RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಕೊರೋನಾ ವೈರಸ್ ಮುಂಜಾಗೃತ ಹಿನ್ನೆಲೆ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ : ಪ್ರಕಾಶ ಹೊಳೆಪ್ಪಗೋಳ

ಗೋಕಾಕ:ಕೊರೋನಾ ವೈರಸ್ ಮುಂಜಾಗೃತ ಹಿನ್ನೆಲೆ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ : ಪ್ರಕಾಶ ಹೊಳೆಪ್ಪಗೋಳ 

ಕೊರೋನಾ ವೈರಸ್ ಮುಂಜಾಗೃತ ಹಿನ್ನೆಲೆ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ : ಪ್ರಕಾಶ ಹೊಳೆಪ್ಪಗೋಳ

 

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ.24-

 

 
ಕೊರೋನಾ ವೈರಸ್ ಬಗ್ಗೆ ರಾಜ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳು ನೀಡಿದ ನಿರ್ದೇಶನದ ಮೇರೆಗೆ ಕಟ್ಟುನಿಟ್ಟಿನ ಕ್ರಮವನ್ನು ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಕೈಗೊಳ್ಳಲಾಗಿದೆ ಎಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ಹೇಳಿದರು.
ಕೊರೋನಾ ವೈರಸ್ ಬಗ್ಗೆ ತಾಲೂಕಿನ ಸ್ಥಿತಿಗತಿ ತಿಳಿಯಲು ಪತ್ರಕರ್ತರು ಅವರು ಕಾರ್ಯಾಲಯದಲ್ಲಿ ಭೇಟಿಯಾದಾಗ ಈ ವಿಷಯ ತಿಳಿಸಿ ಹೊರದೇಶಗಳಿದ ಬಂದ ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು ಪ್ರತಿದಿನ ಅವರ ಆರೋಗ್ಯ ತಪಾಸಣೆ ವೈದ್ಯರು ನಡೆಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರದಂತೆ ಮುಂಜಾಗ್ರತೆ ವಹಿಸಲಾಗಿದೆ. ಅಲ್ಲದೆ ಜೀವನಾವಶ್ಯಕ ವಸ್ತುಗಳು, ಔಷಧಿ, ಹಾಲು, ಪೆಟ್ರೋಲ್ ಅಂಗಡಿಗಳಿಗೆ ನಿರ್ಬಂಧವಿರುವದಿಲ್ಲ. ಸರಕಾರದಿಂದ ಬರುವ ನಿರ್ದೇಶನಗಳನ್ನು ಪಾಲಿಸಲಾಗುವದೆಂದು ತಹಶೀಲದಾರರು ತಿಳಿಸಿದರು.
ಕಳೆದ ಎರಡು ದಿನಗಳಿಂದ ತರಕಾರಿ ಮಾರುಕಟ್ಟೆಯಲ್ಲಿ ಪೋಲೀಸ ಇಲಾಖೆ ವ್ಯಾಪಾರವನ್ನು ಒತ್ತಾಯದಿಂದ ನಿಲ್ಲಿಸಿದ್ದರಿಂದ ಸಾರ್ವಜನಿಕರಿಗೆ ತರಕಾರಿ ದೊರೆಯದ್ದರಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ತಾಲೂಕಾ ಆಡಳಿತ ಜನರಿಗೆ ತರಕಾರಿ ಸಿಗುವ ವ್ಯವಸ್ಥೆ ಏನು ಮಾಡಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಸಾರ್ವಜನಿಕರಿಗೆ ತರಕಾರಿ ಹಾಗೂ ಅವಶ್ಯಕ ವಸ್ತುಗಳು ಒದಗಿಸುವ ವ್ಯವಸ್ಥೆ ಮಾಡುವ ಭರವಸೆಯನ್ನು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ನೀಡಿದರು.
ಮೂಡಲಗಿ ತಹಶೀಲದಾರ ಡಿ.ಜಿ.ಮಹಾತ, ಡಿವೈಎಸ್‍ಪಿ ಪ್ರಭು ಡಿ.ಟಿ., ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಗೋಕಾಕ ಸಿಪಿಐ ಗೋಪಾಲ ರಾಠೋಡ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಹಾಗೂ ಪಿಎಸ್‍ಐಗಳಾದ ಎ.ಎಸ್.ಅಮ್ಮೀನಭಾಂವಿ, ಎಚ್.ಬಿ. ಬಾಲದಂಡಿ, ಮಲ್ಲಿಕಾರ್ಜುನ ಸಿಂಧೂರ, ಹಣಮಂತ ನೇರಳೆ, ಪ್ರಕಾಶ ರಾಠೋಡ ಇದ್ದರು.

Related posts: