ಕೌಜಲಗಿ:ಬೀಬಿಜಾನ ಬಾಬುಸಾಬ ಜಮಾದರ ನಿಧನ
ಬೀಬಿಜಾನ ಬಾಬುಸಾಬ ಜಮಾದರ ನಿಧನ ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಮಾ 29 : ಪಟ್ಟಣದ ನಿವಾಸಿ ಮುಸ್ಲಿಂ ಸಮಾಜದ ಹಿರಿಯರಾದ ಬೀಬಿಜಾನ ಬಾಬುಸಾಬ ಜಮಾದರ (68) ಇವರು ರವಿವಾರದಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತಿ, ಪೋಲಿಸ್ ಇಲಾಖೆಯ ಸಿ.ಪಿ.ಐ. ಎ.ಬಿ.ಜಮಾದಾರ ಸೇರಿದಂತೆ ನಾಲ್ವರು ಪುತ್ರರು, ಒಬ್ಬಳು ಪುತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.