RNI NO. KARKAN/2006/27779|Tuesday, December 24, 2024
You are here: Home » breaking news » ಬೆಟಗೇರಿ:ಮಾಸ್ಕ ತಯಾರಿಸುತ್ತಿರುವ ಅಜ್ಜಿ ಕಾರ್ಯ ಎಲ್ಲರಿಗೂ ಮಾದರಿ

ಬೆಟಗೇರಿ:ಮಾಸ್ಕ ತಯಾರಿಸುತ್ತಿರುವ ಅಜ್ಜಿ ಕಾರ್ಯ ಎಲ್ಲರಿಗೂ ಮಾದರಿ 

ಮಾಸ್ಕ ತಯಾರಿಸುತ್ತಿರುವ ಅಜ್ಜಿ ಕಾರ್ಯ ಎಲ್ಲರಿಗೂ ಮಾದರಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಎ 4 :

 

 

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೃದ್ಧೆ ತಾಯವ್ವ ಬೀರಪ್ಪ ಕಲ್ಲೂರ(ಲೋಳಸೂರ)ಅವರು ಸ್ವಯಂ ಪ್ರೇರಿತಳಾಗಿ ಮಾಸ್ಕ್ ಧರಿಸಲು ತಮ್ಮ ಮನೆಯಲ್ಲಿ ತನ್ನ ಕೈಯಿಂದಲೇ ಬಟ್ಟೆ, ಸೂಜಿ, ದಾರ ತೆಗೆದುಕೊಂಡು ಕೃತಕವಾದ ಮಾಸ್ಕ್ ತಯಾರಿಸಿಕೊಳ್ಳುತ್ತಿರುವ ಈ ಅಜ್ಜಿ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.
ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಮದ ಪ್ರತಿ ಮನೆ ಮನೆಗೆ ಉಚಿತವಾಗಿ ಮಾಸ್ಕ್, ಕರೊನಾ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಕರಪತ್ರವನ್ನು ಶುಕ್ರವಾರ ಏ.3ರಂದು ವಿತರಿಸುವ ವೇಳೆಯಲ್ಲಿ ಸ್ಥಳೀಯ ವಾರ್ಡ್ ನಂ.3 ರಲ್ಲಿರುವ ಈ ಅಜ್ಜಿಯ ಮನೆಗೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಶಿಕ್ಷಣದ ವಿವಿಧ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಥಳೀಯ ವಿದ್ಯಾರ್ಥಿಗಳು, ಕರವೇ ಗ್ರಾಮ ಘಟಕದ ಪದಾಧಿಕಾರಿಗಳು, ಟಾಸ್ಕ್ ಪೊರ್ಸ್ ಸಮಿತಿ ಸದಸ್ಯರು ಮಾಸ್ಕ್ ಮತ್ತು ಕರಪತ್ರ ವಿತರಿಸಲು ಹೋದಾಗ ಈ ಸಂಗತಿ ಬೆಳಕಿಗೆ ಬಂದಿದೆ ಎಂದು ಪಿಡಿಒ ಎಚ್.ಎನ್.ಬಾವಿಕಟ್ಟಿ ತಿಳಿಸಿದ್ದಾರೆ.
ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ ಅವರು ಗ್ರಾಮದ ವೃದ್ಧ ಮಹಿಳೆ ತಾಯವ್ವ ಕಲ್ಲೂರ ಅವರು ಸ್ವಯಂ ಪ್ರೇರಿತಳಾಗಿ ಮಾಸ್ಕ್ ಧರಿಸಲು ಸ್ಥಳೀಯ ತಾಯವ್ವ ಕಲ್ಲೂರ ತಮ್ಮ ಮನೆಯಲ್ಲಿ ತನ್ನ ಕೈಯಿಂದಲೇ ಕೃತಕವಾದ ಮಾಸ್ಕ್ ತಯಾರಿಸಿಕೊಳ್ಳುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಈ ವೃದ್ಧೆ ಎಲ್ಲರಿಗೂ ಮಾದರಿಯಾಗಿದ್ದಾಳೆ ಎಂದರು.
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಶಿಕ್ಷಣದ ವಿವಿಧ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಕರವೇ ಗ್ರಾಮ ಘಟಕದ ಸದಸ್ಯರು, ಟಾಸ್ಕ್ ಪೊರ್ಸ್ ಸಮಿತಿ ಸದಸ್ಯರು, ಗ್ರಾಪಂ ಮತ್ತು ಪಿಎಚ್‍ಸಿ ಸಿಬ್ಬಂದಿ ಸಿಬ್ಬಂದಿ ಈ ಅಜ್ಜಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts: