RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ದುಡ್ಡು ಗಳಿಸುವುದೇ ಜೀವನದ ಪರಮ ಸಾಧನೆ ಅಲ್ಲ, :ಮೇಜರ್ ಸಿದ್ಧಲಿಂಗಯ್ಯ ಅಭಿಮತ

ಗೋಕಾಕ:ದುಡ್ಡು ಗಳಿಸುವುದೇ ಜೀವನದ ಪರಮ ಸಾಧನೆ ಅಲ್ಲ, :ಮೇಜರ್ ಸಿದ್ಧಲಿಂಗಯ್ಯ ಅಭಿಮತ 

ದುಡ್ಡು ಗಳಿಸುವುದೇ ಜೀವನದ ಪರಮ ಸಾಧನೆ ಅಲ್ಲ, :ಮೇಜರ್ ಸಿದ್ಧಲಿಂಗಯ್ಯ ಅಭಿಮತ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 2 :

 
ಶಿಕ್ಷಣದ ಜೊತೆಗೆ ಸಂಸ್ಕಾರವು ಮುಖ್ಯವಾಗಿದೆ ಎಂದು ಧಾರವಾಡ ಶಿಕ್ಷಣ ಇಲಾಖೆಯ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.
ಭಾನುವಾರ ಸಂಜೆ ನಗರದ ಶೂನ್ಯ ಸಂಪಾದನ ಮಠದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ 15ನೇ ಶರಣ ಸಂಸ್ಕೃತಿ ಉತ್ಸವದ 2ನೇ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.
ದುಡ್ಡು ಗಳಿಸುವುದೇ ಜೀವನದ ಪರಮ ಸಾಧನೆ ಅಲ್ಲ, ಶಿಕ್ಷಣ ಇಲಾಖೆಯ ಕಮೀಷನರ್ ಆಗಿ ನನ್ನ ಅನುಭವವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೆ ನನ್ನನ್ನು ಸಂಪರ್ಕಿಸಿದ ಲಕ್ಷಾಂತರ ಪಾಲಕರು ತಮ್ಮ ಮಕ್ಕಳು ವೈದ್ಯ,ಇಂಜಿನೀಯರ್ ಆಗಲು ಉತ್ತಮ ಅಂಕ ಗಳಿಸಬೇಕೆಂದು ಆಸೆ ಪಡುತ್ತಾರೆ ಆದರೆ ಉತ್ತಮ ನಾಗರೀಕ, ಸಂಸ್ಕಾರವಂತ ವ್ಯಕ್ತಿಯಾಗಿ ಬೇರೆ ವೃತ್ತಿಯನ್ನು ಗುರಿಯಾಗಿ ಇಟ್ಟುಕೊಂಡು ಜೀವನ ರೂಪಿಸಿಕೊಳ್ಳುವ ಕನಸನ್ನೇ ಕಾಣುವುದಿಲ್ಲ. ಇದು ದುರ್ದೈವದ ಸಂಗತಿ.
ಗೋಕಾಕ ಮತ್ತು ಮೂಡಲಗಿ ವಲಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿದೆ. ಈ ಕಾರಣಕ್ಕಾಗಿ ಇಲ್ಲಿನ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ,ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸುಮಾರು ಎಂಟುನೂರು ವಿದ್ಯಾರ್ಥಿಗಳು ಸರ್ಕಾರಿ ಅಧಿಕಾರಿಗಳಾಗಿ ನೇಮಕಗೊಂಡಿದ್ದು ಶಿಕ್ಷಣದ ಶಕ್ತಿ ಕಾರಣ ಎಲ್ಲರೂ ಸ್ಮಾರ್ಟ ಫೋನಿನ ಗುಲಾಮಗಿರಿಯಿಂದ ಹೊರಬಂದು,ಮನೆಯಲ್ಲಿ ಒಂದು ಚಿಕ್ಕ ಗ್ರಂಥಾಲಯ ಸ್ಥಾಪಿಸಿ ಶಿಕ್ಷಣಕ್ಕೆ ಮಹತ್ವ ನೀಡಿ ಜೀವನ ಸಾರ್ಥಕ ಮಾಡಿಕೊಳ್ಳಿ, ಜಗತ್ತಿನ ಚಿಂತಕರ ಜೀವನ ಚರಿತ್ರೆಯನ್ನು ಕಲಿಸಬೇಕು.ಮಕ್ಕಳಲ್ಲಿ ಮೌಲ್ಯವನ್ನು ಗಟ್ಟಿಗೊಳಿಸುವಲ್ಲಿ ಪಾಲಕರ ಪಾತ್ರ ಮುಖ್ಯವಾಗಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ, ಚಿತ್ರದುರ್ಗದ ಜಗದ್ಗುರು ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಜಿ, ಮೈಸೂರಿನ ಡಾ: ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಜಿ, ಚಿತ್ರದುರ್ಗದ ಜಗದ್ಗುರು ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮಿಜಿ ಹಾಗೂ ಜಗದ್ಗುರು ಬಸವಮಾಚಿದೇವ ಮಹಾಸ್ವಾಮಿಜಿ, ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರು ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಈರಣ್ಣಾ ಕಡಾಡಿ, ಸವದತ್ತಿ ಬಸವದಳದ ಗೌರವಾಧ್ಯಕ್ಷ ಆನಂದ ಚೋಪ್ರಾ, ವಿಶ್ವನಾಥ ಕರಂಬಳಿ, ಡಾ: ಮಂಜುನಾಥ ಗೋರೋಶಿ, ಸೇರಿದಂತೆ ಅನೇಕರು ಇದ್ದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಿತು.
ಕಾರ್ಯಕ್ರಮವನ್ನು ಎಸ್.ಕೆ.ಮಠದ ಸ್ವಾಗತಿಸಿದರು. ಆರ್.ಎಲ್.ಮಿರ್ಜಿ ನಿರೂಪಿಸಿದರು. ಶೈಲಾ ಕೊಕ್ಕರಿ ವಂದಿಸಿದರು.

Related posts: