RNI NO. KARKAN/2006/27779|Monday, December 23, 2024
You are here: Home » breaking news » ಘಟಪ್ರಭಾ:ಯುವಕರು ಸಂಘಟನ್ಮಾತಕ ಮನೋಭಾವ ಬೆಳೆಸಿಕೊಳ್ಳಿ : ಮಹಾನಿಂಗ ತೆಳಗೇರಿ

ಘಟಪ್ರಭಾ:ಯುವಕರು ಸಂಘಟನ್ಮಾತಕ ಮನೋಭಾವ ಬೆಳೆಸಿಕೊಳ್ಳಿ : ಮಹಾನಿಂಗ ತೆಳಗೇರಿ 

ಯುವಕರು ಸಂಘಟನ್ಮಾತಕ ಮನೋಭಾವ ಬೆಳೆಸಿಕೊಳ್ಳಿ : ಮಹಾನಿಂಗ ತೆಳಗೇರಿ

ಘಟಪ್ರಭಾ ಅ 16: ಯುವಕರು ಸಂಘಟನ್ಮಾತಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ಮಹಾನಿಂಗ ತೆಳಗೇರಿ ಹೇಳಿದರು.

ಅವರು ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ನೂತನವಾಗಿ ಮಂಗಳವಾರದಂದು ದಲಿತ ಸಂಘಟನೆಯ ಮಾದರ ಸಮಾಜ ಸುಧಾರಣಾ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಯುವಕರು ದುಶ್ವಟಗಳಿಗೆ ಬಲಿಯಾಗದೇ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು. ಸಮಾಜದ ಅಭಿವೃದ್ದಿಗೆ ನಿಸ್ವಾರ್ಥ ಮನೋಭಾವನೆಯಿಂದ ದುಡಿಯಬೇಕು. ಗ್ರಾಮೀಣ ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ದಿಗೂ ಶ್ರಮಿಸವಂತೆ ಕರೆ ನೀಡಿದರು. ದಲಿತ ಯುವ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆರ್ಥಿಕ,ಸಮಾಜಿಕವಾಗಿ ಸದೃಢಹೊಂದಲು ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಮಾಜದ ಜನರ ಅಶೋತ್ತರಗಳಿಗೆ ಸ್ಪಂದಿಸಬೇಕು. ದಲಿತ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳನ್ನು ಸಿಗುವಂತ ಕಾರ್ಯ ಮಾಡಬೇಕು. ಅಂಬೇಡ್ಕರರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜ ಸಂಘಟನೆಯಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು. ಸಮಾಜ ಸೇವೆ ಮಾಡುವ ವ್ಯಕ್ತಿಯ ಮನಸ್ಸಿನಲ್ಲಿ ದ್ವೇಷ, ವೈಮನಸ್ಸು ಇದ್ದರು ಆತನು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಸಮಿತಿ ನಾಲಫಲಕವನ್ನು ಶ್ರೀ ಯಲ್ಲಾಲಿಂಗ ಮಹಾರಾಜರು ಉದ್ಘಾಟಿಸಿದರು. ಪರುಶರಾಮ ಪೂಜೇರಿ ಅವರು ಗಾಂಧಿಜಿ ಹಾಗೂ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗ್ರಾ.ಪಂ ಉಪಾಧ್ಯಕ್ಷೆ ಬಸವ್ವ ಪೂಜೇರಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಂಕರ ಕಟ್ಟಿಮನಿ, ಎಲ್.ಬಿ. ತೆಳಗೇರಿ, ದುಂಡಪ್ಪ ಕಳಸನ್ನವರ, ತಿಪ್ಪಣ್ಣಾ ಧರ್ಮಟ್ಟಿ, ಮುತ್ತೇಪ್ಪ ಕಳಸನ್ನವರ, ಮಾನಿಂಗ ತೆಳಗೇರಿ, ಪ್ರಕಾಶ ಮ್ಯಾಗೇರಿ, ಸುರೇಶ ಕಬ್ಬೂರ, ಲಕ್ಷ್ಮಣ ಮ್ಯಾಗೇರಿ, ಶೆಟ್ಟೆಪ್ಪ ತೆಳಗೇರಿ, ಲಗಮಪ್ಪ ತಳವಾರ, ದುರ್ಗಪ್ಪ ಕಟ್ಟಿಮನಿ, ಪ್ರೇಮಸಾಗರ ಧರ್ಮಟ್ಟಿ ಸೇರಿದಂತೆ ಇತರರು ಇದ್ದರು.

Related posts: