ಗೋಕಾಕ : ಸಿಂಧೂತಾಯಿ ಮಹಾದೇವ್ಪಪ ಅವರ ಸೇವೆ ಸಮಾಜಕ್ಕೆ ಮಾದರಿ: ಅವಿಂದ ದಳವಾಯಿ
ಸಿಂಧೂತಾಯಿ ಮಹಾದೇವ್ಪಪ ಅವರ ಸೇವೆ ಸಮಾಜಕ್ಕೆ ಮಾದರಿ: ಅವಿಂದ ದಳವಾಯಿ
ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಜ 6 :
ಪಟ್ಟಣದ ದಳವಾಯಿ ತೋಟದಲ್ಲಿ ಶುಕ್ರವಾರ ಜ-3 ರಂದು ಸಮಾಜ ಸೇವಕ ದಿ.ಮಹಾದೇವಪ್ಪ ಮಡ್ಡೆಪ್ಪ ದಳವಾಯಿ ದಿ.ಶ್ರೀಮತಿ ಸಿಂಧೂತಾಯಿ ಮ. ದಳವಾಯಿ ದಂಪತಿಗಳ 34ನೇ ಪುಣ್ಯತಿಥಿ ಕಾರ್ಯಕ್ರಮ ಜರುಗಿತು.
ಮಹಾದೇವ-ಸಿಂಧೂತಾಯಿ ದಂಪತಿಗಳ ಪುತ್ರರಾದ ಮುಖಂಡ ಅರವಿಂದ ದಳವಾಯಿ ದಂಪತಿಗಳು ಸಿಂಧೂ-ಮಾಧವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಹೋದರ ಅನೀಲ ದಳವಾಯಿ ದಂಪತಿಗಳು ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪುಣ್ಯತಿಥಿಯ ಅಂಗವಾಗಿ ಬಡವರಿಗೆ ಅನ್ನ-ವಸ್ತ್ರ ದಾನ ಕಾರ್ಯಕ್ರಮ ನೆರವೇರಿತು.
ಪೂಜೆ ಸಲ್ಲಿಸಿ ಮಾತನಾಡಿದ ಅರವಿಂದ ದಳವಾಯಿ ಅವರು ತಂದೆ-ತಾಯಿಗಳ ಪುಣ್ಯದ ಫಲದಿಂದ ಮಕ್ಕಳಿಗೆ ಸತ್ಪಲವುಂಟಾಗುತ್ತದೆ ಎಂಬ ಸತ್ಯವನ್ನು ನಮ್ಮ ತಂದೆ-ತಾಯಿಗಳು ಕಲಿಸಿಕೊಟ್ಟಿದ್ದಾರೆ. ಬದುಕಿನುದ್ದಕ್ಕೂ ಬಡವರಿಗೆ, ದೀನ-ದಲಿತರಿಗೆ, ಹಿಂದುಳಿದವರಿಗೆ ತಮ್ಮಿಂದ ಕೈಲಾದ ಮಟ್ಟಿಗೆ ವೈದ್ಯಕೀಯ ಸೇವೆಯನ್ನು ನಮ್ಮ ತಂದೆ-ತಾಯಿಗಳು ಮಾಡಿದ್ದಾರೆ. ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಕೌಜಲಗಿ ಗ್ರಾಮಸ್ಥರು, ಸುತ್ತಮುತ್ತಲಿನ ರೈತಾಪಿ ವರ್ಗದವರು, ದಳವಾಯಿ ಅಭಿಮಾನಿಗಳು, ವಿದ್ಯಾರ್ಥಿಗಳು ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.