವ ಕುರಿತು ಮಾಹಿತಿಯನ್ನು ನೀಡುತ್ತಾ ಕೆಂಪುಮಣ್ಣು, ಮರಳು ಹಾಗೂ ಗೊಬ್ಬರಗಳನ್ನು ಪಾಲಿಥಿನ್ ಚೀಲಗಳಲ್ಲಿ ಬೆರೆಸಿ ಬೀಜಗಳನ್ನು ಹಾಕಿ ಬೆಳೆಸಲಾಗುತ್ತದೆ. ಬೆಳೆದ ಆ ಸಸಿಗಳನ್ನು ಮಳೆಗಾಲದಲ್ಲಿ ನೆಟ್ಟು ಅವುಗಳಿಗೆ ಪೋಷಣೆ ಮಾಡಿ ಮರಗಳನ್ನಾಗಿ ಬೆಳಸಲಾಗುತ್ತದೆ. ಮಕ್ಕಳಂತೆ ಬೆಳೆಸಿದ ಮರಗಳನ್ನು ಕಡಿಯಬಾರದು. ಇದನ್ನು ವಿದ್ಯಾರ್ಥಿಗಳು ಇತರರಲ್ಲಿ ಅರಿವು ಮೂಡಿಸಿ ಅರಣ್ಯವನ್ನು ರಕ್ಷಿಸುವುದರೊಂದಿಗೆ ಕಾಡನ್ನು ಹಾಗೂ ನಾಡನ್ನು ಉಳಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ, ಅರಣ್ಯ ರಕ್ಷಕ ಎಸ್.ಜಿ.ತಾವಂಶಿ, ಮುಖ್ಯೋಪಾದ್ಯಾಯಿನಿ ಲಕ್ಷ್ಮೀ ಹಿರೇಮಠ, ಶಿಕ್ಷಕ ಪ್ರಕಾಶ ಪಾಟೀಲ ಇದ್ದರು.