RNI NO. KARKAN/2006/27779|Tuesday, December 24, 2024
You are here: Home » breaking news » ಘಟಪ್ರಭಾ:ಹುಬ್ಬಳ್ಳಿ ಮೂರು ಸಾವಿರ ಮಠಕ್ಕೆ ತೆರಳಿದ ಮಲ್ಲಿಕಾರ್ಜುನ ಸ್ವಾಮೀಜಿ

ಘಟಪ್ರಭಾ:ಹುಬ್ಬಳ್ಳಿ ಮೂರು ಸಾವಿರ ಮಠಕ್ಕೆ ತೆರಳಿದ ಮಲ್ಲಿಕಾರ್ಜುನ ಸ್ವಾಮೀಜಿ 

ಹುಬ್ಬಳ್ಳಿ ಮೂರು ಸಾವಿರ ಮಠಕ್ಕೆ ತೆರಳಿದ ಮಲ್ಲಿಕಾರ್ಜುನ ಸ್ವಾಮೀಜಿ

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ (ಬೆಳಗಾವಿ) ಫೆ 23 :

ಬೆಳಗಾವಿ: ಜಿಲ್ಲೆಯ ಘಟಪ್ರಭಾದ ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ತಮ್ಮ ಭಕ್ತರೊಂದಿಗೆ ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ತೆರಳಿದರು.

ಮಠದ ಉತ್ತರಾಧಿಕಾರಿ ನಾನೇ ಎಂದೂ ಅವರು ಹೇಳಿಕೊಂಡಿದ್ದಾರೆ.

ದಿಂಗಾಲೇಶ್ವರ ಸ್ವಾಮೀಜಿ ಸತ್ಯ ದರ್ಶನ ಸಭೆ ವಿಚಾರವಾಗಿ ‌ಪ್ರತಿಕ್ರಿಯಿಸಿದ ಅವರು, ನಾವು ನಮ್ಮ ಭಕ್ತರು ಹುಬ್ಬಳ್ಳಿ ಮಠಕದಲ್ಲಿ ಗದ್ದುಗೆ ದರ್ಶನ ಪಡೆಯಲು ಹೊರಟಿದ್ದೇವೆ. ಅಲ್ಲಿ ಹೋಗಿ ನಾವು ಯಾವುದೇ ಸಭೆ, ಸಮಾರಂಭಕ್ಕೆ ಹೊರಟಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಸತ್ಯ ದರ್ಶನ ಸಭೆಗೂ ನಮಗೆ ಯಾವುದೇ ಸಂಬಂಧವಿಲ್ಲ. ನಾವು ಪ್ರತ್ಯೇಕವಾಗಿ ನಮ್ಮ ಭಕ್ತರ ಜೊತೆ ಗುರುಗಳನ್ನು ಭೇಟಿ ಮಾಡುತ್ತೇವೆ. ಮೂರು ಸಾವಿರ ಮಠದಲ್ಲಿ ನಮಗೂ ಹಕ್ಕು ಇದೆ. ನಾವು ಶಾಂತಿಯನ್ನು ಕದಲುವವರಲ್ಲ. ನಾವು ಶಕ್ತಿ ಪ್ರದರ್ಶನ ಮಾಡಲು ಹೊರಟಿಲ್ಲ; ನಾವು ಭಕ್ತಿ ಪ್ರದರ್ಶನ ಮಾಡಲು ಹೊರಟಿದ್ದೇವೆ ಎಂದರು.

ನಾನೇ ಉತ್ತರಾಧಿಕಾರಿ. ಹೀಗಾಗಿ ಬೇರೆ ಉತ್ತರಾಧಿಕಾರಿ ಮಾಡುವ ಅವಶ್ಯವಿಲ್ಲ. ಸುಳ್ಳಿಗೆ ಪ್ರಚಾರ ಸಿಗುತ್ತಿದೆ. ಆದರೆ ಅದಕ್ಕೆ ಅಸ್ತಿತ್ವ ಇಲ್ಲ. ಸತ್ಯಕ್ಕೆ ಪ್ರಚಾರ ಸಿಗದೆ ಇರಬಹುದು. ಆದರೆ, ಅದಕ್ಕೆ ಅಸ್ತಿತ್ವ ಇದೆ. ಹಾಗಾಗಿ ನಾವು ಸತ್ಯದ ಪರವಾಗಿ ಇದ್ದೇವೆ ಎಂದು ಹೇಳಿದರು.

 

Related posts: