RNI NO. KARKAN/2006/27779|Friday, October 18, 2024
You are here: Home » breaking news » ಮೂಡಲಗಿ:ಭೂ ನ್ಯಾಯ ಮಂಡಳಿ, ಬಗರ್ ಹುಕ್ಕುಂ ಮತ್ತು ಆರಾಧನಾ ಸಮೀತಿಗಳ ರಚನೆ

ಮೂಡಲಗಿ:ಭೂ ನ್ಯಾಯ ಮಂಡಳಿ, ಬಗರ್ ಹುಕ್ಕುಂ ಮತ್ತು ಆರಾಧನಾ ಸಮೀತಿಗಳ ರಚನೆ 

ಭೂ ನ್ಯಾಯ ಮಂಡಳಿ, ಬಗರ್ ಹುಕ್ಕುಂ ಮತ್ತು ಆರಾಧನಾ ಸಮೀತಿಗಳ ರಚನೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 18 :

 
ಮೂಡಲಗಿ ತಾಲೂಕು ಭೂ ನ್ಯಾಯ ಮಂಡಳಿಗೆ ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಶಿಫಾರಸ್ಸಿನನ್ವಯ ನಾಲ್ವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಬೈಲಹೊಂಗಲ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿತಗೊಂಡಿರುವ ಭೂ ನ್ಯಾಯ ಮಂಡಳಿಗೆ ಸದಸ್ಯರಾಗಿ ತುಕ್ಕಾನಟ್ಟಿ ಗ್ರಾಮದ ಸುಲೋಚನಾ ಶಿವಪ್ಪ ಮರ್ದಿ, ಹುಣಶ್ಯಾಳ ಪಿಜಿ ಗ್ರಾಮದ ಬಸವರಾಜ ಪರಸಪ್ಪ ಕಾಡಾಪೂರ, ಹಳ್ಳೂರ ಗ್ರಾಮದ ಭೀಮಪ್ಪ ವೆಂಕಪ್ಪ ಮಗದುಮ್ಮ ಮತ್ತು ಮಸಗುಪ್ಪಿಯ ಸಂಜಯ ಬಸಪ್ಪ ಹೊಸಕೋಟಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೂಡಲಗಿ ತಹಶೀಲ್ದಾರರು ಈ ಮಂಡಳಿಗೆ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಬಗರ ಹುಕ್ಕುಂ ಕಮೀಟಿ : ಅರಭಾವಿ ವಿಧಾನಸಭಾ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧ್ಯಕ್ಷರಾಗಿರುವ ಅರಭಾವಿ ಕ್ಷೇತ್ರದ ಬಗರ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮೀತಿಗೆ ಅರಭಾವಿ ಪಟ್ಟಣದ ಭೀಮಪ್ಪ ಯಲ್ಲಪ್ಪ ಹಳ್ಳೂರ, ಮೂಡಲಗಿ ಪಟ್ಟಣದ ರಮೇಶ ಭಾಸ್ಕರ ಸಣ್ಣಕ್ಕಿ, ಸುಣಧೋಳಿ ಗ್ರಾಮದ ಭಾರತಿ ಮೌನೇಶ ಕಮತಿ ಅವರನ್ನು ಸದಸ್ಯರಾಗಿ ಸರ್ಕಾರ ನೇಮಕ ಮಾಡಿದೆ. ಇದಕ್ಕೆ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಆರಾಧನಾ ಸಮೀತಿ : ಆರಾಧನಾ ಯೋಜನೆಯ ಅನುಷ್ಠಾನಕ್ಕಾಗಿ ವಿಧಾನಸಭಾ ಕ್ಷೇತ್ರವಾರು ಆರಾಧನಾ ಸಮೀತಿಗಳನ್ನು ರಚಿಸಲು ಮಾರ್ಗಸೂಚಿಯನ್ನು ಹೊರಡಿಸಿದ್ದು, ಈ ಸಮೀತಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧ್ಯಕ್ಷರಾಗಿದ್ದಾರೆ.
ಉಳಿದಂತೆ ಸಂಬಂಧಪಟ್ಟ ತಹಶೀಲ್ದಾರರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಈ ಸಮೀತಿಯ ಸದಸ್ಯರಾಗಿ ರಂಗಾಪೂರ ಗ್ರಾಮದ ಮಹಾಂತೇಶ ಭೀಮಪ್ಪ ಬೈಲವಾಡ, ದುರದುಂಡಿ ಗ್ರಾಮದ ಭಾರತಿ ಭೀಮಪ್ಪ ಅಂತರಗಟ್ಟಿ, ಧರ್ಮಟ್ಟಿ ಗ್ರಾಮದ ಲಕ್ಷ್ಮಣ ಭೀಮಪ್ಪ ತೆಳಗಡೆ ಹಾಗೂ ತಳಕಟ್ನಾಳ ಗ್ರಾಮದ ನಿಂಗಪ್ಪ ಲಕ್ಷ್ಮಣ ದೊಡಮನಿ ಅವರನ್ನು ಸರ್ಕಾರ ನಾಮನಿರ್ದೇಶನ ಮಾಡಿದೆ.

Related posts:

ಗೋಕಾಕ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ನಿಧನಕ್ಕೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತೀವ್ರ ಸಂ…

ಗೋಕಾಕ:ಬೋಗಸ್ ಚೆಕ್ ಪಡೆದರೆ ಹುಷಾರ್ : ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಕ…

ಮೂಡಲಗಿ:ರಸ್ತೆಗಳ ಬಗ್ಗೆ ಮಾತನಾಡುವುದು ಭೀಮಪ್ಪ ಗಡಾದ್‍ಗೆ ಯಾವುದೇ ನೈತಿಕತೆ ಇಲ್ಲ : ಹನಮಂತ ಗುಡ್ಲಮನಿ, ಸುಭಾಸ ಪಾಟೀಲ