RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ದೇಶ ಕಂಡ ಅಪ್ರತಿಮ ಸಂತ ಪೇಜಾವರ ಶ್ರೀಗಳನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ : ಕರವೇ ಮುಖಂಡ ಬಸವರಾಜ ಶೋಕ

ಗೋಕಾಕ:ದೇಶ ಕಂಡ ಅಪ್ರತಿಮ ಸಂತ ಪೇಜಾವರ ಶ್ರೀಗಳನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ : ಕರವೇ ಮುಖಂಡ ಬಸವರಾಜ ಶೋಕ 

ದೇಶ ಕಂಡ ಅಪ್ರತಿಮ ಸಂತ ಪೇಜಾವರ ಶ್ರೀಗಳನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ : ಕರವೇ ಮುಖಂಡ ಬಸವರಾಜ ಶೋಕ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 29 :

 

ದೇಶ ಕಂಡ ಅಪ್ರತಿಮ ಸಂತ ಪೇಜಾವರ ಶ್ರೀಗಳನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ ಎಂದು ಕರವೇ ಮುಖಂಡ ಬಸವರಾಜ ಖಾನಪ್ಪನವರ ಹೇಳಿದರು

ರವಿವಾರ ದಂದು ನಗರದ ಬಸವೇಶ್ವರ ವೃತದಲ್ಲಿ ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಧರ್ಮ ರಕ್ಷಣೆ ಜೊತೆಗೆ ಸಮಾಜದಲ್ಲಿ ತಲೆದೋರಿರುವ ಅನಿಷ್ಟ ಪದ್ದತಿಗಳನ್ನು ನಿವಾರಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಶ್ರೀಗಳು ನಕ್ಸಲರ ಮನವಲಿಸಲಿ ಮಹತ್ವದ ಪಾತ್ರ ವಹಿಸಿದ್ದರು ಎಲ್ಲ ಜಾತಿ ಧರ್ಮ ದವರನ್ನು ಪ್ರೀತಿಸುತ್ತಿದ್ದ ಪೇಜಾವರ ಶ್ರೀಗಳ ಅಗಲಿಕೆ ತುಂಬಾ ದುಂಖವನ್ನು ತಂದಿದೆ ಎಂದು ಬಸವರಾಜ ಖಾನಪ್ಪನವರ ಹೇಳಿದರು.
ಇನ್ನೋರ್ವ ಮುಖಂಡ ಕಿರಣ ಢಮಾಮಗರ ಮಾತಾನಾಡಿ ಜಾತ್ಯತೀತ ಮನೋಭಾವನೆ ಹೊಂದಿದ ಪೇಜಾವರ ಶ್ರೀಗಳು ಅಸ್ಪೃಶ್ಯತೆ ನಿವಾರಣೆಗೆ ಪಣ ತೊಟ್ಟು ದಲಿತ ಕೇರಿಗಳಿಗೆ ಭೇಟಿನೀಡಿ ಸಮಾಜದಲ್ಲಿ ಸಮಾನತೆ ಸಾರುವಲ್ಲಿ ಮುಂಚೂಣಿಯಲ್ಲಿ ಇದ್ದು ಕಾರ್ಯಮಾಡಿದ್ದರು ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ದುಖಃವನ್ನುಂಟು ಮಾಡಿದೆ. ಭಗವಂತ ಅವರ ಆತ್ಮಕೆ ಶಾಂತಿ ದಾಯಪಾಲಿಸಲಿ ಎಂದು ಶೋಕ ವ್ಯಕ್ತ ಪಡಿಸಿದರು.

ಇದ್ದಕ್ಕೂ ಮುಂಚೆ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದ ಕಾರ್ಯಕರ್ತರು ಎರಡು ನಿಮಿಷಗಳ ಮೌನಾಚರಣೆ ನಡೆಸಿದರು

ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರುಗಳಾದ ಯಶೋಧ ಬಿರಡಿ, ಲಕ್ಷ್ಮಿ ಪಾಟೀಲ ,ಸಾದಿಕ್ ಹಲ್ಯಾಳ, ಸಂತೋಷ ಕಂಡ್ರಿ ,ಪವನ ಮಹಾಲಿಂಗಪುರ , ಮಹಬೂಬ ಸಪ್ತಸಾಗರ, ಆನಂದ ಹಟ್ಟಿಗೌಡರ, ನಿರ್ಮಲಾ ಹಡಗಲಿ, ಜರಿನಾ ಮುಲ್ಲಾ, ಮಹಾಂತೇಶ ಕುಂಬಾರ, ಲಕ್ಕಪ್ಪ ನಂದಿ, ಕೃಷ್ಣ ಖಾನಪ್ಪನವರ, ಮುಗುಟ ಪೈಲ್ವಾನ, ಹನೀಫಸಾಬ ಸನದಿ, ರಮೇಶ ಖಾನಪ್ಪನವರ, ರಾಜು ಕೆಂಚನಗುಡ್ಡ , ಸೇರಿದಂತೆ ಅನೇಕರು ಇದ್ದರು

Related posts: