RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕಂಕಣ ಸೂರ್ಯಗ್ರಹಣದ ವೇಳೆ ನೀರಲ್ಲಿ ತಟಸ್ಥ ನಿಂತ ಒಣಕೆ : ಗೋಕಾಕನಲ್ಲಿ ಹಲವು ಕಡೆ ಪ್ರಯೋಗ

ಗೋಕಾಕ:ಕಂಕಣ ಸೂರ್ಯಗ್ರಹಣದ ವೇಳೆ ನೀರಲ್ಲಿ ತಟಸ್ಥ ನಿಂತ ಒಣಕೆ : ಗೋಕಾಕನಲ್ಲಿ ಹಲವು ಕಡೆ ಪ್ರಯೋಗ 

ಕಂಕಣ ಸೂರ್ಯಗ್ರಹಣದ ವೇಳೆ ನೀರಲ್ಲಿ ತಟಸ್ಥ ನಿಂತ ಒಣಕೆ : ಗೋಕಾಕನಲ್ಲಿ ಹಲವು ಕಡೆ ಪ್ರಯೋಗ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 26 :
ಗ್ರಹಣಗಳಿಗೆ ಸಂಬಂಧಿಸಿದಂತೆ ಅನೇಕ ಮೂಢನಂಬಿಕೆಗಳಿವೆ. ಅನೇಕ ಜನರು ಈ ಮೂಢನಂಬಿಕೆಗಳನ್ನು ಪಾಲಿಸುತ್ತಾ ಬಂದಿದ್ದಾರೆ.
ಭೂವಿಯ ಮೇಲೆ ಗೋಚರಿಸುವ ಎಲ್ಲ ಗ್ರಹಣಗಳು ವೈಜ್ಞಾನಿಕವಾಗಿ ಗೋಚರಿಸುತ್ತವೆ ಎಂದು ಕಾಲಕಾಲಕ್ಕೆ ವಿಜ್ಞಾನ ಮತ್ತು ವಿದ್ವಾಂಸರು ಜಗತ್ತಿಗೆ ಸತ್ಯವನ್ನು ಸಾರುತ್ತಲೇ ಬಂದಿದ್ದಾರೆ ಆದರೆ ಈ ಸತ್ಯಗಳು ಸಮಾಜದ ಮೇಲೆ ಅಷ್ಟರ ಮಟ್ಟಿಗೆ ಪ್ರಭಾವ ಬೀರಿಲ್ಲ ಎಂಬುವದು ಹಿಂತಹ ಪ್ರಯೋಗಗಳಿಂದ ಸಾಬೀತಾಗುತ್ತದೆ

ಕಂದಾಚಾರಗಳು ಮತ್ತು ಮೂಢನಂಬಿಕೆಗಳನ್ನು ಹೊಗಲಾಡಿಸಲೆಂದು ವಿಜ್ಞಾನಿಗಳು ಮತ್ತು ವೈಚಾರಿಕ ಮನೊಭಾವನೆ ಹೊಂದಿದ ವಿದ್ವಾಂಸರು ಸಾಕಷ್ಟು ಪ್ರಯತ್ನ ಪಟ್ಟು ಸಮಾಜವನ್ನು ಮೂಢನಂಬಿಕೆಗಳಿಂದ ಹೊರ ತರಲು ಪ್ರಯತ್ನ ಪಡುತ್ತಿದ್ದಾರೆ ಅದಕ್ಕೆ ಪೂರಕವೆಂಬಂತೆ ಶಾಲೆಗಳಲ್ಲಿ ಗ್ರಹಣಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಿ ಗ್ರಹಣದ ವೈಜ್ಞಾನಿಕ ವಿಚಾರವನ್ನು ತಿಳಿಸಲಾಗುತ್ತಿದ್ದರೆ ಗ್ರಹಣದ ದಿನ ಯಾವುದೇ ಆಹಾರ ಸೇವನೆ ಮಾಡಬಾರದು ಎಂಬ ಮೂಢನಂಬಿಕೆಗಳನ್ನು ಹೊಗಲಾಡಿಸಲು ವಿಚಾರವಾದಿಗಳು ಮತ್ತು ವೈಚಾರಿಕ ಸಂಘಟನೆಗಳನ್ನು ಗ್ರಹಣದಿನಗಳಲ್ಲಿ ಸಾಮೂಹಿಕ ಉಟದ ವ್ಯವಸ್ಥೆಯನ್ನು ಏರ್ಪಡಿಸಿ ಮೂಢನಂಬಿಕೆ ಸೆಡ್ಡು ಹೊಡಿಯುತ್ತಿದ್ದಾರೆ ಆದರೆ ಇದ್ಯಾವ ಪ್ರಯೋಗಗಳು ಜನರ ಮನದಲ್ಲಿ ಭದ್ರವಾಗಿ ನೆಲೆ ಉರಲು ಸಾಧ್ಯವಾಗುತ್ತಿಲ್ಲ ಬದಲಾಗಿ ಗ್ರಹಣದ ದಿನಗಳಲ್ಲಿ ಒಣಕೆ ನಿಲ್ಲಿಸುವಂತಹ ಪ್ರಯೋಗಗಳು ಜೋರಾಗಿ ನಡೆದಿವೆ. ಕಂಕಣ ಸೂರ್ಯ ಗ್ರಹಣದ ದಿನದಂದು ನಡೆದ ಹಿಂತಹ ಪ್ರಯೋಗಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಪೂಲ್ ವೈರಲ್ ಆಗುತ್ತಿವೆ.

ಗ್ರಹಣಕ್ಕೆ ಸಂಭಂದ ಪಟ್ಟಂತೆ ಹತ್ತು ಹಲವು ಮೂಢನಂಬಿಕೆಗಳು ಇವೆ ಇವು ಸತ್ಯವೋ ಅಥವಾ ಮಿಥ್ಯವೋ ಎಂಬುದನ್ನು ಅರಿತುಕೊಳ್ಳಲು ನಗರದ ಕೆಲವು ಯುವಕರು ಹಲವು ಕಡೆಗಳಲ್ಲಿ ಸೂರ್ಯಗ್ರಹಣದ ವೇಳೆ ನೀರು ತುಂಬಿದ ಪರಾತಿನಲ್ಲಿ ಒಣಕೆಯನ್ನು ನಿಲ್ಲಿಸಿ ಪ್ರಾತ್ಯಕ್ಷಿಕೆಯನ್ನು ನೋಡಿದ್ದಾರೆ

Related posts: