ಘಟಪ್ರಭಾ:ಶಿಂದಿಕುರಬೇಟ ಯೋಧರು ಹಾಗೂ ಯುವಕರಿಂದ ಮನೆ ಮನೆಗೆ ಉಚಿತ ಮಾಸ್ಕ್ ವಿತರಣೆ
ಶಿಂದಿಕುರಬೇಟ ಯೋಧರು ಹಾಗೂ ಯುವಕರಿಂದ ಮನೆ ಮನೆಗೆ ಉಚಿತ ಮಾಸ್ಕ್ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮಾ 30 :
ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಗ್ರಾಮದ ಯೋಧರು ಮತ್ತು ಯುವಕರು ಸೇರಿಕೊಂಡು ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಸೋಮವಾರದಂದು ಗ್ರಾಮದಲ್ಲಿ ಮನೆ ಮನೆಗೆ ತೆರಳಿ 5 ಸಾವಿರಕ್ಕೂ ಹೆಚ್ಚು ಮಾಸ್ಕಗಳನ್ನು ಉಚಿತವಾಗಿ ವಿತರಿಸಿದರು.
ಯೋಧರ ಮತ್ತು ಯುವಕರ ಕಾರ್ಯವನ್ನು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯೋಧರಾದ ಯಲ್ಲಪ್ಪ ಶಿರಹಟ್ಟಿ, ಅಜೀತ ಪಡಸಲಗಿ, ಮಂಜುನಾಥ ಶಿಡ್ಲ್ಯಾಳಿ, ಮಂಜುನಾಥ ಮಾಯನ್ನವರ, ರಾಘವೇಂದ್ರ ಮುರಮಕರ ಯುವಕರಾದ ಮಂಜುನಾಥ ಯಲ್ಲಟ್ಟಿ, ಮಹೇಶ ದೇವಮಾನೆ,ಕೃಷ್ಣಾ ಮರಾಠೆ, ಚಿನ್ನಪ್ಪ ಕಾಂಬಳೆ, ವಿವೇಕ ಸಾಂಗಲಿ, ನಾರಾಯಣ ಕದಂ, ಗೋವಿಂದ ಪೂಜೇರಿ, ಮಹೇಶ ಕಾಳ್ಯಾಗೋಳ,ವಿಠ್ಠಲ ಕುರಜಿಂಗೋಳ, ಲಕ್ಷ್ಮಣ ಕೊಳವಿ, ಕೆಂಚಪ್ಪ ಮಾಯನ್ನವರ, ಶಿಕ್ಷಕ ಪಿ.ಎಚ್.ಗೋಸಬಾಳ, ಪೊಲೀಸ ಪೇದೆ ಕೃಷ್ಣಪ್ಪ ಮೇಕಳಿ, ವಿಠ್ಠಲ ಕರೋಶಿ ಸೇರಿದಂತೆ ಇತರರು ಇದ್ದರು.