ಗೋಕಾಕ:ಲಾಕಡೌನ ಸಡಿಲಿಕೆ : ಇಂದಿನಿಂದ ರಸ್ತೆಗಿಳಿದ ಗೋಕಾಕ ಘಟಕದ 60 ಬಸಗಳು
ಲಾಕಡೌನ ಸಡಿಲಿಕೆ : ಇಂದಿನಿಂದ ರಸ್ತೆಗಿಳಿದ ಗೋಕಾಕ ಘಟಕದ 60 ಬಸಗಳು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 19 :
ಎರೆಡು ತಿಂಗಳಿನಿಂದ ಲಾಕಡೌನ ನಿಂದಾಗಿ ಸ್ಥಗಿತಗೊಂಡಿದ್ದ ಬಸ್ಸ ಸಂಚಾರ ಇಂದು ಪುನಃ ಪ್ರಾರಂಭಗೊಂಡಿದೆ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕಿನ ವಿವಿಧ ಗ್ರಾಮಗಳಿಗೆ ಬಸಗಳು ಸಂಚರಿಸಲಿವೆ
ವಾಕರಸಾ ಸಂಸ್ಥೆಯ ಬಸಗಳು ರೆಡ್ ಝೋನ್ , ಕ್ವಾಟನಮೆಂಟ್ ಪ್ರದೇಶಗಳನ್ನು ಹೊರತು ಪಡೆಸಿ ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸಂಚರಿಸಲಿವೆ . ಮಂಗಳವಾರದಿಂದ ರಾಜಿ ಸರಕಾರ ವಿಧಿಸಿರುವ ನಿಯಮದಂತೆ ಬೆಳಿಗ್ಗೆ 7 ರಿಂದ ಸಾಯಂಕಾಲ 7 ಗಂಟೆವರೆಗೆ ಬಸಗಳು ಸಂಚಾರ ಬೆಳೆಸಲಿವೆ .
ಇದಕ್ಕೆ ಪೂರಕವಾಗಿ ಗೋಕಾಕ ಘಟಕದವರು ಸಹ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡು ಸಂಚಾರವನ್ನು ಪ್ರಾರಂಭಿಸಿವೆ ಎಂದು ಘಟಕದ ವ್ಯವಸ್ಥಾಪಕರು ಪತ್ರಿಕೆಗೆ ತಿಳಿಸಿದ್ದಾರೆ . ಗೋಕಾಕ ಘಟಕದಿಂದ ಪ್ರತಿನಿತ್ಯ ಸಂಚರಿಸುತ್ತಿದ್ದ 115 ಬಸಗಳಲ್ಲಿ 60 ಬಸಗಳು ಗೋಕಾಕ ದಿಂದ ವಿವಿಧ ಜಿಲ್ಲೆ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ , ತಾಲೂಕಿನ ಒಳಗೆ ಸಂಚರಿಸಲಿದ್ದು, ಒಂದು ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೋಳ್ಳುವ ದೃಷ್ಟಿಯಿಂದ ಕೆವಲ 30 ಜನರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಬಸ ಹತ್ತುವ ಮುನ್ನಾ ಪ್ರಮಾಣಿಕರಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಸೈನಿಟೈಜರ ಮಾಡಲಾಗುವದು . ಇದಕ್ಕಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಬಸ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಲ್ಲಿದ್ದಾರೆ . ಬಸನಲ್ಲಿ ಸಂಚರಿಸುವ ಪ್ರತಿಯೊಬ್ಬ ಪ್ರಯಾಣಿಕ ಕಡ್ಡಾಯವಾಗಿ ಮಾಸ್ಕಗಳನ್ನು ಧರಿಸಿ ಪ್ರಯಾಣ ಬೆಳೆಸಬೇಕು ಸರಕಾರ ಮಾನ್ಯ ಮಾಡಿರುವ ಆಧಾರ ಕಾರ್ಡ, ಚುನಾವಣಾ ಗುರುತಿನ ಚೀಟಿಯನ್ನು ನಿರ್ವಾಹಕರಿಗೆ ತೋರಿಸಬೇಕು .
ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಹೇಳಲು ಕೆ.ಎಸ್.ಆರ್.ಟಿ ಸಿ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.