RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಸಂಡೇ ಗೋಕಾಕ ಸ್ತಬ್ದ : ಬೆಳ್ಳೆಗೆಯಿಂದ ರಸ್ತೆಗೆ ಇಳಿಯದ ಜನತೆ , ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್

ಗೋಕಾಕ:ಸಂಡೇ ಗೋಕಾಕ ಸ್ತಬ್ದ : ಬೆಳ್ಳೆಗೆಯಿಂದ ರಸ್ತೆಗೆ ಇಳಿಯದ ಜನತೆ , ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ 

ಸಂಡೇ ಗೋಕಾಕ ಸ್ತಬ್ದ : ಬೆಳ್ಳೆಗೆಯಿಂದ ರಸ್ತೆಗೆ ಇಳಿಯದ ಜನತೆ , ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 24 :

 
ವಿಶ್ವದಾದ್ಯಂತ ಹರಡಿರುವ ಕೊರೋನಾ ವೈರಸ್ ( ಸೋಂಕು) ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಸರಕಾರ ಕರೆ ನೀಡಿದ್ದ 36 ಘಂಟೆಗಳ ಲಾಕಡೌನ ಗೆ ಗೋಕಾಕದಲ್ಲಿ ಬಾರಿ ಬೆಂಬಲ ವ್ಯಕ್ತವಾಗಿದೆ.

ರವಿವಾರ ಮುಂಜಾನೆಯಿಂದಲೇ ಜನರು ಸ್ವಯಂ ಪ್ರೇರಿತರಾಗಿ ಮನೆಯಲ್ಲೇ ಉಳಿದುಕೊಂಡು ತಮ್ಮ ಬೆಂಬಲವನ್ನು ಸೂಚಿಸಿದರು. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನಗರದ ಬಸವೇಶ್ವರ ವೃತ್ತ , ಸಂಗೋಳ್ಳಿ ರಾಯಣ್ಣ ವೃತ್ತ, ಭಾಪನಾ ಕೂಟ್, ತಂಬಾಕ ಕೂಟ್ , ನಾಕಾ ನಂ 1 ರ ಚನ್ನಮ್ಮ ವೃತ್ತ ಸೇರಿದಂತೆ ಇತರ ಕಡೆಗಳಲ್ಲಿ ಜನರಿಲ್ಲದೆ ಪರಿಣಾಮ ರಸ್ತೆಗಳು ಬಿಕ್ಕೋ ಎನ್ನುತ್ತಿದ್ದವು , ಅಗತ್ಯ ವಸ್ತುಗಳಾದ ಔಷಧ, ಪೆಟ್ರೋಲ್ ಬಂಕ್ ಗಳು ತೆರೆದಿದ್ದರು ಸಹ ಜನರು ಹೆಚ್ಚಾಗಿ ಅತ್ತಕಡೆ ಸುಳಿಲಿಲ್ಲ ಮೊನ್ನಯಷ್ಟೆ ರಸ್ತೆಗೆ ಇಳಿದಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಗಳು ಒಂದು ದಿನದ ಲಾಕಡೌನ ದಿಂದ ಇಂದು ಮತ್ತೆ ರಸ್ತೆಗಳಿಗೆ ಇಳಿಯಲೆ ಇಲ್ಲ . ಗೋಕಾಕ ಸ್ತಬ್ದವಾಗಿದ್ದರೂ ಸಹ ಅಗತ್ಯ ಸೇವೆಗಳಲ್ಲಿ ಒಂದಾದ ಆರೋಗ್ಯ ಸೇವೆ ನಗರದಲ್ಲಿ ದಾರಾಳವಾಗಿ ಸಿಗುವಂತಿತ್ತು , ನಗರದ ಸರಕಾರಿ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಕೂಡಾ ಅಷ್ಟೊಂದು ಪ್ರಮಾಣದಲ್ಲಿ ಜನರು ಆಸ್ಪತ್ರೆಗತ್ತ ಸುಳಿಯಲಿಲ್ಲ. ಒಟ್ಟಾರೆ ಇಡೀ ವಿಶ್ವವನ್ನು ಕಂಗೆಡಿಸಿರುವ ಮಹಾಮಾರಿ ಕೊರೋನಾವನ್ನು ಹೊಡೆದೋಡಿಸಲು ಸರಕಾರಗಳು ವಿವಿಧ ಜಾಗೃತಿ ಕ್ರಮಗಳನ್ನು ಕೈಗೊಂಡು ಕಾರ್ಯ ಪ್ರವೃತವಾಗಿವೆ.
ಗೋಕಾಕ ನಗರದ ಜನತೆ ಎಲ್ಲರೂ ಒಂದಾಗಿ 36 ಘಂಟೆಗಳ ಲಾಕಡೌನಗೆ ಸಂಪೂರ್ಣ ಬೆಂಬಲ ಸೂಚಿಸಿ ಕೊರೋನಾ ತಡೆಗಟ್ಟಲು ಸಹಕಾರ ನೀಡಿದರು .

Related posts: