ಗೋಕಾಕ:ಕ್ವಾರಂಟನ್‍ನಿಂದ ಪರಾರಿಯಾಗಿದ್ದ ಮಹಿಳೆಯನ್ನು ವಶಕ್ಕೆ ಪಡೆದು ಮತ್ತೆ ಕ್ವಾರಂಟನ್ ಮಾಡಿದ ಪೊಲೀಸರು
ಕ್ವಾರಂಟನ್‍ನಿಂದ ಪರಾರಿಯಾಗಿದ್ದ ಮಹಿಳೆಯನ್ನು ವಶಕ್ಕೆ ಪಡೆದು ಮತ್ತೆ ಕ್ವಾರಂಟನ್ ಮಾಡಿದ ಪೊಲೀಸರು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 24 :
ನಗರದ ಹಾಸ್ಟೇಲೊಂದರಲ್ಲಿ ಕ್ವಾರಂಟನ್‍ನಲ್ಲಿದ್ದ ಮಹಿಳೆಯೊರ್ವಳು ಪರಾರಿಯಾಗಿದ್ದ ಘಟನೆ ಶನಿವಾರದಂದು ಸಂಜೆ ಜರುಗಿದೆ.
ಮಹಾರಾಷ್ಟ್ರದ ಗಡಹಿಂಗ್ಲಜ್‍ದ ನೂಲಿ ಗ್ರಾಮದ ಮಹಿಳೆಯು ತನ್ನ ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ಕಳೆದ 4 ದಿನಗಳ ಹಿಂದೆ ಗೋಕಾಕ ತಾಲೂಕಿನ ಪಂಜಾನಟ್ಟಿ ಗ್ರಾಮದ ತವರು ಮನೆಗೆ ಬಂದಿದ್ದಳು. ಮಹಿಳೆಯು ಮಹಾರಾಷ್ಟ್ರ ರಾಜ್ಯದಿಂದ ಬಂದಿದ್ದಾಳೆಂದು ಗ್ರಾಮಸ್ಥರು ಪೋಲೀಸರಿಗೆ ತಿಳಿಸಿ ಅವರ ಸಹಾಯದಿಂದ ನಗರದ ಬಿಸಿಎಮ್ ಹಾಸ್ಟೇಲ್‍ನಲ್ಲಿ ಕ್ವಾರಂಟನ್‍ನಲ್ಲಿ ಇರಿಸಿದ್ದರು. ಆದರೆ ಮಹಿಳೆಯು ಫೇರೋಲ್ ಮೇಲೆ ಬಂದಿದ್ದ ಗಂಡನ್ನು ಪದೆ-ಪದೇ ಫೋನ ಮುಖಾಂತರ ಸಂಪರ್ಕಿಸಿ ಕರೆದುಕೊಂಡು ಹೋಗುವಂತೆ ಪಟ್ಟು ಹಿಡಿದಾಗ ಪರಿಣಾಮ ಮಹಿಳೆಯ ಪತಿಯು ಶನಿವಾರದಂದು ನಗರದ ಬಸ್ ನಿಲ್ದಾಣಕ್ಕೆ ಬಂದಾಗ ಕ್ವಾರಂಟನಲ್ಲಿದ್ದ ಮಹಿಳೆಯು ಹಾಸ್ಟೇಲ್‍ನಿಂದ ತಪ್ಪಿಸಿಕೊಂಡು ಗಂಡನೊಂದಿಗೆ ಸಮೀಪದ ಬೆಲ್ಲದ ಬಾಗೇವಾಡಿ ಗ್ರಾಮದ ಸಂಬಂಧಿಕರೊಬ್ಬರ ಮನೆಯಲ್ಲಿ ವಾಸವಾಗಿದ್ದರು. ಈ ವಿಷಯ ನಗರದಲ್ಲಿ ಕಾಡ್ಗಿಂಚಿನಂತೆ ಹಬ್ಬಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು. ಈ ವಿಷಯದ ಗಂಭಿರತೆಯನ್ನು ಅರಿತ ಪೋಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮಹಿಳೆ ಸೇರಿದಂತೆ ಪತಿ ಹಾಗೂ ಮಗುವನ್ನು ವಶಕ್ಕೆ ಪಡೆದು ಮತ್ತೇ ಕ್ವಾರಂಟನಲ್ಲಿ ಇಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಪೋಲೀಸ ಮೂಲಗಳು ತಿಳಿಸಿವೆ.
ಈ ಕುರಿತು ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.