RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಚೀನಾ ದೇಶದ ವಸ್ತುಗಳನ್ನು ಬಹಿಷ್ಕರಿಸಿ : ನಾರಾಯಣ ಮಠಾಧಿಕಾರಿ

ಗೋಕಾಕ:ಚೀನಾ ದೇಶದ ವಸ್ತುಗಳನ್ನು ಬಹಿಷ್ಕರಿಸಿ : ನಾರಾಯಣ ಮಠಾಧಿಕಾರಿ 

ಚೀನಾ ದೇಶದ ವಸ್ತುಗಳನ್ನು ಬಹಿಷ್ಕರಿಸಿ : ನಾರಾಯಣ ಮಠಾಧಿಕಾರಿ

ಗೋಕಾಕ ಅ 22: ಪದೇ ಪದೆ ಆಕ್ರಮಣದ ಬೆದರಿಕೆಯನ್ನು ಹಾಕುತ್ತಿರುವ ಚೀನಾ ದೇಶಕ್ಕೆ ತಕ್ಕ ಪಾಠವನ್ನು ಕಲಿಸುವ ನಿಟ್ಟಿನಲ್ಲಿ ನಾವಿಂದು ಆ ದೇಶದ ವಸ್ತುಗಳಿಗೆ ಬಹಿಷ್ಕಾರ ಹಾಕಬೇಕಾಗಿದೆ ಎಂದು ವಿಶ್ವ ಹಿಂದು ಪರಿಷತ್ತಿನ ಬೆಳಗಾವಿ ಜಿಲ್ಲಾ ವಿಭಾಗೀಯ ಕಾರ್ಯದರ್ಶಿ ನಾರಾಯಣ ಮಠಾಧಿಕಾರಿ ಹೇಳಿದರು.

ಮಂಗಳವಾರದಂದು ನಗರದಲ್ಲಿ ಸ್ವದೇಶಿ ಜಾಗರಣಾ ಮಂಚ್ ಇವರ ಆಶ್ರಯದಲ್ಲಿ ಬೈಕ್ ರ್ಯಾಲಿಯ ಮೂಲಕ ರಾಷ್ಟ್ರೀಯ ಸ್ವದೇಶಿ-ಸುರಕ್ಷಾ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚೀನಾ ದೇಶ ಕುತಂತ್ರದಿಂದ ನಮ್ಮ ದೇಶದ ಆರ್ಥಿಕ ವ್ಯವಸ್ಥೆಗೆ ದಕ್ಕೆ ತರುವುದಕ್ಕಾಗಿಯೇ ಚೀನಿ ನಿರ್ಮಿತ ಕಳಪೆ ವಸ್ತುಗಳನ್ನು ನಮ್ಮ ದೇಶಕ್ಕೆ ರಪ್ತು ಮಾಡುತ್ತಿದೆ. ಆ ದೇಶದ ವಸ್ತುಗಳನ್ನು ಬಹಿಷ್ಕರಿಸಿ ದೇಶಿಯ ವಸ್ತುಗಳನ್ನು ಉಪಯೋಗಿಸಿದರ ಮೂಲಕ ದೇಶಿಯ ಉದ್ಯಮಗಳನ್ನು ಬೆಳೆಸಿ ಸ್ವಾವಲಂಬಿಗಳಾಗುವಂತೆ ಕರೆ ನೀಡಿದರು.
ಜೆಸಿಐ ಸಂಸ್ಥೆಯ ಅಧ್ಯಕ್ಷ ವಿಷ್ಣು ಲಾತೂರ ಮಾತನಾಡಿ, ಚೀನಾ ದೇಶದಿಂದ ನಿರ್ಮಿತ ವಸ್ತುಗಳನ್ನು ನಾವು ಖರಿದಿಸುವುದರಿಂದ ನಮ್ಮ ದೇಶದ ಸೈನಿಕರನ್ನು ಕೊಲ್ಲಲು ನಾವೇ ಆರ್ಥಿಕ ಸಹಾಯ ಮಾಡಿದ್ದಂತಾಗುತ್ತದೆ. ಆ ದೇಶದ ವಸ್ತುಗಳನ್ನು ಬಳಸದೇ ಸ್ವದೇಶಿ ನಿರ್ಮಿತ ವಸ್ತುಗಳನ್ನು ಬಳಸುವುದರಿಂದ ನಮ್ಮ ದೇಶ ಆರ್ಥಿಕವಾಗಿ ಬಲಿಷ್ಠವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತವಗಮಠದ ಶ್ರೀ ಬಾಳಯ್ಯ ಸ್ವಾಮಿಗಳು, ಪ್ರವೀಣ ಟಕ್ಕಳಕಿ, ಚೂನಪ್ಪ ಹಟ್ಟಿ, ಸುನೀಲ ಬೆನವಾಡ, ಲಕ್ಕಪ್ಪ ತಹಶೀಲದಾರ, ನಾರಾಯಣ ಭಟ್ಟ, ನಾಗರಾಜ ಘಟಪಣದಿ ಸೇರಿದಂತೆ ಅನೇಕರು ಇದ್ದರು.

ಬೈಕ ರ್ಯಾಲಿಯಲ್ಲಿ ನೂರಾರು ಯುವಕರು ನಗರದ ಶ್ರೀ ಪಟಗುಂದಿ ಮಾರುತಿ ದೇವಸ್ಥಾನದಿಂದ ಹೊರಟು, ನಗರದ ಪ್ರಮುಖ ಬೀದಿಗಳಲ್ಲಿ ಸಂಚಿರಿಸಿ ಜಾಗೃತಿ ಮೂಡಿಸಿದರು.

Related posts: