RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 12 ಜನ ಅವಿರೋಧ ಆಯ್ಕೆ

ಗೋಕಾಕ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 12 ಜನ ಅವಿರೋಧ ಆಯ್ಕೆ 

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 12 ಜನ ಅವಿರೋಧ ಆಯ್ಕೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜ 6 :

 

 

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಐದು ವರ್ಷದ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಜರುಗಲಿರುವ ಚುನಾವಣೆಯಲ್ಲಿ ಸಂಘದ ವಿವಿಧ ಮತಕ್ಷೇತ್ರದ 12 ಜನ ಅಭ್ಯರ್ಥಿಗಳು ಸೋಮವಾರ ಜ.6 ರಂದು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ನಾಮಪತ್ರ ಸಲ್ಲಿಸುವ ಕೊನೆಯ ದಿನ ಶನಿವಾರ ಜ.4 ರಂದು ಒಟ್ಟು 28 ಜನರು ನಾಮಪತ್ರ ಸಲ್ಲಿಸಿದ್ದರು. ಜ.5ರಂದು ನಾಮಪತ್ರ ಪರಿಶೀಲನೆ ವೇಳೆ 2 ನಾಮಪತ್ರಗಳು ಕ್ರಮಬದ್ಧವಿಲ್ಲದ ಕಾರಣ ತಿರಸ್ಕøತಗೊಂಡಿದ್ದವು. ಒಟ್ಟು 26 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದರು. ಸ್ಥಳೀಯ ವಿವಿಧ ಸಮಾಜದ ರಾಜಕೀಯ ಮುಖಂಡರು, ಹಿರಿಯ ನಾಗರಿಕರು, ಗಣ್ಯರು, ಯುವಕರ ಒಟ್ಟಾಗಿ ಸೇರಿ ಚರ್ಚಿಸಿ, ಎಲ್ಲರ ಒಮ್ಮತದ ಅಭಿಪ್ರಾಯದಂತೆ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆ ಅವಿರೂಧವಾಗಿ ನಡೆಯಿತು.
ಸೋಮವಾರ ಜ.6 ರಂದು ನಾಮಪತ್ರ ವಾಪಸ್ ಪಡೆಯುವ ದಿನವಾಗಿದ್ದರಿಂದ ಸಂಘದ ವಿವಿಧ ಮತಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆದಿದ್ದರಿಂದ ಪ್ರತಿಸ್ಪರ್ಧಿಯಾಗಿ ಚುನಾವಣಾ ಕಣದಲ್ಲಿ ಯಾರು ಉಳಿಯದ ಕಾರಣ ಸಾಮಾನ್ಯ ಸಾಲಗಾರರ ಮತದಾರ ಮತಕ್ಷೇತ್ರದಿಂದ ಚಂದ್ರಶೇಖರ ನೀಲಣ್ಣವರ, ಈರಪ್ಪ ದೇಯಣ್ಣವರ, ಗುರುಬಸಪ್ಪ ಮಾಳಶೆಟ್ಟಿ, ಸುಭಾಷ ಹಾವಾಡಿ, ಈಶ್ವರ ಮುಧೋಳ, ಹಿಂದುಳಿದ ಅ ವರ್ಗ ಸಾಲಗಾರರ ಮತಕ್ಷೇತ್ರದಿಂದ ನಿಂಗಪ್ಪ ಕೋಣಿ, ಧರೆಪ್ಪ ಚಂದರಗಿ, ಮಹಿಳಾ ಸಾಲಗಾರರ ಮತಕ್ಷೇತ್ರದಿಂದ ಗಿರೆವ್ವ ಮೇಳೆನ್ನವರ, ಕಲ್ಲವ್ವ ಅಜ್ಜನಕಟ್ಟಿ, ಪರಿಶಿಷ್ಟ ಜಾತಿ ಸಾಲಗಾರರ ಮತಕ್ಷೇತ್ರದಿಂದ ಸುಭಾಸಚಂದ್ರ ಜಂಬಗಿ, ಪರಿಶಿಷ್ಟ ಪಂಗಡ ಸಾಲಗಾರರ ಮತಕ್ಷೇತ್ರದಿಂದ ನಾಗಪ್ಪ ಆಶೆಪ್ಪಗೋಳ, ಬಿನ್ ಸಾಲಗಾರರ ಮತಕ್ಷೇತ್ರದಿಂದ ಮಲ್ಲಿಕಾರ್ಜುನ ಸೋಮನಗೌಡ್ರ, ಅವಿರೂಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಬಿ.ಬಿರಾದಾರ ಪಾಟೀಲ ತಿಳಿಸಿದ್ದಾರೆ.
ಈ ವೇಳೆ ರಾಜಕೀಯ ಮುಖಂಡರಾದ ಬಸವಂತ ಕೋಣಿ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಎಮ್.ಐ.ನೀಲಣ್ಣವರ, ಸುಭಾಷ ಕರೆಣ್ಣವರ, ಬಸನಗೌಡ ಪಾಟೀಲ, ಸದಾಶಿವ ಕುರಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ, ಸಿಬ್ಬಂದಿ ಸೇರಿದಂತೆ ಸ್ಥಳೀಯ ವಿವಿಧ ಸಮಾಜದ ರಾಜಕೀಯ ಮುಖಂಡರು, ಹಿರಿಯ ನಾಗರಿಕರು, ಗಣ್ಯರು, ಯುವಕರು, ಇತರರು ಇದ್ದರು.

Related posts: