ಗೋಕಾಕ:ಬಾಲಿವುಡಗೆ ಲಗ್ಗೆ ಇಟ್ಟ ಗೋಕಾಕಿನ ಹುಡುಗರು : ಯುವಕರಿಗೆ ಗುಂಗು ಹಿಡಿಸಿದ ರಿಯಾಜ ಚೌಗಲಾರ “ಆ ಝರಾ” ಹಾಡು
ಬಾಲಿವುಡಗೆ ಲಗ್ಗೆ ಇಟ್ಟ ಗೋಕಾಕಿನ ಹುಡುಗರು : ಯುವಕರಿಗೆ ಗುಂಗು ಹಿಡಿಸಿದ ರಿಯಾಜ ಚೌಗಲಾರ
“ಆ ಝರಾ” ಹಾಡು
ವಿಶೇಷ ವರದಿ : ಸಾಧಿಕ ಹಲ್ಯಾಳ
ಗೋಕಾಕ ಅ 6: ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲಿ ಇತ್ತೀಚಿಗೆ ಹೊಸ ಕಲಾವಿದರ ಅಲೆ ತುಂಬಾ ಸದ್ದು ಮಾಡುತ್ತಿದೆ . ಇದರಲ್ಲಿ ಕೆಲವರಿಗೆ ಅವಕಾಶಗಳು ದೊರೆತು ಮಿಂಚಿದರೆ ಕೆಲವರಲ್ಲಿ ಪ್ರತಿಭೆ ಇದ್ದರೂ ಸಹ ಅವಕಾಶ ವಂಚಿತರಾಗುತ್ತಿದ್ದಾರೆ
ಚಿತ್ರಗಳು ಬಿಡುಗಡೆ ಗೋಳುವುದಕ್ಕೂ ಮೊದಲೇ ಹಾಡು ಮತ್ತು ಟೀಸರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರಗೊಂಡು ತುಂಬಾ ಜನಪ್ರಿಯತೆಯನ್ನು ಗಳಿಸುತ್ತಿವೆ ಇದರ ಆಧಾರದ ಮೇಲೆ ಚಿತ್ರಗಳ ಯಶಸ್ವಿಗಳಿಸುತ್ತವೆ ಅಥವಾ ಇಲ್ಲವೋ ಎಂಬುದನ್ನು ಗುರುತಿಸುವ ಕಾಲ ಬಂದಿದೆ.
ಹಿಂತಹ ಅವಕಾಶಗಳನ್ನು ಬಳಸಿಕೊಂಡು ಈಗಿನ ಯುವ ಜನರು , ಕಲಾವಿದರು ಕ್ರೀಯಾ ಶೀಲರಾಗುತ್ತಿದ್ದಾರೆ ಇದ್ದಕ್ಕೆ ಜೀವಂತ ಉದಾಹರಣೆ ಗೋಕಾಕಿನ ಮಹ್ಮದ ರಫೀ ಖ್ಯಾತಿಯ ಗಾಯಕ ರಿಯಾಜ ಚೌಗಲಾ ಅವರ ಹೊಸ ರಿಮೇಕ್ ಅಲ್ಬಂ ” ಆ ಝರಾ” .
ಸಾಮಾಜಿಕ ಜಾಲತಾಣಗಳಲ್ಲಿ ಬ್ಯೂಜಿಯಾಗಿರುವ ಇಂದಿನ ಯುವ ಪಿಳಿಗೆಯನ್ನು ಗುರುತಿಸಿದ ಗೋಕಾಕಿನ ಮಾರ್ಡನ ಮೇಲೋಡಿಸ್ ಆರ್ಕೆಸ್ಟ್ರಾ ತಂಡ ನಾಯಕ ರಿಯಾಜ ಚೌಗಲಾ ಅವರ ಮಾರ್ಗದರ್ಶನದಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿ ಅದರಲ್ಲಿ ಸೈ ಎನಿಸಿಕೊಂಡಿದೆ .
60 ರ ದಶಕದ ಪೂನಂ ಚಿತ್ರವನ್ನು ಆಯ್ಕೆ ಮಾಡಿಕೊಂಡ ಮಾರ್ಡನ ಮೇಲೋಡಿಸ್ ಆರ್ಕೆಸ್ಟ್ರಾ ತಂಡ ದಿವಂಗತ ಮಹ್ಮದ ರಫೀ ಅವರ ಕಂಠಸೀರಿಯಲ್ಲಿ ಮೂಡಿಬಂದ ಆ ಝರಾ ಮೇರೆ ಹಮ್ಮನಶೀ ಎಂಬ ಹಾಡನ್ನು ಆಯ್ಕೆಮಾಡಿಕೊಂಡು ಕೆವಲ ಹತ್ತೆ ದಿನಗಳಲ್ಲಿ ಹಳೇ ಹಾಡಿಗೆ ಹೊಸ ಲುಕ್ಕ ನೀಡಿದೆ
ಈ ಹಾಡನ್ನು ಸುಂದರವಾಗಿ ಸಂಯೋಜನೆ ಮಾಡಿ ಹಾಡಿದವರು ರಿಯಾಜ ಚೌಗಲಾ . ಹಳೆ ಹಾಡಿನ ಸಂಯೋಜನೆಗೆ ಏನು ಕಡಿಮೆ ಇಲ್ಲದಂತೆ ಪಕ್ಕದ ಕೋಲ್ಹಾಪೂರನ ಕೀಬೋರ್ಡ್ ಆರ್ಟಿಸ್ಟ ವಿಕ್ರಂ ಪಾಟೀಲ ಅದ್ಬುತವಾಗಿ ಹಳೇ ಹಾಡಿಗೆ ಹೊಸ ಸಂಗೀತ ನಿರ್ದೇಶನ ಮಾಡಿದ್ದಾರೆ . ಬಾಲಿವುಡ್ ನ್ನು ನಾಚೀಸುವ ಮಾದರಿಯಲ್ಲಿ ಏಕ್ಷಣ ಕಟ್ಟ್ ಹೇಳಿ ವಿಡಿಯೋ ಮತ್ತು ಎಡಿಟಿಂಗ್ ಮಾಡಿದವರು ಗೋಕಾಕಿನ ಎಲ್.ಡಿ.ಎಸ್ ನ ಮಾಲೀಕರಾದ ಶಂಕರ ಯಮಕನಮರಡಿ ನ್ಯೂ ಸ್ವರ್ಧಾ ರೇಕಾಡಿಂಗನ ಮಾಲೀಕರಾದ ಶಿವಾಜಿ ಪಾಟೀಲ ಅವರು ಈ ಹಾಡಿನ ರೇಕಾಡಿಂಗ್ ಮಾಡಿ ಎಲ್ಲರ ಹುಬ್ಬೇರಿಸಿದಾರೆ.
ಈಗಾಗಲೇ ಕಳೆದ ಎರೆಡು ದಶಕಗಳಿಂದ ಸಂಗೀತದಲ್ಲಿ ತನ್ನದೇ ಆದ ಛಾಫು ಮೂಡಿಸಿ ಹಲವು ಯುವ ಕಲಾವಿದರನ್ನು ಗುರುತಿಸಿ , ಪ್ರೋತ್ಸಾಹಿಸಿದ ಕೀರ್ತಿ ಈ ತಂಡಕ್ಕೆ ಸಲುತ್ತದೆ
ರಾಜ್ಯ ಹೊರ ರಾಜ್ಯದಲ್ಲಿ ಸಂಗೀತ ಸೇವೆ ನೀಡಿ ಸಂಗೀತ ಪ್ರೇಮಿಗಳ ಅಕ್ಕರೆಯ ತಂಡವಾಗಿ ಹೊರಹೊಮ್ಮಿರುವ ರಿಯಾಜ ಚೌಗಲಾ ನಾಯಕತ್ವದ ಮಾರ್ಡನ ಮೇಲೋಡಿಸ್ ಆರ್ಕೆಸ್ಟ್ರಾ ತಂಡ ಇದ್ದಿಗ ಸಾಮಾಜಿಕ ಜಾಲತಾಣಗಳಲ್ಲಿ ಲಗ್ಗೆ ಇಟ್ಟಿದೆ
ಕಳೆದ ಐದಾರು ದಿನಗಳಿಂದ ಯೂ ಟ್ಯೂಬನಲ್ಲಿ ರಿಯಾಜ ಚೌಗಲಾ ಹಾಡಿರುವ ” ಆ ಝರಾ ” ಹಾಡು ಸದ್ದು ಮಾಡುತ್ತಿದೆ ಇವರ ಈ ಹೆಜ್ಜೆ ಯಶಸ್ಸು ಸಾಧಿಸಲೆಂದು ಹಾರೈಸೋಣ.
ರಿಯಾಜ ಚೌಗಲಾ ಅವರ ಹೊಸ ರಿಮೇಕ್ ಅಲ್ಬಂ
” ಆ ಝರಾ ” ನೋಡಲು ಈ ಲಿಂಕ್ ಕಾಫೀ ಮಾಡಿ ಸರ್ಚ ಮಾಡಿ http://youtu.be/2Zoj6aHGIQk
ಅಥವಾ ಯೂ ಟ್ಯೂಬ್ ನಲ್ಲಿ aa jara ಎಂದು ಟೈಪ್ ಮಾಡಿ ಹಾಡನ್ನು ಆನಂದಿಸಿ
http://youtu.be/2Zoj6aHGIQk
ರಿಯಾಜ ಚೌಗಲಾ : ಕಲಾವಿದ
” ಕಳೆದ ಎರೆಡು ದಶಕಗಳಿಂದ ಮಾರ್ಡನ ಮೇಲೋಡಿಸ್ ಆರ್ಕೆಸ್ಟ್ರಾ ತಂಡವನ್ನು ಕಟ್ಟಿ ಸಂಗೀತ ಕಾರ್ಯಕ್ರಮಗಳನ್ನು ಮಾಡುತ್ತಿದೆವೆ ಸತೀಶ್ ಸುರ್ಗಸ ಆರ್ವಾಡ್ಸ ಮುಖಾಂತರ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಬರುವ ದಿನಗಳಲ್ಲಿ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಸತೀಶ ಸುರ್ಗಸ ಹೆಸರಿನಲ್ಲಿ ಸಂಗೀತ ಅಕ್ಯಾಡಮಿ ಪ್ರಾರಂಭಿಸಿ ಹೊಸ ಹೊಸ ಕಲಾವಿದರನ್ನು ಸಂಗೀತ ಜಗತ್ತಿಗೆ ಪರಿಚಯಿಸಲಾಗುವುದು “
ಬಸವರಾಜ ಖಾನಪ್ಪನವರ : ಕರವೇ ಅಧ್ಯಕ್ಷರು
” ರಿಯಾಜ ಚೌಗಲಾ ಒಬ್ಬ ಶ್ರೇಷ್ಠ ಸಂಗೀತ ಕಲಾವಿದ ಕಳೆದ ಎರೆಡು ದಶಕಗಳಿಂದ ಸಂಗೀತ ಸೇವೆ ಗೈದು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ . ಇವರ
” ಆ ಝರಾ ” ಅಲ್ಬಂ ಬಾಲಿವುಡ್ ಮಾದರಿಯಲ್ಲಿ ರಚನೆಗೊಂಡಿದ್ದು ತುಂಬಾ ಅದ್ಬುತ ಇವರ ತಂಡದಿಂದ ಇನ್ನು ಅನೇಕ ಹಾಡುಗಳು ಮೂಡಿಬರಲೆಂದು ಆಶೀಸುತ್ತೆವೆ “