RNI NO. KARKAN/2006/27779|Monday, January 6, 2025
You are here: Home » breaking news » ಗೋಕಾಕ:ಉತ್ತಮ ಬದುಕಿಗೆ ಶಿಕ್ಷಣ ಅವಶ್ಯವಾಗಿದೆ : ಶಂಕರ ಗೌಡಿ

ಗೋಕಾಕ:ಉತ್ತಮ ಬದುಕಿಗೆ ಶಿಕ್ಷಣ ಅವಶ್ಯವಾಗಿದೆ : ಶಂಕರ ಗೌಡಿ 

ಉತ್ತಮ ಬದುಕಿಗೆ ಶಿಕ್ಷಣ ಅವಶ್ಯವಾಗಿದೆ : ಶಂಕರ ಗೌಡಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 6 :

 

 

ಉತ್ತಮ ಬದುಕಿಗೆ ಶಿಕ್ಷಣ ಅವಶ್ಯವಾಗಿದೆ ಎಂದು ಬೈಲಹೊಂಗಲ ತಹಶೀಲ್ದಾರ ಶಂಕರ ಗೌಡಿ ಹೇಳಿದರು.
ಶುಕ್ರವಾರ ತಾಲೂಕಿನ ಶಿಂದಿಕುರಬೇಟ ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯರ ಬೀಳ್ಕೊಡುವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣಕ್ಕೆ ಅಂಕಗಳು ಬೇಕು ಆದರೆ ಅಂಕಗಳಿಸುವುದೇ ಶಿಕ್ಷಣವಾಗಬಾರದು.ವಿದ್ಯಾರ್ಥಿ ಜೀವನ ಅತೀ ಅಮೂಲ್ಯವಾದದ್ದು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಗುರಿ ಇಟ್ಟಕೊಳ್ಳಬೇಕು. ನೌಕರಿ ಮಾಡುವಗೊಸ್ಕರ ಶಿಕ್ಷಣ ಪಡೆಯಬಾರದು. ಉತ್ತಮ ಜೀವನ ನಡೆಸಲು ಸುಂದರವಾದ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಶಿಕ್ಷಣ ಮಹತ್ವದ್ದಾಗಿದೆ.ವಿದ್ಯಾರ್ಥಿನಿಯರು ಕನಿಷ್ಠ ಪದವಿಯವರೆಗೂ ಓದಬೇಕು. ಇದಕ್ಕೆ ಪಾಲಕರು ಸಹಕಾರ ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸವದತ್ತಿಯ ವಲಯ ಅರಣ್ಯಾಧಿಕಾರಿ ಶಂಕರ ಅಂತರಗಟ್ಟಿ ಮಾತನಾಡಿ ಶಿಕ್ಷಕರ ಮಾರ್ಗದರ್ಶನ ಅತೀ ಮುಖ್ಯವಾಗಿದೆ. ಮಹಿಳೆಯರು ಪರುಷನಷ್ಟೇ ಸರಿಸಮಾನವಾಗಿದ್ದಾರೆ. ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ವಿದ್ಯಾರ್ಥಿಗಳು ಕ್ರೀಯಾಶೀಲರಾಗಿ ಪರೀಕ್ಷೆ ಬರೆದು ಉನ್ನತ ಹುದ್ದೆಯನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ ಸದಸ್ಯ ನಿಂಗಪ್ಪ ಬಂಬಲಾಡಿ ವಹಿಸಿದ್ದರು. ವೇದಿಕೆ ಮೇಲೆ ದುಂಡಯ್ಯ ಹಿರೇಮಠ, ಸದಾನಂದ ಗಾಯಕವಾಡ, ಜ್ಯೋತ್ತೆಪ್ಪ ಬಂತಿ, ಪಿ.ಎಚ್.ಗೋಸಬಾಳ, ವಿಠ್ಠಲ ಕರೋಶಿ, ಮುಖ್ಯೋಪಾಧ್ಯಾಯ ಎಸ್.ಬಿ.ಬಡಿಗೇರ, ಎಲ್.ಬಿ.ರಡ್ಡಿ, ಪಿ.ಬಿ.ಕದಮ, ಎಂ.ಎಸ್.ಜೋಲಾಪುರೆ, ಪಿ.ಎಂ.ಮಲ್ಲಾಪೂರೆ, ಎಫ್.ಜಿ.ಬಾಗವಾನ, ಎಸ್.ಎಸ್.ಕುಂಬಾರ, ಶಂಕರ ಕಂಠಿ, ವಿಠ್ಠಲ ಕನಕಿಕೊಡಿ ಸೇರಿದಂತೆ ಇತರರು ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಚಟುವಟಿಕೆಗಳಲ್ಲಿ ವಿಜೇತಗೊಂಡ ವಿದ್ಯಾರ್ಥಿನಿಯರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ವಿ.ಎಂ.ಮುನ್ನೋಳಿ ಸ್ವಾಗತಿಸಿದರು. ಕೆ.ಎ.ಗಡ್ಡಿ ನಿರೂಪಿಸಿದರು.ರೇಖಾ ಕೆ ವಂದಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.

Related posts: