ಬೆಳಗಾವಿ:ಪಿಓಪಿ ಮತ್ತು ಮಣ್ಣಿಗೆ ಗುಡ್ ಬಾಯ್ ಕುಂದಾನಗರಿಯಲೋಂದು ಡಿಪರೆಂಟ್ ಗಣಪ
ಪಿಓಪಿ ಮತ್ತು ಮಣ್ಣಿಗೆ ಗುಡ್ ಬಾಯ್ ಕುಂದಾನಗರಿಯಲೋಂದು ಡಿಪರೆಂಟ್ ಗಣಪ
ಬೆಳಗಾವಿ ಅ 25: ಕುಂದಾನಗರಿ ಬೆಳಗಾವಿಯಲ್ಲಿ ಗಣೇಶನನ್ನು ಬರಮಾಡಿಕೋಳ್ಳಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ ವಿಶೇಷ ವೆಂದರೆ ಬೆಳಗಾವಿ ಜನತೆ ಗೌರಿ ಗಣೇಶನ ಹಬ್ಬವನ್ನು ಅತ್ಯಂತ ವಿಜ್ರಂಭನೆಯಿಂದ ಆಚರಿಸುತ್ತಾರೆ
ಅದರಲ್ಲೂ ಸಾರ್ವಜನಿಕ ಗಣೇಶನ ಮಂಡಳಿಗಳು ಪ್ರತಿ ವರ್ಷ ವಿಭಿನ್ನ ಮತ್ತು ವಿಶೇಷ ಗಣೇಶ ಕೂರಿಸಿ ಎಲ್ಲರ ಗಮನ ಸೆಳೆಯಲು ಪೈಪೋಟಿ ಮಾಡುತ್ತಾರೆ. ಈ ಬಾರಿ ಪಿಒಪಿ ಗಣಪ ಬ್ಯಾನ್ ಮಾಡಲಾಗಿದೆ. ಹೀಗಾಗಿ ಬೆಳಗಾವಿಯ ಸದಾಶಿವನಗರದಲ್ಲಿರುವ ಶ್ರೀಸಿದ್ದಿ ವಿನಾಯಕ ಗಣೇಶ ಉತ್ಸವ ಮಂಡಳಿ ವತಿಯಿಂದ ಕೆರೆ, ನದಿ, ಹಳ್ಳ, ಜಲಪಾತದ ದಡದಲ್ಲಿ ಬೆಳೆದ ಪಾಚಿಯಿಂದ ಗಣಪತಿಯನ್ನು ಮಾಡಲಾಗಿದೆ.
ಈ ಬಾರಿ ಬೆಳಗಾವಿಯಲ್ಲಿಯೇ ವಿಶೇಷ ಗಣಪ ಇದಾಗಿದ್ದು ಇತ್ತ ಪಿಒಪಿ ಗಣಪನೂ ಅಲ್ಲ ಅತ್ತ ಮಣ್ಣಿನ ಗಣಪತಿನೂ ಅಲ್ಲದ ಸಂಪೂರ್ಣ ಪಾಚಿಯಿಂದ ತಯಾರಿಸಿದ ಗಣಪ ಇದಾಗಿದೆ. ಒಡಿಶಾದಿಂದ ಆಗಮಿಸಿದ ಪ್ರಭು ಪಟ್ನಾಯಕ್ ಎಂಬ ಕಲಾವಿದನ ಕೈಯಲ್ಲಿ ಅರಳಿದ ಗಣಪ ಸುಮಾರು 13 ಅಡಿ ಎತ್ತರವಿದ್ದು, ಸುಮಾರು 15 ಕೆಜಿಯಷ್ಟು ಪಾಚಿಯಿಂದ ಗಣಪನನ್ನು ತಯಾರು ಮಾಡಲಾಗಿದೆ. ಇನ್ನು ಕಳೆದ 20 ದಿನಗಳ ಸತತ ಪ್ರಯತ್ನದಿಂದ ಪಾಚಿ ಗಣಪ ನೋಡುಗರಿಗೆ ತಯಾರಾಗಿದೆ.
ಇನ್ನು ಈ ಸಿದ್ದಿವಿನಾಯಕ ಮಂಡಳಿ ವತಿಯಿಂದ ಪ್ರತಿವರ್ಷ ವಿಶೇಷ ವಿಭಿನ್ನ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಕಳೆದ ವರ್ಷ ಮರಳಿನಿಂದ ಗಣಪತಿಯನ್ನು ಮಾಡಲಾಗಿತ್ತು. ಈ ಬಾರಿ ಪಾಚಿಯಿಂದ ಗಣಪತಿ ಮಾಡಿ ವಿಶೇಷ ಗಮನ ಸೆಳೆದಿದೆ.
ಈ ಪಾಚಿಯನ್ನು ಸುಮಾರು 15 ದಿನಗಳ ಮುಂಚೆಯೇ ಶೋಧಿಸಿ ತರಲಾಗಿದ್ದು, ಬೆಳಗಾವಿಯ ಖಾನಾಪೂರ ತಾಲೂಕಿನ ಜಾಂಬೋಟಿಯಿಂದ ಪಾಚಿ ತರಲಾಗಿದೆ. ಒಟ್ಟಿನಲ್ಲಿ ಪರಿಸರ ಹಿತದೃಷ್ಟಿಯಿಂದ ಪಿಒಪಿ ಗಣಪ ಬ್ಯಾನ್ ಮಾಡಲು ಮುಂದಾದ ಸರ್ಕಾರದ ನಿರ್ಧಾರದಿಂದಾಗಿ ಮಣ್ಣಿನ ಹಾಗೂ ಪಾಚಿಯಿಂದ ಮಾಡಿದ ಗಣಪತಿ ನಿರ್ಮಾಣವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ