ಗೋಕಾಕ:ಸಾಮಾಜಿಕ ಅಂತರ ಕಾಯ್ದುಕೊಂಡು ರೇಶನ್ ಪಡೆದ ಗ್ರಾಮಸ್ಥರು
ಸಾಮಾಜಿಕ ಅಂತರ ಕಾಯ್ದುಕೊಂಡು ರೇಶನ್ ಪಡೆದ ಗ್ರಾಮಸ್ಥರು
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಎ 11 :
ದೇಶಾದ್ಯಂತ ಹರಡುತ್ತಿರುವ ಮಹಾಮಾರಿ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರ ಏ.11ರಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ವೇಳೆಯಲ್ಲಿ ಸ್ಥಳೀಯರು ಸಾಮಾಜಿಕ ಅಂತರ ಕಾಯ್ದುಕೊಂಡು ರೇಶನ್ ಪಡೆದರು.
ಗೋಕಾಕದ ಅಳತೆ ಮತ್ತು ಮಾಪನ ಇಲಾಖೆ ನಿರೀಕ್ಷಕ ನರಸಯ್ಯ ಅವರು ಸ್ಥಳೀಯ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಪಡಿತರ ವಿತರಣೆಯ ಅಳತೆ ಮತ್ತು ಮಾಪನ ಪರೀಕ್ಷಿಸಿ ಸ್ಥಳೀಯರಿಗೆ ಯಾವುದೇ ತರಹದ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಈ ವೇಳೆ ನ್ಯಾಯಬೆಲೆ ಅಂಗಡಿಕಾರರಿಗೆ ಸಲಹೆ ನೀಡಿದರು.
ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ರೇಶನ್ ಪಡೆದುಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಪಿಡಿಒ ಎಚ್.ಎನ್.ಬಾವಿಕಟ್ಟಿ ಅವರು ಗ್ರಾಮದ ಪಡಿತರದಾರರಿಗೆ ಸಲಹೆ ನೀಡಿದರು.
ಗೋಕಾಕ ಆಹಾರ ಶಿರಸ್ತದಾರ ಎಮ್.ಎ.ಚೌದರಿ, ಸಂಗಯ್ಯ ಹಿರೇಮಠ, ಸುರೇಶ ಕರೆಣ್ಣವರ, ಶ್ರೀಧರ ದೇಯಣ್ಣವರ, ಪ್ರಕಾಶ ಹಾಲಣ್ಣವರ ಸೇರಿದಂತೆ ಇತರರು ಇದ್ದರು.