RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಸಾಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಲ್ಲಿ ಸಾಹಿತಿ ಮಹಾಲಿಂಗ ಮಂಗಿ ಅವರು ಸಫಲರಾಗಿದ್ದಾರೆ : ಪ್ರೋ ಚಂದ್ರಶೇಖರ್ ಅಕ್ಕಿ

ಗೋಕಾಕ:ಸಾಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಲ್ಲಿ ಸಾಹಿತಿ ಮಹಾಲಿಂಗ ಮಂಗಿ ಅವರು ಸಫಲರಾಗಿದ್ದಾರೆ : ಪ್ರೋ ಚಂದ್ರಶೇಖರ್ ಅಕ್ಕಿ 

ಸಾಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಲ್ಲಿ ಸಾಹಿತಿ ಮಹಾಲಿಂಗ ಮಂಗಿ ಅವರು ಸಫಲರಾಗಿದ್ದಾರೆ : ಪ್ರೋ ಚಂದ್ರಶೇಖರ್ ಅಕ್ಕಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 3 :

 

 

ವೈಯಕ್ತಿಕ ವಿಚಾರಗಳನ್ನು ಸಾರ್ವತ್ರಿಕ ವಿಚಾರಗಳನ್ನಾಗಿಸಿ ಸಾಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಲ್ಲಿ ಸಾಹಿತಿ ಮಹಾಲಿಂಗ ಮಂಗಿ ಅವರು ಸಫಲರಾಗಿದ್ದಾರೆ ಎಂದು ಪ್ರೋ ಚಂದ್ರಶೇಖರ್ ಅಕ್ಕಿ ಹೇಳಿದರು.
ಗುರುವಾರದಂದು ಸಾಯಂಕಾಲ ಇಲ್ಲಿಯ ವಿವೇಕಾನಂದ ನಗರದ ಜೆ.ಸಿ.ಐ ಸಭಾಂಗಣದಲ್ಲಿ ತಡಲಸ ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ ಹಾಗೂ ಚುಟುಕು ಸಾಹಿತ್ಯ ಪರಿಷತ್ತು ನವರು 8 ನೇ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡ ವನಮೋಹತ್ಸವ ಹಾಗೂ ಸಾಹಿತಿ ಮಹಾಲಿಂಗ ಮಂಗಿ ಅವರ ಪತ್ನಿ ದಿ. ವಿಜಯಲಕ್ಷ್ಮಿ ಮಂಗಿ ಅವರ ಕುರಿತು ರಚಿಸಿದ ” ಚಿರಸ್ಮರಣೆ” ಸ್ಮೃತಿ ಕಾವ್ಯದ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಪುರುಷನ ಸಾಧನೆಯ ಹಿಂದೆ ಮಹಿಳೆಯ ಪಾತ್ರ ಮಹತ್ವದಾಗಿದ್ದು, ಅಂತಹ ಸ್ಪೂರ್ತಿಯಿಂದ ಮಂಗಿ ಅವರು ಸಾಹಿತಿಯಾಗಿ ಹಲವಾರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಮಹಿಳೆಯ ನಿಸ್ವಾರ್ಥ ಹಾಗೂ ತ್ಯಾಗದ ಬದುಕನ್ನು ಗುರುತಿಸಿ ಗೌರವಿಸಿ , ಪ್ರೀತಿಯಿಂದ ಕಾಣುವಂತಹ ಸಂದೇಶವನ್ನು ನೀಡುವಲ್ಲಿ ಮಂಗಿ ಅವರು ಸಫಲರಾಗಿದ್ದಾರೆ. ದಾಂಪತ್ಯದ ಸಾರ್ಥಕತೆಯನ್ನು ವಿವರಿಸುತ್ತಾ ಸತಿ ಪತಿಗಳು ಬದುಕಿನಲ್ಲಿ ಕಣಕ ಹಾಗೂ ಊರಣವಾಗಿ ಸಿಹಿಯಾದ ಹೊಳಿಗೆಯಾಗಿ ದಾಂಪತ್ಯ ಜೀವನವನ್ನು ಸಾರ್ಥಕತೆ ಪಡೆಸಿಕೊಳ್ಳುವದನ್ನು ನೈಜವಾಗಿ ವಿವರಿಸಿದ್ದಾರೆ ಎಂದು ತಿಳಿಸಿದರು.

ಕಾವ್ಯವನ್ನು ಗುರುಮಾತೆ ಲಕ್ಷ್ಮೀ ಮಂಗಿ ಲೋಕಾರ್ಪಣೆ ಮಾಡಿದರು , ಕೃತಿ ಕುರಿತು ಭಾರತಿ ಮದಬಾವಿ ಹಾಗೂ ವಿಜಯಲಕ್ಷ್ಮೀ ಮಂಗಿ ಕುರಿತು ರಜನಿ ಜಿರಗ್ಯಾಳ ಮಾತನಾಡಿದರು.
ವೇದಿಕೆಯ ಮೇಲೆ ಮಹಾಂತೇಶ ತಾಂವಶಿ, ಬಸವರಾಜ ಮುರಗೋಡ, ಶಕುಂತಲಾ ದಂಡಿಗಿ , ವಿಷ್ಣು ಲಾತೂರ ಹಾಗೂ ಲೇಖಕ ಮಹಾಲಿಂಗ ಮಂಗಿ ಇದ್ದರು.
ರಾಜಶ್ರೀ ವಡೆಯರ ಸ್ವಾಗತಿಸಿದರು. ಸಂಗೀತಾ ಬನ್ನೂರ ನಿರೂಪಿಸಿದರು.ರಾಮಜೀ ಜೀಂಗಿ ವಂದಿಸಿದರು

Related posts: