ಗೋಕಾಕ:ಸಚಿವ ರಮೇಶ ನಡೆಸಿದ ಸಭೆಗೆ ಸಹೋದರ ಲಖನ ಗುಂಪಿನ ಸದ್ಯಸರು ಗೈರು
ಸಚಿವ ರಮೇಶ ನಡೆಸಿದ ಸಭೆಗೆ ಸಹೋದರ ಲಖನ ಗುಂಪಿನ ಸದ್ಯಸರು ಗೈರು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 6 :
ನಗರಸಭೆಯಲ್ಲಿ ನಗರದ ಅಭಿವೃದ್ಧಿ ಸಂಬಂಧವಾಗಿ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಕರೆದ ಅಧಿಕಾರಿಗಳ ಹಾಗೂ ನೂತನ ನಗರಸಭೆ ಸದಸ್ಯರ ಸಭೆ ಶನಿವಾರದಂದು ಜರುಗಿತು.
ನಗರದ ಅಭಿವೃದ್ಧಿ ಸಂಬಂಧವಾಗಿ ಅತ್ಯಂತ ಮಹತ್ವದ್ದಾಗಿದ್ದ ಈ ಸಭೆಯಲ್ಲಿ ನಗರಸಭೆಯಲ್ಲಿಯ ವಿರೋಧಿ ಗುಂಪಿನ ಸದಸ್ಯರೇ ಗೈರಹಾಜರಾಗಿದ್ದು ಎಲ್ಲರ ಗಮನ ಸೆಳೆಯಿತು. ನಗರಸಭೆಯ 18 ಸದಸ್ಯರು ಮಾತ್ರ ಇದ್ದರು. ಅದರಲ್ಲೂ ಮಹಿಳಾ ಸದಸ್ಯರ ಬದಲಿಗೆ ಅವರ ಗಂಡಂದಿರು ಹಾಗೂ ಮಕ್ಕಳು ಆಗಮಿಸಿದ್ದು ಎದ್ದು ಕಾಣುವಂತಿತ್ತು.