ಗೋಕಾಕ:ಮಾಸ್ಕ ದಿನಾಚರಣೆ ನಿಮಿತ್ತ ನಗರದಲ್ಲಿ ತಾಲೂಕಾ ಆಡಳಿತದಿಂದ ಮಾಸ್ಕ ವಿತರಿಸಿ ಜಾಗೃತಿ
ಮಾಸ್ಕ ದಿನಾಚರಣೆ ನಿಮಿತ್ತ ನಗರದಲ್ಲಿ ತಾಲೂಕಾ ಆಡಳಿತದಿಂದ ಮಾಸ್ಕ ವಿತರಿಸಿ ಜಾಗೃತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 18 :
ಮಾಸ್ಕ ದಿನಾಚರಣೆ ನಿಮಿತ್ತ ನಗರದಲ್ಲಿ ತಾಲೂಕಾ ಆಡಳಿತದಿಂದ ಜಾಗೃತಿ ಜಾಥಾವನ್ನು ಗುರುವಾರದಂದು ಹಮ್ಮಿಕೊಳ್ಳಲಾಯಿತು.
ಮಿನಿ ವಿಧಾನಸೌಧದಿಂದ ಹೊರಟ ಜಾಥಾವು ಮಾಸ್ಕ ಧರಿಸಿ ಕೊರೋನಾ ಓಡಿಸಿ ಎಂಬ ಘೋಷಣೆಯೊಂದಿಗೆ ಬಸವೇಶ್ವರ ವೃತ್ತಕ್ಕೆ ತಲುಪಿ ಅಲ್ಲಿ ಮಾಸ್ಕ ಧರಿಸದ ಸಾರ್ವಜನಿಕರಿಗೆ ಮಾಸ್ಕ ಹಾಗೂ ಸೈನಿಟೈಜರ ವಿತರಿಸಲಾಯಿತು .
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಕೊರೋನಾ ವೈರಸ್ ರೋಗ ಹರಡದಂತೆ ತಡೆಯಲು ಎಲ್ಲರು ಮಾಸ್ಕ ಧರಿಸಿ ಸಾಮಾಜಿಕ ಅಂತರದೊಂದಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಜನರಲ್ಲಿ ಜಾಗೃತಿ ಮೂಡಿಸಲು ಸಂಘ ಸಂಸ್ಥೆಗಳು , ಎಲ್ಲ ಸರಕಾರದ ಇಲಾಖೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಎಲ್ಲರು ಸರಕಾರದ ನಿರ್ದೇಶನಗಳನ್ನು ಪಾಲಿಸಿ ಕೊರೋನಾ ವೈರಸನ್ನು ಸಂಪೂರ್ಣವಾಗಿ ಓಡಿಸಲು ಸಹಕರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ , ನಗರಸಭೆಯ ಎಂ.ಎಚ್.ಗಜಾಕೋಶ , ಆರೋಗ್ಯ ಇಲಾಖೆಯ ಆರ್.ಜಿ.ಬಸ್ಸಾಪೂರ , ಪಿಎಸ್ಐಗಳಾದ ಎಸ್.ಆರ್.ಕಿಲಾರೆ , ಎ.ಟಿ ಅಮ್ಮಿನಬಾಂವಿ, ಪಶು ಪಾಲನಾ ಇಲಾಖೆಯ ಡಾ.ಮೋಹನ ಕಮತ, ರೋಟರಿ ಸಂಸ್ಥೆಯ ಅಧ್ಯಕ್ಷ ಸೋಮಶೇಖರ್ ಮಗದುಮ್ಮ ಸೇರಿದಂತೆ ಅನೇಕರು ಇದ್ದರು.