ಗೋಕಾಕ:ಜಾರಕಿಹೊಳಿ ಸಹೋದರರಿಗೆ ಕೊರೋನಾ ಶಾಕ್ : ಒಂದೇ ದಿನ ಮೂವರ ಕ್ಷೇತ್ರಕ್ಕೆ ಒಕ್ಕರಿಸಿದ ಮಹಾಮಾರಿ
ಜಾರಕಿಹೊಳಿ ಸಹೋದರರಿಗೆ ಕೊರೋನಾ ಶಾಕ್ : ಒಂದೇ ದಿನ ಮೂವರ ಕ್ಷೇತ್ರಕ್ಕೆ ಒಕ್ಕರಿಸಿದ ಮಹಾಮಾರಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 3 :
ಜಾರಕಿಹೊಳಿ ಸಹೋದರರು ಪ್ರತಿನಿಧಿಸುವ ಗೋಕಾಕ , ಅರಬಾಂವಿ ಮತ್ತು ಯಮಕನಮರಡಿ ಮತಕ್ಷೇತ್ರಗಳಿಗೆ ಒಂದೇ ದಿನ ಕೊರೋನಾ ಸೋಂಕು ಧೃಡಪಟ್ಟಿದ್ದು ಸಾರ್ವಜನಿಕರಲ್ಲಿ ಆಶ್ಚರ್ಯ ಉಂಟುಮಾಡಿದೆ
ಮಂಗಳವಾರದಂದು ಸಚಿವ ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ಮತಕ್ಷೇತ್ರದ ಶಿಲ್ತಿಬಾಂವಿಯಲ್ಲಿ 1 , ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುವ ಅರಬಾಂವಿ ಮತಕ್ಷೇತ್ರದ ಕಲ್ಲೋಳಿಯಲ್ಲಿ 1 ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಮತಕ್ಷೇತ್ರದ ದಡ್ಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 21 ಕೊರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದು ಸಾರ್ವಜನಿಕರ ಹುಬ್ಬೇರುವಂತೆ ಮಾಡಿದೆ .
ಕಳೆದ 3 ತಿಂಗಳಿನಿಂದ ಕೊರೋನಾ ಮಹಾಮಾರಿ ತಮ್ಮ ಅಟ್ಟಹಾಸ ಮೆರೆಯುತ್ತಿದ್ದು, ಸಾರ್ವಜನಿಕರು ಭಯದಲ್ಲಿಯೇ ಜೀವನ ಸಾಗಿಸುತ್ತಿರುವ ಸಂಧರ್ಭದಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗದ ಜಾರಕಿಹೊಳಿ ಸಹೋದರರು ಪ್ರತಿನಿಧಿಸುವ ಕ್ರೇತ್ರಗಳಲ್ಲಿ ಒಮ್ಮೆಲೇ ಕೊರೋನಾ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿವೆ. ಕಾಕತಾಳಿಯಂತೆ ಮೂವರು ಸಹೋದರರು ಪ್ರತಿನಿಧಿಸುವ ಮತಕ್ಷೇತ್ರಗಳಲ್ಲಿ ಒಂದೇ ದಿನ ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿರುವದು ಸಾರ್ವಜನಿಕರಲ್ಲಿ ಗುಸುಗುಸು ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.
ರಾಜಕೀಯವಾಗಿ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಜಾರಕಿಹೊಳಿ ಸಹೋದರರು ಕೊರೋನಾಕ್ಕೆ ಸಂಬಂಧಿಸಿದಂತೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎಂದು ಸಾರ್ವಜನಿಕರು ಹಾಸೆ ಚಟಾಕೆಗಳನ್ನು ಹಾರಿಸುತ್ತಿದ್ದಾರೆ .