ಘಟಪ್ರಭಾ:ನೃತ್ಯ ಸ್ಪರ್ದೆಯಲ್ಲಿ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ನೃತ್ಯ ತಂಡಕ್ಕೆ ಪ್ರಥಮ ಸ್ಥಾನ
ನೃತ್ಯ ಸ್ಪರ್ದೆಯಲ್ಲಿ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ನೃತ್ಯ ತಂಡಕ್ಕೆ ಪ್ರಥಮ ಸ್ಥಾನ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜ 15 :
ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ನೃತ್ಯ ತಂಡ ಗ್ರಾಮದಲ್ಲಿ ನಡೆದ ರಾಜಾಪೂರ ಸಮೂಹ ಸಂಪನ್ಮೂಲ ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳ ಸಮೂಹ ನೃತ್ಯ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದೆ.
ಸ್ವಾಮಿ ವಿವೇಕಾನಂದ ಯುವ ಕಮೀಟಿ ರಾಜಾಪೂರ ಇವರು ಹಮ್ಮಿಕೊಂಡಿದ್ದ ನೃತ್ಯ ಸ್ಪರ್ಧೆಯಲ್ಲಿ ಸಿ.ಆರ್.ಸಿ ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ನೃತ್ಯ ತಂಡಗಳು ಬಾಗವಹಿಸಿದ್ದವು. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿಧ್ಯಾರ್ಥಿಗಳೊಂದಿಗೆ ತೀರ್ವವಾದ ಸ್ಪರ್ಧೆ ನಡೆಸಿದ ಜ್ಞಾನ ಗಂಗೋತ್ರಿ ಶಾಲೆಯ ನೃತ್ಯಗಾರ್ತಿಯರು ನಿರೀಕ್ಷೆಯಂತೆ ಪ್ರಥಮ ಬಹುಮಾನವನ್ನು ಪಡೆದು ಸಂಭ್ರಮಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಂಕರಿಸಿದ್ದ ಬಸವಂತ ಕಮತಿ, ಟಿ.ಎ.ಪಿ.ಸಿ.ಎಂ.ಎಸ್ ಗೋಕಾಕನ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಜಿ.ಪಂ ಸದಸ್ಯೆ ಕಸ್ತೂರಿ ಕಮತಿ, ತಾ.ಪಂ ಸದಸ್ಯೆ ಸಂಗೀತಾ ಯಕ್ಕೂಂಡಿ, ಪಿ.ಎಲ್.ಡಿ ಬ್ಯಾಂಕಿನ ಉಪಾಧ್ಯಕ್ಷರು ರಾಜು ಬೈರುಗೋಳ, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಸ್ವಾಮಿ ವಿವೇಕಾನಂದ ಕಮೀಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.