RNI NO. KARKAN/2006/27779|Wednesday, December 25, 2024
You are here: Home » breaking news » ಗೋಕಾಕ:ಪಶು ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ

ಗೋಕಾಕ:ಪಶು ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ 

ಪಶು ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 8 :

 

 
ಸಮೀಪದ ಅಕ್ಕತಂಗೇರಹಾಳ ಗ್ರಾಮದಲ್ಲಿ ಭೂಸೇನಾ ನಿಗಮದ ವತಿಯಿಂದ ಐ ಆರ್ ಡಿ ಪಿ ಯೋಜನೆ ಅಡಿಯಲ್ಲಿ ₹ 39 ಲಕ್ಷ ವೆಚ್ಚದಲ್ಲಿ ಮಂಜೂರಾದ ಪಶು ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭಾನುವಾರದಂದು ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು ಹಂತ ‌ಹಂತವಾಗಿ ಸಂಪೂರ್ಣ ಗೋಕಾಕ ಮತಕ್ಷೇತ್ರವನ್ನು ಅಬಿವೃದ್ದಿ ಮಾಡುವ ಸಂಕಲ್ಪ ಮಾಡಲಾಗಿದ್ದು ಮತಕ್ಷೇತ್ರದ ಜನರು ಪರಸ್ಪರ ಸಹಕಾರ ಅಭಿವೃದ್ಧಿಗೆ ಸಹಕರಿಸಬೇಕು ಅದಾಂಗ ಮಾತ್ರ ಅಭಿವೃದ್ಧಿಗೆ ಪೂರಕವಾಗಿದಂತಹ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಸಚಿವರು ಹೇಳಿದರು .
ಇದೇ ಸಂದರ್ಭದಲ್ಲಿ ನೂತನವಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾದ ಸಚಿವರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು

ಮುಖಂಡರಾದ ಬಸಪ್ಪ ಉರಬಿನಹಟ್ಟಿ, ಎಸ್.ಎನ್. ಡೋಣಿ, ರಾಜು ತಳವಾರ, ಭೀಮಗೌಡ ಪೋಲಿಸ್ ಗೌಡರ, ಶಿವಾನಂದ ಕರಲಿಂಗನ್ನವರ, ಬಿ.ಬಿ. ನಿರ್ವಾಣಿ, ಮುನ್ನಾ ದೇಸಾಯಿ, ಚನಗೌಡ ಪಾಟೀಲ, ಅಡಿವೆಪ್ಪ ನಾವಲಗಟ್ಟಿ, ಶೋಭಾ ನಾಯಿಕ, ಶಿವನಪ್ಪ ಕುಂದರಗಿ, ಸುನೀಲ ಮಾಸ್ತಿ, ವಿ.ಬಿ. ಈಶ್ವರಪ್ಪಗೋಳ, ಸಂಜು ಕರಲಿಂಗನ್ನವರ, ಡಾ.ಮೋಹನ ಕಮತ ,ಡಾ.ಅಶೋಕ ನಿರ್ವಾಣಿ .ಡಾ.ಸೈಯದ ಸನದಿ, ಇದ್ದರು. ರಾಜೇಂದ್ರ ಗೌಡಪ್ಪಗೋಳ ಸ್ವಾಗತಿಸಿದರು. ಸಿ.ಎನ್. ಬಡವನ್ನವರ ನಿರೂಪಿಸಿದರು. ಅಜಿತ ವಂದಿಸಿದರು.

Related posts: