RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಶಿವರಾತ್ರಿಯ ಪ್ರಯುಕ್ತ ಪವಿತ್ರ ಲಿಂಗವನ್ನು ವಿಶೇಷ ಅಭಿಷೇಕದೊಂದಿಗೆ ಪೂಜಿಸುವುದರ ಜೊತೆಗೆ ನಿರಂತರ ಶಿವನಾಮಾವಳಿ ಜಪ

ಗೋಕಾಕ:ಶಿವರಾತ್ರಿಯ ಪ್ರಯುಕ್ತ ಪವಿತ್ರ ಲಿಂಗವನ್ನು ವಿಶೇಷ ಅಭಿಷೇಕದೊಂದಿಗೆ ಪೂಜಿಸುವುದರ ಜೊತೆಗೆ ನಿರಂತರ ಶಿವನಾಮಾವಳಿ ಜಪ 

ಶಿವರಾತ್ರಿಯ ಪ್ರಯುಕ್ತ ಪವಿತ್ರ ಲಿಂಗವನ್ನು ವಿಶೇಷ ಅಭಿಷೇಕದೊಂದಿಗೆ ಪೂಜಿಸುವುದರ ಜೊತೆಗೆ ನಿರಂತರ ಶಿವನಾಮಾವಳಿ ಜಪ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ 22:

 

 

ನಗರದ ‘ಜ್ಞಾನ ಮಂದಿರ’ ಆಧ್ಯಾತ್ಮ ಕೇಂದ್ರದಲ್ಲಿ ಶಿವನನ್ನು ಆರಾಧಿಸುವ ಪವಿತ್ರ ಶಿವರಾತ್ರಿಯ ದಿನದಂದು ರಾತ್ರಿಯಿಡಿ ಸರ್ವಶಕ್ತ ಶಿವನನ್ನು ಹಾಗೂ ಪವಿತ್ರ ಲಿಂಗವನ್ನು ವಿಶೇಷ ಅಭಿಷೇಕದೊಂದಿಗೆ ಪೂಜಿಸುವುದರ ಜೊತೆಗೆ ನಿರಂತರ ಶಿವನಾಮಾವಳಿ ಜಪಿಸಯಿತು.
ನೂರಾರು ಮಹಿಳೆಯರು ಮತ್ತು ಪುರುಷರು ಉಪಸ್ಥಿತಿಯಲ್ಲಿ ಜರುಗಿದ ಪೂಜಾಭಿಷೇಕ ಮತ್ತು ಶಿವನಾಮ ಸ್ತೋøತದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜೆ.ಡಿ.ಎಸ್. ಮುಖಂಡ ಮತ್ತು ‘ಜ್ಞಾನ ಮಂದಿರ’ ಆಧ್ಯಾತ್ಮ ಕೇಂದ್ರದ ಅಧ್ಯಕ್ಷ ಅಶೋಕ ಪೂಜಾರಿ ಮತ್ತು ಧರ್ಮದರ್ಶಿನಿ ಶ್ರೀಮತಿ ಸುವರ್ಣಾ ಹೊಸಮಠ ಭಾಗವಹಿಸಿ ಪೂಜಾಭಿಷೇಕ ನೆರವೇರಿಸಿ ನಿರಂತರ ಶಿವಸ್ತೋøತ ಕೈಗೊಂಡರು. ಈ ಸಂದರ್ಭದಲ್ಲಿ ಮುಗಳಖೋಡ-ಘಟಪ್ರಭಾ ಶ್ರೀ ಯಲ್ಲಾಲಿಂಗ ಮಠದ ಮಾತಾಜೀ ಗಂಗಾತಾಯಿ ಯವರು ಆಶೀರ್ವಚನ ನೀಡಿ ಪರಶಿವನನ್ನು ಒಲಿಸಿಕೊಳ್ಳಲು ಅಷ್ಟ್ಯರ್ಯಗಳ ಅಥವಾ ತಪಜಪಗಳ ಅವಶ್ಯಕತೆಯಿಲ್ಲ. ನಿಷ್ಕಾಮ ಮನೋಭಾವನೆಯ ಭಕ್ತಿಯೊಂದಿಗೆ ಶಿವನನ್ನು ಧ್ಯಾನಿಸಿ ಬಿಲ್ವಪತ್ರಿ ಸಮರ್ಪಿಸಿದರೆ ಸಾಕು ಎಂದು ಹೇಳುವುದರ ಜೊತೆಗೆ ಶಿವರಾತ್ರಿಯ ಮಹತ್ವವನ್ನು ತಿಳಿಸಿದರು.
ಕಳ್ಳಿಗುದ್ದಿ ಕಪರಟ್ಟಿ ಮಹಾದೇವ ಮಠದ ಶ್ರೀ ಬಸವರಾಜ ಹಿರೇಮಠ ಶರಣರು, ಶ್ರೀ ಸಿದ್ಧಾರೂಢ ಶ್ರೀ ಮಠದ ಶ್ರೀಮತಿ ಲಕ್ಷ್ಮೀ ತಾಯಿಯವರು ಪ್ರವಚನ ನೀಡಿದರು. ಶ್ರೀ ವಿಜಯಶಾಸ್ತ್ರೀ ಹಿರೇಮಠ ರವರು ಪೂಜಾಭಿಷೇಕ ನೆರವೇರಿಸಿ ನಿರಂತರ ಶಿವನಾಮ ಸ್ತೋøತ್ರ ಪಟಿಸಿದರು. ಕಾರ್ಯಕ್ರಮದಲ್ಲಿ ಪಟಗುಂದಿ, ಅಕ್ಕಿಸಾಗರ, ಮಮದಾಪೂರ, ಘಟಪ್ರಭಾ, ಉಪ್ಪಾರಟ್ಟಿ, ಗೋಕಾಕ ಮುಂತಾದ ಗ್ರಾಮಗಳ ನೂರಾರು ಭಕ್ತಾಧಿಗಳು ಭಾಗವಹಿಸಿದ್ದರು.

Related posts: