ಗೋಕಾಕ:ಮಹಾದಾಯಿ ಅಧಿಸೂಚನೆ ಹೊರಡಿಸುವಂತೆ ಆದೇಶ : ಕರವೇಯಿಂದ ಹನುಮಂತ ದೇವರಿಗೆ ವಿಶೇಷ ಪೂಜೆ
ಮಹಾದಾಯಿ ಅಧಿಸೂಚನೆ ಹೊರಡಿಸುವಂತೆ ಆದೇಶ : ಕರವೇಯಿಂದ ಹನುಮಂತ ದೇವರಿಗೆ ವಿಶೇಷ ಪೂಜೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 21 :
ನದಿ ವ್ಯಾಪ್ತಿಯ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ ಮಹಾದಾಯಿ ಜಲ ವಿವಾದ ನ್ಯಾಯಾಧಿಕರಣ ನೀಡಿದ್ದ ಐತೀರ್ಪಿನ ಅಧಿಸೂಚನೆ ಹೊರಡಿಸುವಂತೆ ಆದೇಶಿಸಿದ ಸುಪ್ರೀಂಕೋರ್ಟ್ ಕ್ರಮ ಸ್ವಾಗತಾರ್ಹ ಎಂದು ಕರವೇ ತಾಲೂಕಾಧ್ಯ ಬಸವರಾಜ ಖಾನಪ್ಪನವರ ಹೇಳಿದರು
ಶುಕ್ರವಾರದಂದು ನಗರದ ಹನುಮಂತ ದೇವರ ದೇವಸ್ಥಾನದಲ್ಲಿ ಮಹಾದಾಯಿ ತೀರ್ಪು ಹಿನ್ನೆಲೆಯಲ್ಲಿ ಕರವೇ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಳೆದ ಎರೆಡು ದಶಕಗಳಿಂದ ಪ್ರಾರಂಭವಾದ ಕಳಸಾ ಬಂಡೂರಿ ಹೋರಾಟ ಸುಪ್ರೀಂಕೋರ್ಟ್ ತೀರ್ಪಿನಿಂದ ಅಲ್ಪ ನ್ಯಾಯ ಸಿಕ್ಕಂತಾಗಿದೆ. ಈಗ ನೀಡಿರುವ 13.12 ಟಿ.ಎಂ.ಸಿ ನೀರಿನಲ್ಲಿ ಕೇವಲ 5.12 ಟಿ.ಎಂ.ಸಿ ನೀರು ಮಾತ್ರ ನಮಗೆ ಕುಡಿಯುವ ನೀರಿಗಾಗಿ ಬಳಸಲು ಅವಕಾಶ ನೀಡಲಾಗಿದೆ .ಆದ್ದರಿಂದ ಈ ನೀರನ್ನು ಮಲಪ್ರಭಾ ಅಣೆಕಟ್ಟಿಗೆ ಹರಿಸಲು ಕ್ರಮ ಕೈಗೊಳ್ಳಬೇಕು ಇದರಿಂದ ಹುಬ್ಬಳ್ಳಿ – ಧಾರವಾಡ ಮಹಾನಗರ, ಧಾರವಾಡ, ಗದಗ,ಬಾಗಲಕೋಟೆ, ಬೆಳಗಾವಿಯಂತಹ ನಾಲ್ಕು ಜಿಲ್ಲೆ ಸೇರಿದಂತೆ 11 ತಾಲೂಕುಗಳ ವಿವಿಧ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯಲು ಪೂರೈಕೆಯಾಗವದು. ಒಟ್ಟಾರೆ ಸುಪ್ರೀಂಕೋರ್ಟ್ ನ ಈ ಆದೇಶ ಸ್ವಾಗತಾರ್ಹವಾಗಿದ್ದು , ನೂತನ ಜಲಸಂಪನ್ಮೂಲ ಸಚಿವರ ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿಯೇ ಈ ಆದೇಶ ಹೊರ ಬಂದಿರುವದು ಗೋಕಾಕ ಭಾಗದ ಜನರಿಗಂತೂ ಅತೀವ ಸಂತೋಷವಾಗಿದೆ ಎಂದು ಖಾನಪ್ಪನವರ ಹೇಳಿದರು.
ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ , ಮಂಜು ಪ್ರಭುನಟ್ಟಿ, ಯಲ್ಲಪ್ಪ ಧರ್ಮಟ್ಟಿ, ಮುಗುಟು ಪೈಲವಾನ, ಸಂತೋಷ ಕೋಲಕಾರ, ನಿಜಾಮ ನಧಾಫ್, ಕೃಷ್ಣಾ ಖಾನಪ್ಪನವರ, ಸುರೇಶ ಪತ್ತಾರ , ಕಿರಣ ವಾಲಿ, ರಫೀಕ ಗುಳೆದಗುಡ್ಡ, ಅಬ್ಬು ಮುಜಾವರ, ಬಸವರಾಜ ಗಾಡಿವಡ್ಡರ, ಹನೀಫಸಾಬ ಸನದಿ, ಯಾಸೀನ ಮುಲ್ಲಾ ಸೇರಿದಂತೆ ಇತರರು ಇದ್ದರು .