ಗೋಕಾಕ:ಆರೋಗ್ಯವಂತ ಜೀವನ ನಡೆಸಲು ಉತ್ತಮ ಪರಿಸರದ ಅವಶ್ಯಕತೆ ಇದೆ : ಅಶೋಕ ಪಾಟೀಲ್
ಆರೋಗ್ಯವಂತ ಜೀವನ ನಡೆಸಲು ಉತ್ತಮ ಪರಿಸರದ ಅವಶ್ಯಕತೆ ಇದೆ : ಅಶೋಕ ಪಾಟೀಲ್
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಜೂ 13:
ಆರೋಗ್ಯವಂತ ಜೀವನ ನಡೆಸಲು ಉತ್ತಮ ಪರಿಸರದ ಅವಶ್ಯಕತೆ ಇದ್ದು , ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆಯ ಅಧ್ಯಕ್ಷ ಅಶೋಕ ಪಾಟೀಲ್ ಹೇಳಿದರು.
ಶನಿವಾರದಂದು ಘಟಪ್ರಭಾ ಸಕ್ಕರೆ ಕಾರಖಾನೆಯ ಆವರಣದಲ್ಲಿ ಕಾರಖಾನೆಯಿಂದ ಹಮ್ಮಿಕೊಂಡ ವನಮೋಹತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮತನಾಡುತ್ತಾ ಜೀವಿಗಳು ಬದುಕಲು ಪರಿಸರ ಅತಿ ಮಹತ್ತರ ಪಾತ್ರ ವಹಿಸುತ್ತದೆ. ಅರಣ್ಯ ನಾಶದಿಂದ ಪರಿಸರ ಮಾಲಿನ್ಯಗೊಂಡು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಇವುಗಳಿಂದ ಪಾರಾಗಲು ಪರಿಸರ ರಕ್ಷಣೆ ಮಾಡಬೇಕು . ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿ ಸಸಿಗಳನ್ನು ನೆಡುವ ಮೂಲಕ ಅರಣ್ಯವನ್ನು ಬೆಳೆಸಿ ಪರಿಸರ ರಕ್ಷಣೆ ಮಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾರಖಾನೆಯ ಉಪಾಧ್ಯಕ್ಷ ರಾಮಣ್ಣ ಮಹಾರೆಡ್ಡಿ, ನಿರ್ದೇಶಕರುಗಳಾದ ಎಂ.ಆರ್.ಬೋವಿ, ಕೆಂಚಗೌಡ ಪಾಟೀಲ, ಕೃಷ್ಣಪ್ಪ ಬಂಡ್ರೋಳಿ, ಲಕ್ಷ್ಮಣ ಗಣಪ್ಪಗೋಳ , ಗಿರೀಶ ಹಳ್ಳೂರ , ಬೂತಪ್ಪ ಗುಡೆರ , ಶಿವಲಿಂಗಪ್ಪ ಪೂಜೇರಿ, ಮಲ್ಲಿಕಾರ್ಜುನ ಕಬ್ಬುರ , ಮಲ್ಲಪ್ಪ ಜಾಗನೂರ , ಯಲವ್ವ ಸಾರಾಪೂರ , ಲಕ್ಕವ್ವ ಬೆಳಗಲಿ , ಕಾರಖಾನೆಯ ಅಧಿಕಾರಿ ಜಿ.ಆರ್.ಬಬಲೇಶ್ವರ ಸೇರಿದಂತೆ ಅನೇಕರು ಇದ್ದರು.