ಮೂಡಲಗಿ:ಬಾಲಚಂದ್ರ ಜಾರಕಿಹೊಳಿ ಅವರಂತಹ ದಾನಿ ಮತ್ತೊಬ್ಬರಿಲ್ಲ-ಹಣಮಂತ ತೇರದಾಳ
ಬಾಲಚಂದ್ರ ಜಾರಕಿಹೊಳಿ ಅವರಂತಹ ದಾನಿ ಮತ್ತೊಬ್ಬರಿಲ್ಲ-ಹಣಮಂತ ತೇರದಾಳ
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಎ 29 :
ಪ್ರತಿ ಬಾರಿಯೂ ಜನ ಸಂಕಷ್ಟಕ್ಕೆ ಸಿಲುಕಿಕೊಂಡಾಗಲೆಲ್ಲಾ ಅಪದ್ಬಾಂದವನಂತೆ ಬಾಲಚಂದ್ರ ಜಾರಕಿಹೊಳಿ ಅವರು ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿದ್ದಾರೆ. ಈ ಹಿಂದೆ ಪ್ರವಾಹದ ಸಂಕಷ್ಟದಲ್ಲಿದ್ದಾಗ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಅವರು, ಈಗ ಕೊರೋನಾ ಬಿಕ್ಕಟಿನಲ್ಲಿ ಇಡೀ ಕ್ಷೇತ್ರದ ಜನತೆಗೆ ಅನ್ನ ನೀಡುವ ಮೂಲಕ ಅನ್ನದಾತರಾಗಿದ್ದಾರೆಂದು ಹಳ್ಳೂರಿನ ಮುಖಂಡ ಹಣಮಂತ ತೇರದಾಳ ಹೇಳಿದರು.
ಬುಧವಾರದಂದು ತಾಲೂಕಿನ ಪಟಗುಂದಿ ಮತ್ತು ಧರ್ಮಟ್ಟಿ ಗ್ರಾಮಗಳಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿರುವ ಆಹಾರ ಧಾನ್ಯಗಳ ದಿನಸಿ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು.
ಹಳ್ಳೂರ ಜಿಲ್ಲಾ ಪಂಚಾಯತಿ ಸೇರಿದಂತೆ ಅರಭಾಂವಿ ಮತಕ್ಷೇತ್ರದ ಎಲ್ಲ ಜಿ.ಪಂ ಕ್ಷೇತ್ರಗಳಲ್ಲಿ ಜನರಿಗೆ ಕಿಟ್‍ಗಳನ್ನು ವಿತರಿಸುವ ಮೂಲಕ ಎಲ್ಲ ಜನರ ಮನೆ ಮಾತಾಗಿದ್ದಾರೆ. ಇವರಂಥ ದಾನಿ ಮತ್ತೊಬ್ಬರಿಲ್ಲ, ಶ್ರೀಮಂತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಆದರೆ ಅವರಿಗೆ ದಾನ ಮಾಡುವ ಪ್ರವೃತ್ತಿ ಇರುವದಿಲ್ಲ, ಆದರೆ ಬಾಲಚಂದ್ರ ಜಾರಕಿಹೊಳಿ ಅವರು 76 ಸಾವಿರ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸುತ್ತಿರುವುದು ರಾಜ್ಯದಲ್ಲಿಯೇ ಇತಿಹಾಸ ಸೃಷ್ಟಿಸುವ ಕಾರ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಟೀಂ ಎನ್‍ಎಸ್‍ಎಫ್‍ನ ಸಿ.ಪಿ.ಯಕ್ಸಂಬಿ, ಮುಖಂಡರಾದ ಬಿ.ಬಿ.ಪೂಜೇರಿ, ಚನಗೌಡ ಪಾಟೀಲ, ಮರೆಪ್ಪ ಮರೆಪ್ಪಗೋಳ, ಬಸವರಾಜ ಕಸ್ತೂರಿ, ಲಕ್ಕಪ್ಪ ಕೆಳಗಡೆ, ಮಹಾದೇವ ಬಿಸಗುಪ್ಪಿ, ಪರಸಪ್ಪ ಉಪ್ಪಾರ, ಮಹಾದೇವ ಬಡ್ಡಿ, ಪರಸಪ್ಪ ಸನದಿ, ಶಿವು ಚಂಡಕಿ, ಹಣಮಂತ ನಾಯಿಕ, ಲಗಮಣ್ಣ ಕುಟ್ರಿ, ಜಡೇಪ್ಪ ಮಂಗಿ, ಅಶೋಕ ಸರ್ವಿ, ಸುರೇಶ ಪಿರೋಜಿ ಗ್ರಾಮ ಪಂಚಾಯತಿ ಸದಸ್ಯರು, ಪಿಡಿಓ, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು