ಘಟಪ್ರಭಾ:ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ
ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮೇ 7 :
ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತಿ ಸರ್ವ ಸದಸ್ಯರು 17 ವಾರ್ಡಗಳಲ್ಲಿ ಮಹಾಮಾರಿ ಕೊರೋನಾ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಪ.ಪಂ ಸದಸ್ಯರು, ಶಿಕ್ಷಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತಯರು, ಕೊರೋನಾ ಸೈನಿಕರು ಮನೆ ಮನೆಗೆ ತೆರಳಿ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆಯನ್ನು ಗುರುವಾರದಂದು ನಡೆಸಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ಆಶಾ ಕಾರ್ಯಕರ್ತರಾದ ರೂಪಾ ಜಿರಲಿ, ಶಿಕ್ಷಕರಾದ ಡಿ.ಕೆ ಜಮಾದಾರ, ಎಮ್.ಎ. ಸಿದ್ದಿಕಿ, ಅಂಗನವಾಡಿ ಕಾರ್ಯಕರ್ತರಾದ ಕಲ್ಪನಾ ಕುಲಕರ್ಣಿ, ಕೊರೋನಾ ಸೈನಿಕರಾದ ಜುಬೇದ ಡಾಂಗೆ, ಶಂಕರ ಬೋಸಲೆ, ಸುಭಾನಿ ಕಬ್ಬೂರ, ತನ್ನೀರ ನಾಲಬಂದ, ಶಂಕರ ಬೋಸಲೆ ಸೇರಿದಂತೆ ಅನೇಕರು ಇದ್ದರು.