RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ವಿಶ್ವ ಮಾನವ ಸಂದೇಶವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ : ಡಾ. ರೇಖಾ ಹಳೆಮನಿ

ಗೋಕಾಕ:ವಿಶ್ವ ಮಾನವ ಸಂದೇಶವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ : ಡಾ. ರೇಖಾ ಹಳೆಮನಿ 

ವಿಶ್ವ ಮಾನವ ಸಂದೇಶವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ : ಡಾ. ರೇಖಾ ಹಳೆಮನಿ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 10 :

 

ವಿಶ್ವ ಮಾನವ ಸಂದೇಶವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ 20ನೇ ಶತಮಾನದ ಮಹಾನ ಸಾಹಿತಿ ಹಾಗೂ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ ಎಂದು ಡಾ. ರೇಖಾ ಹಳೆಮನಿ ಅವರು ಹೇಳಿದರು.
ಇತ್ತಿಚೆಗೆ ನಗರದ ಡಾ. ಮದಭಾಂವಿ ಅವರ ಸಭಾ ಭವನದಲ್ಲಿ ಭಾವಯಾನ ಮಹಿಳಾ ಸಾಹಿತ್ಯ ಸಾಂಸ್ಕøತಿಕ ವೇದಿಕೆಯವರು ಹಮ್ಮಿಕೊಂಡ ಕುವೆಂಪು ಅವರ ವೈಚಾರಿಕ ಸಾಹಿತ್ಯದ ಚಿಂತನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕನ್ನಡ ಭಾಷೆಯನ್ನು ಸಮೃದ್ಧಗೊಳಿಸುವಲ್ಲಿ ಕುವೆಂಪು ಅವರ ಪಾತ್ರ ಅತಿ ಮಹತ್ವದಾಗಿದೆ. ಪ್ರಾಧ್ಯಾಪಕರಾಗಿ ತಮ್ಮ ಆರಂಭಿಸಿದ ಅವರು ಪ್ರಾಚಾರ್ಯರಾಗಿ, ಉಪಕುಲಪತಿಗಳಾಗಿ ನಿವೃತ್ತಿಯನ್ನು ಹೊಂದಿದ್ದ ಅವರು, ಮಾನಸ ಗಂಗೋತ್ರಿ ವಿಶ್ವ-ವಿದ್ಯಾಲಯವನ್ನು ಕಟ್ಟಿ ಬೆಳೆಸಿ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆಂದು ತಿಳಿಸಿದರು.
ವೈಚಾರಿಕತೆಯೆಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಹೋಗುವ ಪಯಣವಾಗಿದೆ. ಮೂಢನಂಬಿಕೆಗಳಿಂದ ಹೊರಬರಬೇಕು. ಶಿಕ್ಷಣ ಸಂಸ್ಥೆಗಳೆಂದರೆ ಸುಟ್ಟ ಇಟ್ಟಿಗೆಗಳಿಂದ ಕಟ್ಟಿದ ಕಟ್ಟಡಗಳಾಗದೇ, ಅಂಧಾಚರಣೆಗಳ ಸಂಪ್ರದಾಯಗಳಾಗದೇ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಗಟ್ಟಿಯಾಗಿ ರೂಪಿಸುವ ಕಮ್ಮಟಗಳಾಗಬೇಕು ಎನ್ನುವ ಕುವೆಂಪು ಅವರ ವಾಣಿಯನ್ನು ಆಚರಣೆಗೆ ತರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ವಮಹಾನಂದಾ ಪಾಟೀಲ, ಭಾರತಿ ಮದಭಾಂವಿ, ಪುಷ್ಪಾ ಮುರಗೋಡ, ಮಂಗಲಾ ಬೆಟಗೇರಿ, ಮಹಾನಂದಾ ಹೊಸಮನಿ, ವೀಣಾ ತಮ್ಮಣ್ಣಿ, ಶೀವಲೀಲಾ ಪಾಟೀಲ, ರಾಜಶ್ರೀ ತೋಟಗಿ, ವಿನುತಾ ನಾವಲಗಿ, ಗಣ್ಯರಾದ ವಸಂತ ಕುಲಕರ್ಣಿ, ಶಕುಂತಲಾ ಹಿರೇಮಠ, ಡಾ. ಸಿ.ಕೆ.ನಾವಲಗಿ ಸೇರಿದಂತೆ ಅನೇಕರು ಇದ್ದರು.

Related posts: