ಘಟಪ್ರಭಾ:ಸರ್ಕಾರಿ ಪ್ರೌಢ ಶಾಲೆಯನ್ನು ಮಂಜೂರು ಮಾಡಲು ಆಗ್ರಹಿಸಿ ಶಿಕ್ಷಣಾಧಿಕಾರಿಗಳಿಗೆ ಮನವಿ
ಸರ್ಕಾರಿ ಪ್ರೌಢ ಶಾಲೆಯನ್ನು ಮಂಜೂರು ಮಾಡಲು ಆಗ್ರಹಿಸಿ ಶಿಕ್ಷಣಾಧಿಕಾರಿಗಳಿಗೆ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಫೆ 13 :
ದುಪದಾಳ ಗ್ರಾಮಕ್ಕೆ ಕೂಡಲೇ ಸರ್ಕಾರಿ ಪ್ರೌಢ ಶಾಲೆಯನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ವತಿಯಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದಿನ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂರ್ಭದಲ್ಲಿ ತಾಲೂಕಾ ಸಂಚಾಲಕ ರೆಹಮಾನ ಮೊಕಾಶಿ, ಮಾತನಾಡಿ ಪ್ರತಿ ವರ್ಷ ಸುಮಾರು 80 ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು 8 ನೇ ತರಗತಿ ಪಾಸಾಗುತ್ತಾರೆ. ಮುಂದಿನ ವ್ಯಾಸಂಗಕ್ಕೆ ಗ್ರಾಮದಲ್ಲಿ ಪ್ರೌಢ ಶಾಲೆ ಇಲ್ಲರಿರುವುದರಿಂದ ಬೇರೆ ಊರಕ್ಕೆ ಹೋಗೋಕೆ ಆಗದೇ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಗ್ರಾಮಕ್ಕೆ ಪ್ರೌಢ ಶಾಲೆಯನ್ನು ಮಂಜೂರ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ, ಗ್ರಾಮಕ್ಕೆ ಸರ್ಕಾರಿ ಶಾಲೆ ಮಂಜೂರು ಮಾಡುವ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಯೋಗ್ಯ ಕ್ರಮ ಕೈಗೊಳ್ಳಲಾವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕರವೇ ಘಟಕ ಅಧ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ, ರವಿ ನಾವಿ, ಅಮಿರಖಾನ ಜಗದಾಳ, ಸುನೀಲ ಕೊಟಬಾಗಿ, ನೇಮಿನಾಥ ಬೊಮ್ಮಣ್ಣವರ, ಭರತೇಷ ಪರಪ್ಪನವರ, ರಾಮ ಗಾಡಿವಡ್ಡರ, ಇಸಾಕ ಕೋತವಾಲ, ಶಾಕೀಬ ಮುಲ್ಲಾ, ವಿಠ್ಠಲ ಗಾಡಿವಡ್ಡರ, ಲಗಮಣ್ಣಾ ಗಾಡಿವಡ್ಡರ, ಹಣಮಂತ ಗಾಡಿವಡ್ಡರ, ಅಮೃತ ಜಿರಳಿ, ಮಾರುತಿ ಕುರಬೇಟ, ಮುಬಾರಕ ಜಮಕಂಡಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.