ಮೂಡಲಗಿ:ಸಹಕಾರಿ ಸಂಘಗಳಿಂದ ಕೇಂದ್ರ ಸರಕಾರದ ಕಾಯ್ದೆ ವಿರೋಧಿಸಿ ಮೂಡಲಗಿಯಲ್ಲಿ ಬೃಹತ ಪ್ರತಿಭಟನೆ
ಸಹಕಾರಿ ಸಂಘಗಳಿಂದ ಕೇಂದ್ರ ಸರಕಾರದ ಕಾಯ್ದೆ ವಿರೋಧಿಸಿ ಮೂಡಲಗಿಯಲ್ಲಿ ಬೃಹತ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 13 :
ಸಹಕಾರಿ ಸಂಘಗಳ ಮೇಲೆ ಸರಕಾರ ವಿದಿಸಿರುವ ಹೊಸ ಕಾಯ್ದೆಯನ್ನು ವಿರೋಧಿ ಮೂಡಲಗಿ ತಾಲೂಕಾ ಸಹಕಾರ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ಸ್ಟೆಟ್ ಕೋ ಆಪರೇಟಿವ ಸೊಸಾಯಿಟಿ ಅಸೋಸಿಯೇಶನ ಆಶ್ರಯದಲ್ಲಿ ಶುಕ್ರವಾರದಂದು ಪಟ್ಟಣದಲ್ಲಿ ಬೃಹತ ರ್ಯಾಲಿಯೊಂದಿಗೆ ಪ್ರತಿಭಟ್ಟಿಸಿ ಇಲ್ಲಿಯ ತಹಶೀಲ್ದಾರ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿಸಲ್ಲಿಸಿದರು.
ಪ್ರತಿಭಟನಾ ರ್ಯಾಲಿಯು ಕುರುಹಿನಶೆಟ್ಟಿಯ ಸೋಸೈಟಿ ಆವರಣದಲ್ಲಿ ಸಹಕಾರಿ ಸಂಘದ ಪೀತಾಮಹ ಸಿದ್ದನಗೌಡರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಸಹಕಾರಿ ಸಂಘಗಳಿಗೆ ಮಾರಕವಾದ ತೆರಿಗೆ ನೀತಿ ಖಂಡಿಸಿ ಸರಕಾರದ ನೀತಿ ವಿರುದ ಘೋಷಣೆ ಕೂಗುತಾ ಕಲ್ಮೇಶ್ವರ ವೃತ್ತ ಮೂಲಕ ಚನ್ನಮ್ಮ ವೃತ್ತ, ಕರೇಮ್ಮಾ ದೇವಿ ವೃತ್ತ, ಬಸವೇಶ್ವರ ವೃತ್ತ, ಬಾಜಿ ಮಾರ್ಕೆಟ, ಸಂಗಪ್ಪಣ್ಣ ವೃತ್ತ ಮೂಲಕ ಪ್ರತಿಭಟನಾ ರ್ಯಾಲಿ ನಡೆಸಿ ಕಲ್ಮೇಶ್ವರ ವೃತ್ತ ಮತ್ತು ತಹಶೀಲ್ದಾರ ಕಾರ್ಯಾಲಯ ಮುಂದೆ ಸಭೆ ಜರುಗಿತು.
ಸಭೆಯಲ್ಲಿ ಬಿ.ಡಿ.ಸಿ.ಸಿ.ಬ್ಯಾಂಕ ಹಾಗೂ ರಾಜ್ಯ ಸಹಕಾರಿ ಸೊಸಾಯಟಿ ಅಸೋಸಿಯೇಷನ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಮಾತನಾಡಿ. ಕೇಂದ್ರ ಸರಕಾರವು ಸಹಕಾರಿ ಸಂಘಗಳ ವ್ಯವಹಾರವನ್ನು ಬಿಗಿಗೊಳಿಸುತ್ತಿರುವುದರಿಂದ ಸಹಕಾರಿಗಳಿಂದ ಪ್ರತಿಭಟಣೆ, ಹೋರಾಟ ಇದೇ ಮೊದಲ ಬಾರಿಯಾಗಿದ್ದು ಈಗ ಕೇಂದ್ರ ಸರಕಾರವು ಸಹಕಾರಿ ಕ್ಷೇತ್ರಕ್ಕೆ ಮಾರಕವಾಗುವ ಹಲವಾರು ತೆರನಾದ ತೆರಿಗೆ ವಿಧಿಸುತ್ತಿರುವದರಿಂದ ಸಹಕಾರಿ ಕ್ಷೇತ್ರದ ಅಳಿವು-ಉಳಿವಿನ ಪ್ರಶ್ನೆ ತಲೆದೊರಿಂದ ಅನಿವಾರ್ಯವಾಗಿ ಸಹಕಾರಿ ಕ್ಷೇತ್ರದ ಅಳಿವು—ಉಳಿವಿಗಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ, ನಮ ಮನವಿಗೆ ಸರಕಾರ ಸ್ಪಂದಿಸದಿದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲ್ಲಾಗುವುದು ಎಂದರು.
ಚೈತನ್ಯ ಸೋಸೈಟಿಯ ಪ್ರ.ಕಾರ್ಯದರ್ಶಿ ಜಿ.ಎಸ್.ಬಿಜಗುಪ್ಪಿ ಮಾತನಾಡಿ, ಸಹಕಾರಿ ಸಂಘಗಳ ಮೇಲೆ ಕೇಂದ್ರ ಸರಕಾರ ಮತ್ತು ತೆರಿಗೆ ಇಲಾಖೆಯು ಟಿ.ಡಿ.ಎಸ್, ಜಿ.ಎಸ್.ಟಿ, 269 ಎಸ್.ಟಿ.ಪ್ರಕಾರ 2 ಲಕ್ಷ ರೂ ಮಿತಿಯೊಳಗೆ ವ್ಯವಹಾರ ಮಾಡುವುದು ಮತ್ತು 194 ಎನ್ ಪ್ರಕಾರ ರೂ.1 ಕೋಟಿಗೂ ಮಿಕ್ಕಿದ ಹಣ ಪರತ ತಗೆದುಕೊಳ್ಳಲು ಶೇ.2ರಷ್ಟು ಟಿ.ಡಿ.ಎಸ್.ಕಟ್ಟುವುದು ಹೀಗೆ ವಿವಿಧ ರೀತಿಯ ತೆರಿಗೆಗಳನ್ನು ಹೇರಿ ಸಹಕಾರಿ ಸಂಘಗಳ ಅಭಿವೃದ್ದಿಗೆ ಮಾರಕವಾಗುವ ಧೋರಣೆಯನ್ನು ಸರಕಾರ ಕೈ ಬೀಡಬೇಕು ಎಂದ ಅವರು ಕೇಂದ್ರ ಸರಕಾರವು ಸಹಕಾರ ಇಲಾಖೆಯ ರಾಜ್ಯ ಸಚಿವರನ್ನು ನಿಯುಕ್ತಿ ಮಾಡಬೇಕು ಇದರಿಂದ ಆಯಾ ರಾಜ್ಯಗಳ ಸಹಕಾರಿ ಸಂಘಗಳಿಗೆ ಅನುಕೂಲವಾಗುವುದು ಎಂದರು.
ಸ್ಥಳಿಯ ಕುರುಹಿನಶೆಟ್ಟಿ ಸೋಸೈಯಿಟಿಯ ಅಧ್ಯಕ್ಷ ಸುಭಾಸ ಬೆಳಕೂಡ ಮಾತನಾಡಿ, ದೇಶ ಶೇ.90 ಜನರಿಗೆ ಸಹಕಾರಿ ಸಂಘಗಳಿದಂದ ಅನುಕೂಲವಾಗಿದೆ ಎಂದರು.
ಕಲ್ಲೋಳಿ ಮಹಾಲಕ್ಷ್ಮೀ ಸೋಸೈಟಿ ಅಧ್ಯಕ್ಷ ಈರಣ್ಣಾ ಕಡಾಡಿ, ಹೊಸ ತೇರಿಗೆ ಕಾಯ್ದೇ ಅನುಷ್ಠಾನಗೋಳುವ ಮೊದಲೇ ಸಹಕಾರಿ ಸಂಸ್ಥೆಗಳಿದಂದ ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಅಲ್ಲದೆ ದೇಶ ವ್ಯಾಪ್ತಿ ಉಗ್ರ ಹೋರಾಟ ನಡೆದು ಜನ ಪತ್ರಿನಿಧಿಗಳಿಂದ ಸರಕಾರದ ಮೇಲೆ ಒತ್ತಡ ತಂದು ಕಾಯ್ದೆಯನ್ನು ರದ್ದು ಪಡಿಸಬೇಕೆಂದರು.
ಮೂಡಲಗಿ ಶಿವಬೋಧರಂಗ ಸೋಸೈಟಿ ಉಪಾಧ್ಯಕ್ಷ ಪುಲಕೇಶ ಸೋನವಾಲ್ಕರ ಮಾತನಾಡಿ, ಸರಕಾರದ ಹೊಸ ನೀಯಮಾವಳಿಗಳಿಂದ ಜನಸಮಾನ್ಯರಿಗೆ ಅನಾಕೂಲವಾಗುವುದು ಎಂದರು.
ಚೈತನ್ಯ ಸೋಸೈಟಿ ಅಧ್ಯಕ್ಷ ತಮ್ಮಣ್ಣ ಕೆಂಚರಡ್ಡಿ, ಮಹಾಲಕ್ಷ್ಮೀ ಸೋಸೈಟಿ ಉಪಾಧ್ಯಕ್ಷ ಮಲ್ಲಪ್ಪ ಗಾಣಿಗೇರ, ಕುಮಾರೇಶ್ವರ ಸೋಸೈಟಿಯ ಭೀಮಪ್ಪ ಶಿವಾಪೂರ, ನಾಗನೂರ ಸೋಸೈಟಿಯ ಅಧ್ಯಕ್ಷ ಬಸವರಾಜ ತಡಸನವರ, ಜ್ಯೋತಿ ಸೋಸೈಟಿಯ ಅಧ್ಯಕ್ಷ ಮಲ್ಲಪ್ಪ ಮದಗುಣಕಿ, ಬಸವೇಶ್ವರ ಸೋಸೈಟಿಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಮಾತನಾಡಿದರು.
ಪ್ರತಿಭಟನಾ ರ್ಯಾಲಿಯಲ್ಲಿ ಮೂಡಲಗಿ, ಗುರ್ಲಾಪೂರ, ಹಳ್ಳೂರ, ಶಿವಾಪೂರ, ಖಾನಟ್ಟಿ, ಮುನ್ಯಾಳ, ಕಮಲದಿನ್ನಿ, ಧರ್ಮಟ್ಟಿ, ಪಟಗುಂದಿ, ಮುಸಗುಪ್ಪಿ, ಕುಲಗೋಡ, ಯಾದವಾಡ, ನಾಗನೂರ, ಕಲ್ಲೊಳ್ಲಿ ವಿವಿಧ ಗ್ರಾಮಗಳಿಂದ 150ಕ್ಕೂ ಹೆಚ್ಚು ಹಣಕಾಸು ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸೋಸೈಟಿಯ ವ್ಯವಹಾರವನ್ನು ಸ್ಥಗಿತಗೋಳಿಸಿ ಭಾಗವಹಿಸಿದರು.
.