ಗೋಕಾಕ:ವಿವಿಧ ಸಂಘ ಸಂಸ್ಥೆಗಳಿಂದ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಸತ್ಕಾರ
ವಿವಿಧ ಸಂಘ ಸಂಸ್ಥೆಗಳಿಂದ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಸತ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 24 :
ಇಲ್ಲಿಯ ಶೂನ್ಯ ಸಂಪಾದನ ಮಡದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟು ಹಬ್ಬದ ನಿಮಿತ್ತ ನಗರದ ಲಿಂಗಾಯತ ಜಾಗೃತ ಮಹಿಳಾ ವೇದಿಕೆ , ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ , ವಚನ ಸಾಹಿತ್ಯ ಚಿಂತನ ,ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀಗಳಿಗೆ ಸತ್ಕರಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಇಡೀ ದೇಶಕ್ಕೆ ಎದುರಾಗಿರುವ ಕೊರೋನಾ ಮಹಾಮಾರಿ ವೈರಸನ್ನು ಹೊಡೆದೊಡಿಸಲು ಸರಕಾರ ಮತ್ತು ಸ್ಥಳೀಯ ಆಡಳಿತದದೊಂದಿಗೆ ಪ್ರತಿಯೊಬ್ಬರು ಸರಕರಿಸಿ ಸರಕಾರ ರೂಪಿಸಿದ ನಿಯಮಗಳನ್ನು ಪಾಲಿಸಿ ಕೊರೋನಾ ವಾರಿರ್ಯಸ್ಸ ಕೈ ಬಲಪಡಿಸಿ ವೈರಸ್ ಹರಡದಂತೆ ಜಾಗೃತಿ ವಹಿಸಬೇಕೆಂದು ಹೇಳಿದರು
ಇದೇ ಸಂದರ್ಭದಲ್ಲಿ ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಹೋರಾಡಿದ ಕೊರೋನಾ ವಾರಿಯರ್ಸ್ ಅವರಿಗೆ ಶ್ರೀಮಠದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಮಲ್ಲಿಕಾರ್ಜುನ ಈಟಿ, ಬಸನಗೌಡಾ ಪಾಟೀಲ, ಡಾ.ಸಿ.ಕೆ ನಾವಲಗಿ, ವಿವೇಕ ಜತ್ತಿ , ಮೈಲಾರಲಿಂಗ ಉಪ್ಪಿನ , ಎಸ್.ಎಸ್.ಅಂಗಡಿ , ಎಸ್.ಕೆ ಮಠದ , ಎಂ.ಐ ಉಪ್ಪಿನ ಸೇರಿದಂತೆ ಇತರರು ಇದ್ದರು .