RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಕೋರೋನಾ ಹಿನ್ನೆಲೆ : ತಾಲೂಕಾ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ : ಡಾ.ಎಸ್.ಬಿ. ಬೊಮ್ಮನಹಳ್ಳಿ

ಗೋಕಾಕ:ಕೋರೋನಾ ಹಿನ್ನೆಲೆ : ತಾಲೂಕಾ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ : ಡಾ.ಎಸ್.ಬಿ. ಬೊಮ್ಮನಹಳ್ಳಿ 

ಕೋರೋನಾ ಹಿನ್ನೆಲೆ : ತಾಲೂಕಾ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ : ಡಾ.ಎಸ್.ಬಿ. ಬೊಮ್ಮನಹಳ್ಳಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ.3-

 

 
ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ತಲಾ ಒಂದೊಂದು ಕೊರೋನಾ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು.
ಬುಧವಾರದಂದು ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಾ ಅಧಿಕಾರಿಗಳ ಸಭೆ ನಡೆಯಿಸಿದ ನಂತರ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಂಬೈ ಹಾಗೂ ಹೊಸದಿಲ್ಲಿಯಿಂದ ಹಿಂತಿರುಗಿ ಬಂದ ಇಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕಲ್ಲೋಳಿ ಮತ್ತು ಶಿಲ್ತಿಭಾಂವಿ ಗ್ರಾಮದ ಕೊರೋನಾ ಸೋಂಕಿತರು ವಾಸಿಸುವ ಮನೆಯ ಸುತ್ತಮುತ್ತಲಿನ 50 ಮೀಟರ ಪ್ರದೇಶವನ್ನು ಕಂಟೋನ್‍ಮೆಂಟ್ ಜೋನ ಎಂದು ಘೋಷಿಸಲಾಗಿದೆ. ಅವರ ಕುಟುಂಬ ಸದಸ್ಯರಿಗೆ ಸಹ ಹೋಮ್ ಕ್ವಾರಂಟನ್ ಮಾಡಲಾಗಿದ್ದು ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆರೋಗ್ಯ, ಪೋಲೀಸ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಕೈಗೊಳ್ಳಲು ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಕೊರೋನಾ ಸೋಂಕಿತರ ಸಂರ್ಪಕಕ್ಕೆ ಬಂದ 98 ಜನರನ್ನು ಈಗಾಗಲೇ ಹೋಮ ಕ್ವಾರಂಟನ್ ಮಾಡಲಾಗಿದ್ದು, ಮನೆ ಬಿಟ್ಟು ಹೊರಗಡೆ ಬಾರದಂತೆ ಸೂಚಿಸಲಾಗಿದೆ.
ಲೋಕೋಪಯೋಗಿ ಇಲಾಖೆಯ ನಗರದ ಉಪವಿಭಾಗದ ಕಚೇರಿಯನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಿದ್ದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರಕರ್ತರು ಪ್ರಶ್ನಿಸಿದಾಗ ಈಬಗ್ಗೆ ತಮಗೆ ಮಾಹಿತಿ ಇಲ್ಲ, ಅದರ ಬಗ್ಗೆ ವಿವರ ಪಡೆಯುವದಾಗಿ ತಿಳಿಸಿದರು.
ನಗರದ ಖಾಸಗಿ ಆಸ್ಪತ್ರೆಗಳು ಇನ್ನೂ ರೋಗಿಗಳನ್ನು ನೋಡುತ್ತಿಲ್ಲ. ಅಲ್ಲದೆ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳನ್ನು ತಪಾಸಣೆ ಮಾಡುತ್ತಿಲ್ಲ ಎನ್ನುವದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನವನ್ನು ಪತ್ರಕರ್ತರು ಸೆಳೆದಾಗ ಈಗ ನಗರದಲ್ಲಿಯ ಆಸ್ಪತ್ರೆಗೆ ಈಗ ಭೇಟಿ ನೀಡುತ್ತಿದ್ದು ಈ ಬಗ್ಗೆ ಚರ್ಚಿಸುವದಾಗಿ ಜಿಲ್ಲಾಧಿಕಾರಿಗಳು ಬೊಮ್ಮನಹಳ್ಳಿ ಹೇಳಿದರು.
ನಗರದ ನಿರಾಶ್ರಿತರಲ್ಲಿ ಕೆಲವರು ಮನೆಗಳನ್ನು ನಿರ್ಮಿಸಿಕೊಂಡಿದ್ದು ಆ ಕ್ಷೇತ್ರದಲ್ಲಿ ಗಟಾರ, ರಸ್ತೆ ನಿರ್ಮಿಸಲು ನಗರಸಭೆಯಲ್ಲಿ ಫಂಡ ಇಲ್ಲವೆಂದು ಹೇಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ನಗರಸಭೆಗೆ ಸರಕಾರದಿಂದ 25ಕೋಟಿ ರೂ. ಅನುದಾನ ಬಂದಿದ್ದು ಅದಕ್ಕಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಟೆಂಡರ ಕರೆಯುವ ಹಂತದಲ್ಲಿ ಇದೆ ಎಂದು ಉತ್ತರಿಸಿದರು.
ಮೆಳವಂಕಿ ನಿರಾಶ್ರಿತರ ಮನವಿ
ಸಭೆ ಮುಗಿಸಿ ಕಚೇರಿಯಿಂದ ಹೊರ ಬಂದ ಜಿಲ್ಲಾಧಿಕಾರಿಗಳನ್ನು ಮೆಳವಂಕಿ ಗ್ರಾಮದ ನೆರೆ ಸಂತ್ರಸ್ತರು ಭೇಟಿಯಾಗಿ ಮತ್ತೊಂದು ಮಳೆಗಾಲ ಬಂದರೂ ಇನ್ನೂವರೆಗೆ ತಮಗೆ ಪರಿಹಾರ ದೊರೆತಿಲ್ಲ. ಅಲ್ಲದೆ ಈವರೆಗೂ ಶಾಲೆಗಳಲ್ಲಿ ವಾಸಿಸುತ್ತಿದ್ದು ಈಗ ಶಾಲೆಗಳು ಪ್ರಾರಂಭವಾಗುವದಿದ್ದು ಜಾಗಾ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ತಮ್ಮ ಗೋಳನ್ನು ತೋಡಿಕೊಂಡರು. ಇದಕ್ಕೆ ಜಿಲ್ಲಾಧಿಕಾರಿಗಳು ಅವಶ್ಯಕ ಕ್ರಮ ಕೈಕೊಳ್ಳುವ ಭರವಸೆ ನೀಡಿದರು.

Related posts: