ಘಟಪ್ರಭಾ:ಕೆ.ಎಚ್.ಐ ಹಾಗೂ ಜೆ.ಜಿ ಆಸ್ಪತ್ರೆಗೆ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಟಿ.ಎಚ್.ಓ ಅಂಟಿನ ಹಾಗೂ ಗೋಕಾಕ ಡಿ.ಎಸ್.ಪಿ ಪ್ರಭು ಡಿ.ಟಿ. ಬೇಟ್ಟಿ
ಕೆ.ಎಚ್.ಐ ಹಾಗೂ ಜೆ.ಜಿ ಆಸ್ಪತ್ರೆಗೆ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಟಿ.ಎಚ್.ಓ ಅಂಟಿನ ಹಾಗೂ ಗೋಕಾಕ ಡಿ.ಎಸ್.ಪಿ ಪ್ರಭು ಡಿ.ಟಿ. ಬೇಟ್ಟಿ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮಾ 26 :
ಹೆಮ್ಮಾರಿ ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮುಂಜಾಗೃತವಾಗಿ ಇಲ್ಲಿಯ ಕೆ.ಎಚ್.ಐ ಆಸ್ಪತ್ರೆ ಹಾಗೂ ಜೆ.ಜಿ ಸಹಕಾರಿ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶನ್ವಯ ಆಯ.ಸಿ.ಯೂ ವಾರ್ಡಗಳನ್ನು ಸಿದ್ಧಪಡಿಸಲಾಗುತ್ತಿದೆ.
ಬುಧವಾರ ಸಂಜೆ ಇವೆರಡು ಆಸ್ಪತ್ರೆಗಳಿಗೆ ಬೆಟ್ಟಿ ನೀಡಿದ ಗೋಕಾಕ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ಟಿ.ಎಚ್.ಓ ಅಂಟಿನ ಹಾಗೂ ಗೋಕಾಕ ಡಿ.ಎಸ್.ಪಿ ಪ್ರಭು ಡಿ.ಟಿ. ಬೇಟ್ಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಇಲ್ಲಿಯ ಪ್ರಸಿದ್ದ ಕೆ.ಎಚ್.ಐ ಆಸ್ಪತ್ರೆಯಲ್ಲಿ 40 ಹಾಸಿಗೆಯ ಆಯ್.ಸಿ.ಯೂ ವಾರ್ಡ ಹಾಗೂ ಜೆ.ಜಿ ಸಹಕಾರಿ ಆಸ್ಪತ್ರೆಯಲ್ಲಿ ಮಹಿಳೆ ಹಾಗೂ ಪುರುಷರಿಗೆ ತಲಾ 50 ಹಾಸಿಗೆಗಳ ಆಯ.ಸಿ.ಯೂ ವಾರ್ಡಗಳನ್ನು ಸಿದ್ದಪಡಿಸಲಾಗುತ್ತಿದೆ. ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಠಿಣ ಕ್ರಮಗಳನ್ನು ಕೈಗೊಳುತ್ತಿವೆ.
ಈ ಸಂದಭದಲ್ಲಿ ಘಟಪ್ರಭಾ ಪಿಎಸ್.ಐ ಹಾಲಪ್ಪಾ ಬಾಲದಂಡಿ, ಶಿಂದಿಕುರಬೇಟ ವೈದ್ಯಾಧಿಕಾರಿ ಪ್ರವೀನ ಕರಗಾವಿ, ಧುಪದಾಳ ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್.ಗಡಕರಿ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಇದ್ದರು.