RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಯುವಕರು ದೇಶದ ಕಣ್ಮಣಿ, ದೇಶದ ಇತಿಹಾಸ ಸೃಷ್ಠಿಸುವರು ಯುವಕರು : ರಾಷ್ಟ್ರ ಸೇವಕ ಗೋಪಾಲಜೀ ಅಭಿಮತ

ಗೋಕಾಕ:ಯುವಕರು ದೇಶದ ಕಣ್ಮಣಿ, ದೇಶದ ಇತಿಹಾಸ ಸೃಷ್ಠಿಸುವರು ಯುವಕರು : ರಾಷ್ಟ್ರ ಸೇವಕ ಗೋಪಾಲಜೀ ಅಭಿಮತ 

ಯುವಕರು ದೇಶದ ಕಣ್ಮಣಿ, ದೇಶದ ಇತಿಹಾಸ ಸೃಷ್ಠಿಸುವರು ಯುವಕರು : ರಾಷ್ಟ್ರ ಸೇವಕ ಗೋಪಾಲಜೀ ಅಭಿಮತ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 4 :

 

 

ಯುವಕರು ದೇಶದ ಕಣ್ಮಣಿ, ದೇಶದ ಇತಿಹಾಸ ಸೃಷ್ಠಿಸುವರು ಯುವಕರು, ಇಡೀ ವಿಶ್ವಕ್ಕೆ ಶ್ರೇಷ್ಠ ಸಂತರನ್ನು ಕೊಟ್ಟ ನಮ್ಮ ಭಾರತ ದೇಶವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರ ಸೇವಕ ಗೋಪಾಲಜೀ ಹೇಳಿದರು.
ಮಂಗಳವಾರ ಸಂಜೆ ನಗರದ ಶೂನ್ಯ ಸಂಪಾದನ ಮಠದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ 15ನೇ ಶರಣ ಸಂಸ್ಕೃತಿ ಉತ್ಸವದ 4ನೇ ದಿನದ ಯುವ ಸಮಾವೇಶ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುವ ಜನಾಂಗ ರಾಷ್ಟ್ರ ಮತ್ತು ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ರಾಷ್ಟ್ರಕ್ಕಾಗಿ ಶ್ರಮಿಸಿದ ಭಗತಸಿಂಗ, ವೀರ ಸಾವರ್ಕರ್, ಶಿವಾಜಿ, ಮಹಾರಾಜರಂತಹ ಮಹಾನುಭಾವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಲವು ರಾಷ್ಟ್ರಗಳು ಭಾರತದ ಮೇಲೆ ಅಕ್ರಮಣ ಮಾಡಿದರೂ ಸಹ ಭಾರತೀಯರು ಎಂದೂ ಯಾವ ರಾಷ್ಟ್ರದ ಮೇಲೆ ಅಕ್ರಮಣ ಮಾಡಲಿಲ್ಲ. ಭಾರತೀಯ ಸಂಸ್ಕøತಿ, ಯೋಗ, ಪೂಜ್ಯನೀಯಭಾವ, ಪ್ರೀತಿ,ವಾತ್ಸಲ್ಯ ನೀಡಿದ್ದು ನಮ್ಮ ಭಾರತದೇಶ. ಮಾತೃತ್ವದ ಮಮತೆಯ ಮಮಕಾರ ನೀಡಿದ್ದ ದೇಶ ಭಾರತ. ಇಂತಹ ದೇಶದಲ್ಲಿ ಹುಟ್ಟಿದ ಯುವಕರು ರಾಷ್ಟ್ರಕ್ಕಾಗಿ ದುಡಿಯಬೇಕು. ಯುವಕರೇ ದೇಶದ ಸಂಪತ್ತು. ಯುವ ಜನಾಂಗದಿಂದಲೆ ದೇಶದ ಅಭಿವೃದ್ದಿ ಸಾಧ್ಯ, ಸಮೃದ್ಧ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ,ಸಂಸ್ಕøತಿಯ ರಕ್ಷಣೆಯಾಗಬೇಕು. ಪೌರತ್ವ ಕಾಯ್ದೆಯಿಂದ ಭಾರತಕ್ಕೆ ತೊಂದರೆಇಲ್ಲ. ನಮ್ಮದು ನಾಗರೀಕತೆ ಕೊಟ್ಟ ದೇಶ. ಭಾರತದ ಬದುಕನ್ನು ಕಟ್ಟಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನಮ್ಮ ಭಾರತೀಯ ಸಂಸ್ಕøತಿ ಬಗ್ಗೆ ತಿಳಿಸಬೇಕು ಹೇಳಿದರು
ದಿವ್ಯ ಸಾನಿಧ್ಯ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಜಿ, ಸಾನಿಧ್ಯವನ್ನು ಶಿಗ್ಗಾಂವದ ಶ್ರೀ ಸಂಗನಬಸವ ಸ್ವಾಮಿಜಿ, ಮಹಾಗಾಂವದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಜಿಯವರು ವಹಿಸಿ ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ, ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಈರಣ್ಣಾ ಕಡಾಡಿ, ಚಂದ್ರಶೇಖರ ಕೊಣ್ಣೂರ, ಮಲ್ಲಿಕಾರ್ಜುನ ಜಗಜಂಪಿ, ವಿಠ್ಠಲ ಮಾಳಿ, ಭಾವಕನ್ನಾ ಲೋಹಾರ, ಮಲ್ಲಿಕಾರ್ಜುನ ಈಟಿ, ನಾರಾಯಣ ಮಠಾಧಿಕಾರಿ, ಸದಾಶಿವ ಗುದಗಗೋಳ, ಲಕ್ಷ್ಮ,ಣ ಮಿಶಾಳೆ,ಪ್ರವೀಣ ಚುನಮರಿ, ಅಜೀತ ಪಾಟೀಲ,ಸಿದ್ದು ಕನಮಡ್ಡಿ ಇದ್ದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಿತು.
ಮುಂಜಾನೆ ಶ್ರೀಮಠದ ಕರ್ತೃ ಗದ್ದುಗೆಗೆ ಅಭಿಷೇಕ ಹಾಗೂ ಬಿಲ್ವಾರ್ಚನೆ, ಸಹಸ್ರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಫಲ್ಲಕ್ಕಿ ಉತ್ಸವ, ಕುಂಭಮೇಳ, ಮಧ್ಯಾಹ್ನ ಮಹಾಪ್ರಸಾದ ಜರುಗಿತು.
ಕಾರ್ಯಕ್ರಮವನ್ನು ಎಸ್.ಕೆ.ಮಠದ ಸ್ವಾಗತಿಸಿದರು. ಆರ್.ಎಲ್.ಮಿರ್ಜಿ ನಿರೂಪಿಸಿದರು. ಶೈಲಾ ಕೊಕ್ಕರಿ ವಂದಿಸಿದರು.

Related posts: