RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಕೊಲೆ ಹಿನ್ನೆಲೆ : ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ : ಎಸ್.ಪಿ ಲಕ್ಷ್ಮಣ ನಿಂಬರಗಿ

ಗೋಕಾಕ:ಕೊಲೆ ಹಿನ್ನೆಲೆ : ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ : ಎಸ್.ಪಿ ಲಕ್ಷ್ಮಣ ನಿಂಬರಗಿ 

ಕೊಲೆ ಹಿನ್ನೆಲೆ : ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ : ಎಸ್.ಪಿ ಲಕ್ಷ್ಮಣ ನಿಂಬರಗಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 8 :

ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ.

ಕೊಲೆ ಮಾಡಿ ಫರಾರಿಯಾದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ ಶುಕ್ರವಾರದಂದು ಕೊಲೆ ಘಟನೆ ನಡೆದ ಸ್ಥಳದ ಪರಿಶೀಲನೆ ನಡೆಸಿದ ಬಳಿಕೆ ನಗರ ಠಾಣೆಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಬುಧವಾರದಂದು ನಗರದ ಆದಿ ಜಾಬಂವ ನಗರದ ಹನುಮಂತ ದೇವರ ದೇವಸ್ಥಾನ ಹತ್ತಿರ ಕುಳಿತಿದ್ದ ಸಂಧರ್ಭದಲ್ಲಿ ಆರೋಪಿಗಳಾದ ಗಂಗ್ಯಾ ಅಲಿಯಾಸ ಗಂಗಾಧರ ಶಿಂದೆ , ವಿನಾಯಕ ಹಡಗಿನಾಳ , ವಿಠಲ ಪವಾರ ಮತ್ತು ನಾಲ್ಕೆದು ಜನ ರಾತ್ರಿ 8 ಘಂಟೆ ಸುಮಾರಿಗೆ ಅಟೋದಲ್ಲಿ ಬಂದ ಸಿದ್ದು ಅರ್ಜುನ ಕಣಮಡಿ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೂರು ನೀಡಲಾಗಿದ್ದು , ಈ ಹಿನ್ನೆಲೆಯಲ್ಲಿ ಆತನ ಸ್ನೇಹಿತರು ಆತನನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆ.ಎಲ್‌.ಇ ಆಸ್ಪತ್ರೆಗೆ ದಾಖಲಿಸಲಾಗಿದೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಸಿದ್ದು ಕಣಮಡಿ ಸಾವನ್ನಪ್ಪಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ಆರೋಪ ಸಂಖ್ಯೆ 72/2020 . ಐಪಿಸಿ ಸೆಕ್ಷನ್ 143, 142, 302, 504, 506 ,149 , ಐಪಿಸಿ 3+2+5 ಎಸ್.ಸಿ ಎಸ್.ಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ರಾಮದುರ್ಗ ಡಿ.ಎಸ್.ಪಿ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬಿಸಲಾಗಿದೆ. 2017 ರಲ್ಲಿ ರೋಹಿತ ಪಾಟೀಲ ಎಂಬ ಯುವಕನ ಕೊಲೆಯಾಗಿರುತ್ತದೆ ಆ ಕೊಲೆ ಹಿನ್ನೆಲೆಯಲ್ಲಿ ಮರಾಠ ಹುಡುಗರು ಮತ್ತು ಡಿ.ಎಸ್.ಎಸ್. ಹುಡುಗರ ಮಧ್ಯೆ ಹಲವಾರು ಸನ್ನಿವೇಶಗಳಲ್ಲಿ ಗಲಾಟೆಗಳಾಗಿ ಇಬ್ಬರ ಮಧ್ಯೆ ಮನಸ್ತಾಪ ಮಿರುತ್ತೆ ಈ ಹಿನ್ನೆಲೆಯಲ್ಲಿ ಸಿದ್ದು ಅರ್ಜುನ ಕಣಮಡೆ ನ್ನು ಕೊಲೆ ಗೈಯಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ . ಈಗಾಗಲೇ ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ನಿಷಪಕ್ಷಪಾತ ತನಿಖೆ ನಡೆಯಿಸಿ ಆರೋಪಿಗಳಿಗೆ ಕಾನೂನು ರೀತಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಗೋಕಾಕ ಸಿಪಿ‌ಐ ಗೋಪಾಲ ರಾಠೋಡ ಇದ್ದರು

Related posts: