ಗೋಕಾಕ:ಭಾರತ ಲಾಕ್‍ಡೌನ ಯಶಸ್ವಿಗೆ ಸಹಕರಿಸಿ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ವಿನಂತಿ
ಭಾರತ ಲಾಕ್‍ಡೌನ ಯಶಸ್ವಿಗೆ ಸಹಕರಿಸಿ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ವಿನಂತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 27 :
ಕೊರೋನಾ ವೈರಸ್ ಬಗ್ಗೆ ಜನರು ಭಯ ಪಡದೆ ಸರ್ಕಾರ ನೀಡಿದ ನಿರ್ದೇಶನಗಳನ್ನು ಪಾಲಿಸುತ್ತಾ ಭಾರತ ಲಾಕ್‍ಡೌನ ಯಶಸ್ವಿಗೆ ಸಹಕರಿಸಬೇಕೆಂದು ತಹಶೀಲದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದರು.
ಶುಕ್ರವಾರದಂದು ಕೊರೋನಾ ವೈರಸ್ ಬಗ್ಗೆ ತಾಲೂಕಿನ ಸ್ಥಿತಿಗತಿ ತಿಳಿಯಲು ಪತ್ರಕರ್ತರು ಅವರು ಕಾರ್ಯಾಲಯದಲ್ಲಿ ಭೇಟಿಯಾದಾಗ ಈ ವಿಷಯ ತಿಳಿಸಿ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೂಕ್ತ ಮುಂಜಾಗೃತ ಕ್ರಮವಾಗಿ ಲಾಕ್‍ಡೌನ್ ಹೇರಿದ್ದು ಅದರ ಆದೇಶಗಳನ್ನು ಪಾಲಿಸುವ ಮೂಲಕ ಕೊರೊನ ಎಂಬ ಬೀಕರ ವೈರಸ್‍ನ್ನು ತಡೆಗಟ್ಟಲು ಶ್ರಮಿಸಬೇಕೆಂದು ಹೇಳಿದರು.
ನಿನ್ನೆಯ ದಿನ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಕೆಲವೊಂದು ಅಡಚಣೆಗಳಿಂದ ಇಲಾಖೆ ಕೈಗೊಂಡ ಕ್ರಮ ಯಶಸ್ವಿಯಾಗಲಿಲ್ಲ. ಅಂದಾಜಿಗಿಂತ ಹೆಚ್ಚಿನ ಜನ ಸೇರಿದ್ದರ ಪರಿಣಾಮ ಸಾಮೂಹಿಕ ಸಂತೆಯನ್ನು ರದ್ಧು ಪಡಿಸಲಾಗಿದೆ. ಬದಲಾಗಿ ಪ್ರತಿದಿನ ನಗರದ ಎಲ್ಲ ಬಡಾವಣೆಗಳಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಸೂಕ್ತ ಕ್ರಮ ಜರುಗಿಸಲಾಗುವುದು ಸಾರ್ವಜನಿಕರು ಆತಂಕ ಪಡಬಾರದು. ತಾಲೂಕಾಡಳಿತ ತಮ್ಮ ಜೊತೆ ಇದ್ದು ಯಾವುದುಕ್ಕೂ ಹೆದರುವ ಅವಶ್ಯಕತೆ ಇಲ್ಲಾ ಎಂದು ತಿಳಿಸಿದರು.
ವೈದ್ಯಕೀಯ ಸೇವೆ ಒದಗಿಸಲು ಕ್ರಮ : ಸರಕಾರದ ಆದೇಶದಂತೆ ನಗರದ ಎಲ್ಲಾ ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ಆಯುಷ್ಯ ವೈದ್ಯರಿಗೆ ಸ್ಥಾನಿಕವಾಗಿ ಇದ್ದು ವೈದ್ಯಕೀಯ ಸೇವೆಯನ್ನು ಒದಗಿಸಲು ಸೂಚಿಸಲಾಗುವದು ತಪಾಸಣೆಗೆ ಹಿಂದೆಟ್ಟು ಹಾಕಿದರೆ ಅಂತಹ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ತಹಶೀಲದಾರರು ತಿಳಿಸಿದ್ದಾರೆ.