ಗೋಕಾಕ:ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ 886ನೇ ಜಯಂತಿ ಆಚರಣೆ
ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ 886ನೇ ಜಯಂತಿ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 7 :
12ನೇ ಶತಮಾನದ ಮಹಾನ್ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ 886ನೇ ಜಯಂತಿಯನ್ನು ತಹಶೀಲದಾರ ಕಾರ್ಯಾಲಯದಲ್ಲಿ ಕೊರೋನಾ ಹಿನ್ನಲೆಯಲ್ಲಿ ಸರಳ ರೀತಿಯಲ್ಲಿ ಮಂಗಳವಾರದಂದು ಆಚರಿಸಲಾಯಿತು.
ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಣ್ಣನವರ ಜೊತೆಗಿನ ಶಿವಶರಣರನ್ನು ಸ್ಮರಿಸಿದರಲ್ಲದೆ ಸದ್ಯ ದೇಶದಾದ್ಯಂತ ಕೊರೋನಾ ವೈರಸ್ ಬಗ್ಗೆ ಪ್ರಸ್ತಾಪಿಸಿ ಮುಂಜಾಗ್ರತೆಗಾಗಿ ಸರಕಾರ ನೀಡಿರುವ ನಿರ್ದೇಶನಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಗ್ರೇಡ್-2 ತಹಶೀಲದಾರ ಎಸ್.ಬಿ.ಕಟ್ಟಿಮನಿ, ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸಮಾಜದ ಗೌರವಾಧ್ಯಕ್ಷ ಶಿವಾನಂದ ಹಡಪದ, ತಾಲೂಕಾಧ್ಯಕ್ಷ ಪ್ರಭುದೇವ ಹಡಪದ, ಕಾರ್ಯದರ್ಶಿ ಶಿವಾನಂದ ಕಟ್ಟೀಮನಿ, ಖಜಾಂಚಿ ಲಕ್ಷ್ಮಣ ಹಡಪದ, ದುಂಡಪ್ಪ ನಾವಿ, ಮಲ್ಲಿಕಾರ್ಜುನ ನಾವಿ, ಸಿದ್ಧಾರೂಢ ನಾವಿ, ಈಶ್ವರ ಮಮದಾಪೂರ, ಉಪತಹಶೀಲದಾರ ವೈ.ಎಲ್.ಡಬ್ಬನವರ, ಶಿರಸ್ತೇದಾರ ಎಸ್.ಬಿ.ಕಟ್ಟೀಮನಿ, ಕಂದಾಯ ನಿರೀಕ್ಷಕ ಎಸ್.ಎನ್.ಹಿರೇಮಠ, ರಾಜ್ಯ ಸರಕಾರಿ ನೌಕರರ ಸಂಘದ ಎಸ್.ಕೆ.ಕೃಷ್ಣಕುಮಾರ ಸೇರಿದಂತೆ ಶ್ರೀ ಹಡಪದ ಅಪ್ಪಣ್ಣ ಸಮಾಜದ ಅನೇಕರು ಇದ್ದರು.