RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಮಹಿಳೆಯರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ : ಡಾ: ಕೀರ್ತಿ ಬೀರನಗಡ್ಡಿ

ಗೋಕಾಕ:ಮಹಿಳೆಯರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ : ಡಾ: ಕೀರ್ತಿ ಬೀರನಗಡ್ಡಿ 

ಮಹಿಳೆಯರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ : ಡಾ: ಕೀರ್ತಿ ಬೀರನಗಡ್ಡಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 14 :

 

 

ಮಹಿಳೆಯರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ ಸುಂಸ್ಕøತ ಸಮಾಜ ನಿರ್ಮಾಣದ ಶಿಲ್ಪಿಗಳಾಗಿದ್ದಾರೆಂದು ಇಲ್ಲಿಯ ಖ್ಯಾತ ವೈದ್ಯೆ ಡಾ: ಕೀರ್ತಿ ಬೀರನಗಡ್ಡಿ ಹೇಳಿದರು.
ಶನಿವಾರದಂದು ನಗರದ ಶೂನ್ಯ ಸಂಪಾದನಾ ಮಠದ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಾ ದೇಶದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಮಹಿಳೆಯೊಬ್ಬಳು ಕಲಿತರೆ ಶಾಲೆಯೊಂದನ್ನು ತೆರೆದಂತೆ. ವಿದ್ಯಾರ್ಥಿಗಳು ಸಾಧಕರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಸಾಧಕರಾಗಿರೆಂದು ಹಾರೈಸಿದರು.
ವೇದಿಕೆ ಮೇಲೆ ಅತಿಥಿ ಲಕ್ಷ್ಮೀ ನಾವಲಗಟ್ಟಿ, ಸಂಸ್ಥೆಯ ಎಚ್‍ಒಡಿ ಶಿರೀನ್ ಮೋಮಿನ್, ಉಪನ್ಯಾಸಕಿ ರಾಜಶ್ರೀ ಕರಗಿ, ಪ್ರಾಚಾರ್ಯ ಗುರುರಾಜ ಚೌಗಲಾ, ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಹಿರೇಮಠ ಇದ್ದರು. ಗುರು ಬ್ಯಾಕೂಡ ಸ್ವಾಗತಿಸಿ, ವಂದಿಸಿದರು.

Related posts: