ಗೋಕಾಕ:ಜೆಸಿಐ ಸಂಸ್ಥೆ ಜಗತ್ತಿನಾದ್ಯಂತ ಸಮಾಜಮುಖಿ ಕಾರ್ಯ ಮಾಡುತ್ತಿದೆ : ವಿನಾಯಕ ಅರಮನೆ
ಜೆಸಿಐ ಸಂಸ್ಥೆ ಜಗತ್ತಿನಾದ್ಯಂತ ಸಮಾಜಮುಖಿ ಕಾರ್ಯ ಮಾಡುತ್ತಿದೆ : ವಿನಾಯಕ ಅರಮನೆ
ಅಭಿವೃದ್ಧಿ ಹಾಗೂ ನೈತಿಕತೆಯ ಮೂಲ ತತ್ವದಡಿ ಜೆಸಿಐ ಸಂಸ್ಥೆ ಜಗತ್ತಿನಾದ್ಯಂತ ಸಮಾಜಮುಖಿ ಕಾರ್ಯ ಮಾಡುತ್ತಿದೆ ಎಂದು ಜೆಸಿಐ ವಲಯ ಅಧ್ಯಕ್ಷ ವಿನಾಯಕ ಅರಮನೆ ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತಭಂಡಾರ ಸಭಾಭವನದಲ್ಲಿ ಜೆಸಿಐ ಸಂಸ್ಥೆಯ ನೂತನ ಘಟಕ ಉದ್ಘಾಟನೆ ಹಾಗೂ ಸೇವಾ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವ್ಯಕ್ತಿಯ ವಿಕಸನದಲ್ಲಿ ಸಮಾಜದ ಪಾತ್ರ ಮಹತ್ವದ್ದಾಗಿದ್ದು ನಾವೆಲ್ಲ ಸಮಾಜದ ಋಣ ತೀರಿಸುವಂಥ ಕಾರ್ಯ ಮಾಡಬೇಕು, ಸಮಾಜಮುಖಿ ಕಾರ್ಯ ಮಾಡಲು ಜೆಸಿಐ ಸಂಸ್ಥೆಯಲ್ಲಿ ಹೆಚ್ಚಿನ ಅವಕಾಶಗಳಿವೆ. ಈ ನೂತನ ಘಟಕ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮಾತನಾಡಿ ಇಂದು ಮಕ್ಕಳನ್ನು ಬುದ್ಧಿವಂತರನ್ನಾಗಿಸುವದರ ಜೊತೆಗೆ ಹೃದಯವಂತರನ್ನಾಗಿ ಮಾಡಬೇಕಿದೆ. ದೇಶಕ್ಕೆ ಮೌಲ್ಯಯುತ ಮಕ್ಕಳ ಅವಶ್ಯಕತೆ ಇದ್ದು ಅಂತಹ ಮಕ್ಕಳನ್ನು ರೂಪಿಸುವ ಕಾರ್ಯದಲ್ಲಿ ಸಂಘ-ಸಂಸ್ಥೆಗಳು ಸಹಕಾರ ನೀಡುವಂತೆ ಕೋರಿದರು.
ಅಧ್ಯಕ್ಷತೆಯನ್ನು ಶಿಗ್ಗಾಂವದ ಜೆಸಿಐ ಅಧ್ಯಕ್ಷ ಗುರುರಾಜ ಹುಚ್ಚನವರ ವಹಿಸಿದ್ದರು.
ವೇದಿಕೆ ಮೇಲೆ ಜೆಸಿಐ ಸಂಸ್ಥೆಯ ರಾಷ್ಟ್ರೀಯ ಸಂಯೋಜಕಿ ಸವಿತಾ ರಮೇಶ, ವಲು ಉಪಾಧ್ಯಕ್ಷ ಸಂತೋಷಕುಮಾರ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸುನೀಲ ಹೊನವಾಡ, ಗೋಕಾಕದ ನೂತನ ಘಟಕದ ಅಧ್ಯಕ್ಷ ವಿಜಯಕುಮಾರ ಖಾರೇಪಾಟಣ, ಕಾರ್ಯದರ್ಶಿ ರಾಮಚಂದ್ರ ಕಾಕಡೆ, ಮಹಿಳಾ ಘಟಕದ ಅಧ್ಯಕ್ಷೆ ಸಾಧನಾ ಖಾರೇಪಾಟಣ, ಕಾರ್ಯದರ್ಶಿ ಸರೋಜಾ ಕಾಕಡೆ, ಯುವ ಜೆಸಿಐ ಅಧ್ಯಕ್ಷ ಋಷಿಕೇಶ ಹಂದಿಗುಂದ, ಶಿಗ್ಗಾಂವದ ಜೆಸಿಐ ಪದಾಧಿಕಾರಿಗಳಾದ ಎಸ್.ಎಸಫ್.ಜಂಗ್ಲೆಪ್ಪನವರ, ಡಿ.ಆರ್.ತೋಟಗೇರ, ಹರೀಷ ಬಂಡಿವಡ್ಡರ, ಪ್ರವೀಣ ಪಾಟೀಲ, ಮಂಜುನಾಥ ಬುರ್ಸಾಪೂರ ಇದ್ದರು.
ಇದೇ ಸಂದರ್ಭದಲ್ಲಿ ನಗರದ ಬಸ್ ನಿಲ್ದಾಣದಲ್ಲಿ ಜೆಸಿಐ ಸಂಸ್ಥೆಯಿಂದ ಅಳವಡಿಸಲಾದ ಸಿಸಿ ಕ್ಯಾಮರಾಗಳನ್ನು ಉದ್ಘಾಟಿಸಲಾಯಿತು. ಅಲ್ಲದೆ ರಕ್ತದಾನ ಶಿಬಿರ ನಡೆಸಿ ಜೆಸಿಐ ಸದಸ್ಯರು ರಕ್ತದಾನ ಮಾಡಿದರು.
ಜಿ.ಆರ್.ನಿಡೋಣಿ ಸ್ವಾಗತಿಸಿದರು. ಧನ್ಯಕುಮಾರ ಕಿತ್ತೂರ ನಿರೂಪಿಸಿದರು. ಮಹಾವೀರ ಖಾರೇಪಾಟಣ ವಂದಿಸಿದರು.