ಬೆಳಗಾವಿ:ಗಣಪತಿ ಹೋತು ಭಾವೈಕ್ಯೆತೆ ಮೇರೆದ ಮುಸ್ಲಿಂ ಪೊಲೀಸ್ ಅಧಿಕಾರಿ
ಗಣಪತಿ ಹೋತು ಭಾವೈಕ್ಯೆತೆ ಮೇರೆದ ಮುಸ್ಲಿಂ ಪೊಲೀಸ್ ಅಧಿಕಾರಿ
ಬೆಳಗಾವಿ ಅ 25: ಧರ್ಮಸಹಿಷ್ಣುತೆಯ ಧ್ಯೋತಕವಾಗಿ ಗೌರಿ ಗಣೇಶ ಹಬ್ಬವನ್ನು ಆಚರಿಸಿ ಇಲ್ಲಿನ ಎಪಿಎಂಸಿ ಇನ್ಸಪೆಕ್ಟರ್ ಜೆ. ಎಂ. ಕಾಲಿಮಿರ್ಚಿ ಸೌಹಾರ್ಧತೆಯ ಪಾಠ ನಮ್ಮೆಲ್ಲರಿಗೆ ಇಂದು ನೀಡಿದ್ದಾರೆ. ಮುಸ್ಲಿಂ ಸಮುದಾಯದ ಈ ಅಧಿಕಾರಿ ಪ್ರತಿವರ್ಷದಂತೆ ನಡೆಯುವ ಗಣೇಶೋತ್ಸವದ ಅಂಗವಾಗಿ ಇಂದು ಗಣೇಶನನ್ನು ಠಾಣೆಗೆ ಸ್ವತಃ ಹೊತ್ತು ತಂದು ಪೂಜಿಸಿ ಭಕ್ತಿಭಾವ ಮೆರೆದಿದ್ದಾರೆ.
ಗಣೇಶ ಹಬ್ಬದ ಮೊದಲ ದಿನ ತೀರಾ ಸಹಜ ಹಿಂದೂ ಸಂಸ್ಕ್ರತಿಯಲ್ಲಿ ಕಂಡುಬಂದ ಇನ್ಸಪೆಕ್ಟರ್ ತಲೆಗೆ ನೆಹರೂ ಟೋಪಿ ಧರಿಸಿ, ಹಣೆಗೆ ಕುಂಕುಮ ಬಳಿದು ಅಮಿತ ಉತ್ಸಾಹ- ಆನಂದದಿಂದ ಗಣೇಶನನ್ನು ಕಚೇರಿಗೆ ಹೊತ್ತು ತಂದ ಸುದ್ದಿ ಈಗ ಎಲ್ಲೆಡೆ ಹರಡಿದ್ದು ನಗರ ಜನಮನದಲ್ಲಿ ಸಂತಸ ಉಕ್ಕಿದೆ.
ಕಳೆದ ವರ್ಷ ಇದೇ ಠಾಣೆಯಲ್ಲಿದ್ದ ಇನ್ಸಪೆಕ್ಟರ್ ಜೆ. ಎಂ. ಕಾಲಿಮಿರ್ಚಿ ಗಣೇಶನನ್ನು ಠಾಣೆಯಲ್ಲಿ ಸ್ಥಾಪಿಸಿ ಭಕ್ತಿ ಭಾವ ಮೆರೆದು ಜನತೆಗೆ ಮಹಾಪ್ರಸಾದ ಬಡಿಸಿದ್ದರು. ಮತ್ತೆ ಈ ಬಾರಿ ಗಣೇಶನನ್ನು ಎಂದಿನಂತೆ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದಲ್ಲದೇ ಸ್ವತಃ ಹೊತ್ತು ಬರಮಾಡಿ ಶೃದ್ಧೆ ಮೆರೆದದ್ದು ವಿಶೇಷತೆ ಮೂಡಿಸಿದೆ. ಇನ್ಸಪೆಕ್ಟರ್ ಕಾಲಿಮಿರ್ಚಿ ಮತ್ತು ಅವರ ಪೊಲೀಸ್ ತಂಡಕ್ಕೆ ಅನಂತ ಶುಭಾಶೀರ್ವಾದ ಮಾಡಲಿ ಎಂದು ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ